ಮಪುಟೊ: 19 ವರ್ಷದ ಯುವ ಫುಟ್ಬಾಲ್ ಆಟಗಾರ ಎಸ್ಟೆವೊ ಆಲ್ಬೆರ್ಟೊ ಗಿನೊ ಆಫ್ರಿಕಾದ ಮಪುಟೊದಲ್ಲಿನ ಮೊಜಾಂಬಿಕ್ ನಲ್ಲಿ ಮೊಸಳೆಗೆ ಆಹಾರವಾದ ದುರ್ಘಟನೆ ನಡೆದಿದೆ.
ನದಿ ತೀರದಲ್ಲಿ ಸ್ಥಳೀಯ ಫುಟ್ಬಾಲ್ ಕ್ಲಬ್ ಟೂರ್ನಿಯೊಂದನ್ನು ಹಮ್ಮಿಕೊಂಡಿದ್ದು, ಕಳೆದ ಗುರುವಾರ ರಾತ್ರಿ ಜಾಗಿಂಗ್ ಮಾಡುತ್ತಿದ್ದ ವೇಳೆ ದಡದಲ್ಲಿದ್ದ ಮೊಸಳೆ ಏಕಾಏಕಿ ಗಿನೊ ಮೇಲೆ ದಾಳಿ ಮಾಡಿದೆ.
ಗಿನೊ ರಕ್ಷಣೆಗಾಗಿ ಅಂಗಲಾಚಿದರೂ ಮೊಸಳೆ ಆತನನ್ನು ನೀರಿನಲ್ಲಿ ಎಳೆದುಕೊಂಡು ಹೋಗಿದ್ದರಿಂದ ಇತರೆ ಆಟಗಾರರು ರಕ್ಷಣೆಗೆ ಧಾವಿಸಲು ಸಾಧ್ಯವಾಗಲಿಲ್ಲ ಎಂದು ಮೊಜಾಂಬಿಕನ್ ಕ್ಲಬ್ ಸದಸ್ಯರೊಬ್ಬರು ತಿಳಿಸಿದ್ದಾರೆ.