ಮೂಡುಬಿದಿರೆ: ಬೆಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಟಿ-20 ಜಿಗಿಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯಾಟದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ ಯಂಗ್ ಲಯನ್ಸ್ ತಂಡ 20 ಓವರಿನಲ್ಲಿ 160 ರನ್ ಗಳನ್ನು ಗಳಿಸಿತು. ಇದಕ್ಕೆ ಉತ್ತರವಾಗಿ ಆಳ್ವಾಸ್ ಸ್ಪೋರ್ಟ್ಸ್ ಕ್ಲಬ್ ತಂಡ 4 ವಿಕೆಟ್ ನಷ್ಟಕ್ಕೆ 162 ರನ್ಗಳನ್ನು 17 ಓವರ್ ಗಳಲ್ಲಿ ಗಳಿಸಿ ಜಯ ಸಾಧಿಸಿತು. ಆಳ್ವಾಸ್ ತಂಡದ ಪರ ಲಾಲ್ ಸಚಿನ್ 83 ಓಟಗಳನ್ನು 36 ಬಾಲ್ ಗಳಲ್ಲಿ ಗಳಿಸಿದರು. ಹಾಗೂ ಭರತ್ ಧುರಿ 3 ವಿಕೆಟ್ ಹಾಗೂ ಪವನ್ ಗೋಖಲೆ 2 ವಿಕೆಟ್ಗಳನ್ನು ಗಳಿಸಿದರು. ಪಂದ್ಯಪುರುಷೋತ್ತಮನಾಗಿ ಲಾಲ್ ಸಚಿನ್ ಹಾಗೂ ಸರಣಿ ಶ್ರೇಷ್ಠನಾಗಿ ಭರತ್ ಧುರಿ ಪ್ರಶಸ್ತಿ ಗಳಿಸಿದರು. ವಿಜೇತ ತಂಡಕ್ಕೆ ಶಾಶ್ವತ ಫಲಕ ಹಾಗೂ 1 ಲಕ್ಷ ಬಹುಮಾನ ನೀಡಲಾಯಿತು.