ಹೊಸದಿಲ್ಲಿ: ರಾಷ್ಟ್ರಪತಿ ಭವನದಲ್ಲಿ ಗುರುವಾರ ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಕನ್ನಡಿಗ ಯು.ಆರ್.ರಾವ್, ಎಂ.ಎಂ.ಜೋಶಿ, ಶರದ್ಪವಾರ್, ಲೋಕಸಭೆಯ ಮಾಜಿ ಸ್ಪೀಕರ್ ಪಿ.ಎ.ಸಂಗ್ಮಾ (ಮರಣೋತ್ತರ) ಅವರಿಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಪದ್ಮ ವಿಭೂಷಣ ಪ್ರಶಸ್ತಿ ಪ್ರದಾನ ಮಾಡಿದರು.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಅಂಧರ ಕ್ರಿಕೆಟ್ ತಂಡದ ಮಾಜಿ ನಾಯಕ ಕನ್ನಡಿಗ ಶೇಖರ ನಾಯ್ಕ್, ಬಾಲಿವುಡ್ ಗಾಯಕಿ ಅನುರಾಧಾ ಪುದುವಾಳ್, ಪ್ಯಾರಾಥ್ಲೀಟ್ ದೀಪಾ ಮಲಿಕ್, ನಿರಂಜನಾನಂದ ಸರಸ್ವತಿ, ಯೋಗ ಗುರು ಸ್ವಾಮಿ, ಭಾರತದ ಲ್ಯಾಪ್ರೋಸ್ಕೋಪಿಕ್ ಸರ್ಜರಿಯ ಪಿತಾಮಹ ತೆಹ್ಮಟನ್ ಇರಾಚ್ ಉಡ್ವಾಡಿ, ಥಾಯ್ ರಾಣಿ ಮಹಾಚಕ್ರಿ ಸಿರಿಂಧರ್ ಸೇರಿ 39 ಗಣ್ಯರಿಗೆ (4 ಪದ್ಮವಿಭೂಷಣ, 2 ಪದ್ಮಭೂಷಣ, 33 ಪದ್ಮಶ್ರೀ) ಪದ್ಮ ಪುರಸ್ಕಾರದ ಗೌರವ ನೀಡಲಾಗಿದೆ.
ಡಾ.ಭಾರತಿ ವಿಷ್ಣುವರ್ಧನ್, ಕರ್ನಾಟಕದ ಸುಕ್ರಿ ಬೊಮ್ಮಗೌಡ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.
89 ಗಣ್ಯರ ಹೆಸರು ಪದ್ಮ ಪುರಸ್ಕಾರಕ್ಕೆ ಜನವರಿ 25ರಂದು ಘೊಷಣೆಯಾಗಿದ್ದು, ಉಳಿದ ಗಣ್ಯರಿಗೆ ಏ.12ರಂದು ಪದ್ಮ ಪುರಸ್ಕಾರದ ಗೌರವ ನೀಡಲಾಗುತ್ತದೆ.