ಹೊಸದಿಲ್ಲಿ: ಭಾರತೀಯ ಸೇನೆಗೆ ಕಿರಿಯ ನಿಯೋಜಿತ ಅಧಿಕಾರಿಯಾಗಿ ವಿಶ್ವದಾಖಲೆ ವೀರ ನೀರಜ್ ಚೋಪ್ರಾ ಸೇರ್ಪಡೆಗೊಂಡಿದ್ದಾರೆ.
ರೈತಾಪಿ ಕುಟುಂಬದ ನೀರಜ್ ಕುಟುಂಬಕ್ಕೆ ಈ ಉದ್ಯೋಗ ಆರ್ಥಿಕವಾಗಿ ಚೇತರಿಕೆ ನೀಡಲಿದ್ದು, 19 ವರ್ಷದ ನೀರಜ್ ಜೂನಿಯರ್ ವಿಭಾಗದ ಜಾವೆಲಿನ್ ಥ್ರೋನಲ್ಲಿ ವಿಶ್ವದಾಖಲೆ ನಿರ್ಮಿಸಿದ್ದರು.
ಐಎಎಎಫ್ ವಿಶ್ವ ಚಾಂಪಿಯನ್ ಷಿಪ್ ಪೋಲೆಂಡ್ ನಲ್ಲಿ ನಡೆದ 20 ವಯೋಮಿತಿಯಲ್ಲಿ 86.48 ಮೀಟರ್ ಎಸೆಯುವ ಮೂಲಕ ಜೂನಿಯರ್ ಮಟ್ಟದಲ್ಲಿ ನೂತನ ವಿಶ್ವದಾಖಲೆಯನ್ನು ನೀರಜ್ ಮಾಡಿದ್ದರು.