ಬೆಂಗಳೂರು: ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ರೋಚಕ ಗೆಲುವನ್ನು ದಾಖಲಿಸಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕ್ರೀಡಾ ಸ್ಫೂರ್ತಿ ಮರೆತ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ ಗೆ ಗುಣ ಪಾಠ ಮಾಡಿದ್ದಾರೆ.
ಸ್ಟೀವ್ ಸ್ಮಿತ್ 22ನೇ ಓವರ್ ನಲ್ಲಿ ಉಮೇಶ್ ಯಾದವ್ ರ ಬೌಲಿಂಗ್ ನಲ್ಲಿ ಎಲ್ಬಿಡಬ್ಲ್ಯೂ ಆಗಿದ್ದು, ಅಂಪೈರ್ ಔಟ್ ಎಂದು ತೀರ್ಪು ನೀಡಿದ್ದರು. ಈ ಸಂದರ್ಭ ಅಂಪೈರ್ ತೀರ್ಪಿಗೆ ಮೇಲ್ಮನವಿ ಸಲ್ಲಿಸಲು ಬಯಸಿದ್ದ ಸ್ಮಿತ್ ಮತ್ತೊಂದು ತುದಿಯಲ್ಲಿದ್ದ ಪೀಟರ್ ಹ್ಯಾಂಡ್ಸ್ ಕೂಂಬ್ ರ ಅಭಿಪ್ರಾಯ ಕೇಳಿದರು. ಇದಕ್ಕೆ ಪೀಟರ್ ನಾಟೌಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಕೂಡಲೇ ತಮ್ಮ ಡ್ರೆಸ್ಸಿಂಗ್ ಕೊಠಡಿಯತ್ತ ಸಂಕೇತ ರವಾನಿಸಿದ ಸ್ಮಿತ್ ಅಲ್ಲಿಂದ ಅಭಿಪ್ರಾಯ ತಿಳಿಯಲು ಮುಂದಾಗಿದ್ದು, ಇದನ್ನು ಕಂಡು ಕೆರಳಿದ ಕೊಹ್ಲಿ ಮೈದಾನದಿಂದ ಹೊರನಡೆಯಲು ಸ್ಮಿತ್ ಗೆ ಸೂಚನೆ ನೀಡಿದರು.
ಅಂಪೈರ್ ಕೂಡ ಔಟ್ ಎಂದು ತೀರ್ಪು ನೀಡಿದ್ದು, ಸ್ಮಿತ್ ಇದರಿಂದ ನಿರಾಸೆಗೊಂಡು ಪೆವಿಲಿಯನ್ ಗೆ ಹೊರಟರು.