ವೆಸ್ಟ್ ವ್ಯಾಂಕೋವರ್: ಭಾರತ ಮಹಿಳಾ ಹಾಕಿ ತಂಡವನ್ನು ಕೆನಡಾ ತಂಡವು ಮಹಿಳಾ ಹಾಕಿ ವಿಶ್ವ ಲೀಗ್ ನ ಎರಡನೇ ಸುತ್ತಿನ ಎರಡನೇ ಪಂದ್ಯದಲ್ಲಿ ೧-೩ ಅಂತರಲ್ಲಿ ಸೋಲಿಸಿದೆ.
ಕೆನಡದಾ ಆಟಗಾರ್ತಿ ನಿಕ್ಕಿ ವುಡ್ ಕ್ರಾಫ್ಟ್ ಪಂದ್ಯದ ಆರಂಭದ 8ನೇ ನಿಮಿಷದಲ್ಲಿಯೇ ಗೋಲು ಗಳಿಸಿ 1-೦ ಅಂತರ ಕಾಯ್ದುಕೊಳ್ಳುವುದಕ್ಕೆ ಕಾರಣರಾಗಿದ್ದು, 19 ನೇ ನಿಮಿಷದಲ್ಲಿ ನೊರ್ಲ್ಯಾಅಂಡರ್ ಗಳಿಸಿದ ಗೋಲಿನಿಂದ 2-೦ ಅಂತರ ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಯಿತು. ನಂತರ 34 ನೇ ನಿಮಿಷದಲ್ಲಿ ಭಾರತದ ಆಟಗಾರ್ತಿ ಗುರ್ಜಿತ್ ಕೌರ್ ಒಂದು ಗೋಲು ಗಳಿಸಿದ್ದು, ಕೆನಡಾ ಆಟಗಾರ್ತಿ ಕರ್ಲಿ ಜೋಹಾನ್ಸನ್ 49 ನೇ ನಿಮಿಷದಲ್ಲಿ ಗೋಲು ದಾಖಲಿಸುವ ಮೂಲಕ ಕೆನಡಾ 3-1 ಅಂತರದಿಂದ ಪಂದ್ಯ ಗೆಲ್ಲಲು ಸಾಧ್ಯವಾಯಿತು.
ಭಾರತ ತಂಡ ಉರುಗ್ವೆ ವಿರುದ್ಧ ಏಪ್ರಿಲ್ 1ರಂದು ಸೆಣಸಾಡಲಿದೆ.