ಹೊಸದಿಲ್ಲಿ: ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಬ್ರಾಡ್ ಹಾಡ್ಜ್ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿರುದ್ಧ ನೀಡಿದ್ದ ಹೇಳಿಕೆಗೆ ಕ್ಷಮೆ ಕೋರಿದ್ದಾರೆ. ಈ ಹಿನ್ನೆಲೆ ಮಾರ್ಚ್ 30 ಇನ್ನು ‘ವಿಶ್ವ ಕ್ಷಮಾಪಣಾ ದಿನ’ವಾಗಿ ನೆನಪಿನಲ್ಲಿ ಉಳಿಯುತ್ತದೆ ಎಂದು ಸ್ಪಿನ್ನರ್ ಆರ್.ಅಶ್ವಿನ್ ಟ್ವೀಟ್ ಮಾಡುವ ಮೂಲಕ ಪ್ರತಿಕ್ರಿಯಿಸಿದ್ದಾರೆ.
ವಿರಾಟ್ ಕೊಹ್ಲಿ ಗಾಯದ ಸಮಸ್ಯೆಯಿಂದ ಕೊನೆಯ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದರು. ಆದರೆ, ಮುಂದಿನ ಐಪಿಎಲ್ ಪಂದ್ಯಗಳಲ್ಲಿ ಭಾಗಿಯಾಗಲು ಕೊಹ್ಲಿ ಟೆಸ್ಟ್ ಪಂದ್ಯದಿಂದ ದೂರ ಉಳಿದಿದ್ದಾರೆ ಎಂದು ಬ್ರಾಡ್ ಹಾಡ್ಜ್ ಹೇಳಿದ್ದರು.
ಈ ಹಿನ್ನಲೆ ಭಾರತ ಕ್ರಿಕೆಟ್ ತಂಡ ಹಾಗೂ ಕೊಹ್ಲಿ ಅವರಲ್ಲಿ ಟ್ವಿಟರ್ ಮೂಲಕ ಹಾಡ್ಜ್ ಕ್ಷಮೆ ಕೋರಿದ್ದು, ‘ನಾನು ಲಘು ದಾಟಿಯಲ್ಲಿ ಪ್ರತಿಕ್ರಿಯೆ ನೀಡಿದ್ದೆ…’ ಎಂದಿದ್ದರು.
ಸ್ಪಿನ್ನರ್ ಆರ್.ಅಶ್ವಿನ್ ಇದಕ್ಕೆ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದು, ‘ಲಘು ದಾಟಿಯಲ್ಲಿ; ಈ ವರ್ಷದಿಂದ ಮಾರ್ಚ್ 30, ವಿಶ್ವ ಕ್ಷಮಾಪಣಾ ದಿನವಾಗಿ ನೆನಪಿನಲ್ಲಿ ಉಳಿಯುತ್ತದೆ’ ಎಂದು ಹೇಳಿದ್ದಾರೆ.