ಹೊಸದಿಲ್ಲಿ: 2019ರ ವಿಶ್ವಕಪ್ ನಲ್ಲಿ ಖಂಡಿತವಾಗಿಯೂ ಆಡುತ್ತೇನೆ ಎಂದು ಹೇಳುವ ಮೂಲಕ ಭಾರತ ತಂಡದ ಅತ್ಯಂತ ಯಶಸ್ವೀ ನಾಯಕ ಎಂಎಸ್ ಧೋನಿ ತಮ್ಮ ನಿವೃತ್ತಿ ವಿಚಾರದ ಬಗ್ಗೆ ಮೌನ ಮುರಿದಿದ್ದಾರೆ.
ಕ್ರಿಕೆಟ್ ಬದುಕಿಗೆ ಧೋನಿ ಶೀಘ್ರದಲ್ಲೇ ನಿವೃತ್ತಿ ನೀಡಲಿದ್ದಾರೆ ಎಂಬ ವದಂತಿಗಳು ಕೇಳಿಬರುತ್ತಿದ್ದು, ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಂಎಸ್ ಧೋನಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ತಮಗೆ ಯಾವುದೇ ಗಾಯಗಳಾಗದೇ ಫಿಟ್ ಆಗಿದ್ದರೆ ಕಂಡಿತವಾಗಿಯೂ 2019ರ ವಿಶ್ವಕಪ್ ನಲ್ಲಿ ಆಡುತ್ತೇನೆ ಎಂದು ಹೇಳಿದ್ದಾರೆ.
ಧೋನಿ ಈಗಾಗಲೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತರಾಗಿದ್ದು, ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ಹಾಗೂ ಟಿ20ಗೆ ವಿದಾಯ ಹೇಳಲಿದ್ದಾರೆ ಎಂಬ ವದಂತಿಗಳು ಕೇಳಿ ಬಂದಿತ್ತು.