ಹೊಸದಿಲ್ಲಿ: ವಿಜಯ ಹಜಾರೆ ಏಕದಿನ ಕ್ರಿಕೆಟ್ ಟ್ರೋಫಿಯಲ್ಲಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಅವರ ಆಲ್ರೌಂಡ್ ಪ್ರದರ್ಶನದಿಂದ ಪಂಜಾಬ್ ತಂಡ ರೈಲ್ವೇಸ್ ವಿರುದ್ಧ 3 ವಿಕೆಟ್ಗಳ ಜಯ ದಾಖಲಿಸಿದೆ.
ರೈಲ್ವೇಸ್ ಮೊದಲು ಬ್ಯಾಟಿಂಗ್ ನಡೆಸಿ 246 ರನ್ ಬಾರಿಸಿದ್ದು, ಗುರಿ ಬೆನ್ನತ್ತಿದ ಪಂಜಾಬ್ 7 ವಿಕೆಟ್ ಕಳೆದುಕೊಂಡು 247 ರನ್ ಬಾರಿಸಿತು. 66 ಎಸೆತ ಎದುರಿಸಿದ ಯುವಿ 1 ಸಿಕ್ಸರ್, 6 ಬೌಂಡರಿ ಚಚ್ಚಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಬೌಲಿಂಗ್ನಲ್ಲೂ ಕೂಡ ಅರಿಂಧಮ್ ಘೋಷ್ ಮತ್ತು ಗೌರವ್ ಖತ್ರಿ ಅವರ ವಿಕೆಟ್ ಪಡೆದು ಯುವಿ ಮಿಂಚಿದ್ದರು.
ಸ್ಕೋರ್:
ರೈಲ್ವೇಸ್ 50 ಓವರ್ಗಳಲ್ಲಿ 9 ವಿಕೆಟಿಗೆ 246 (ಅರಿಂಧಮ್ ಘೋಷ್ 83, ಪ್ರಥಮ್ ಸಿಂಗ್ 41, ಯುವರಾಜ್ 32ಕ್ಕೆ 2), ಪಂಜಾಬ್ 49.1 ಓವರ್ಗಳಲ್ಲಿ 7 ವಿಕೆಟಿಗೆ 247 (ಗುರುಕೀರತ್ ಸಿಂಗ್ 69, ಯುವರಾಜ್ 66, ಯಾದವ್ 41ಕ್ಕೆ 3).