ರೋಹ್ಟಕ್: ರಿಯೋ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ, ಕುಸ್ತಿ ಪಟು ಸಾಕ್ಷಿ ಮಲ್ಲಿಕ್ ಕುಸ್ತಿ ಪಟು ಸತ್ಯವೃತ್ ಕಡಿಯಾನ್ ಜೊತೆ ದಾಂಪತ್ಯಜೀವನಕ್ಕೆ ಕಾಲಿಟ್ಟಿದ್ದಾರೆ.
ರೊಹ್ಟಕ್ ನ ನಂದಲ್ ಭವನದಲ್ಲಿ ಸಾಕ್ಷಿ ಮಲಿಕ್ ವಿವಾಹ ಸಮಾರಂಭ ನಡೆದಿದ್ದು ಹಲವಾರು ಗಣ್ಯರು, ಹಾಲಿ ಮಾಜಿ ಕ್ರೀಡಾಪಟುಗಳು ಆಗಮಿಸಿ ನೂತನ ವಧು-ವರರಿಗೆ ಶುಭ ಹಾರೈಸಿದರು. ಸತ್ಯವೃತ್ ಕೂಡ ಕುಸ್ತಿ ಪಟು ಆಗಿದ್ದು, 23 ವರ್ಷದ ಅವರು ಹರಿಯಾಣದ ರೋಹ್ಟಕ್ ಜಿಲ್ಲೆಯಲ್ಲಿ ಕುಸ್ತಿ ಶಾಲೆ ನಡೆಸುತ್ತಿದ್ದಾರೆ. ಅರ್ಜುನ್ ಪ್ರಶಸ್ತಿ ಪುರಸ್ಕೃತರಾಗಿರುವ ಸತ್ಯವಾನ್ ಅವರ ಮಗ ಸತ್ಯವೃತ್.
ಸಾಕ್ಷಿ ಮತ್ತು ಸತ್ಯವರ್ತ್ ಇಬ್ಬರೂ ರೋಹ್ಟಕ್ನವರೇ ಆಗಿದ್ದು, ಕಳೆದ ಅಕ್ಟೋಬರ್ನಲ್ಲಿ ನಿಶ್ಚಿತಾರ್ಥ ನೆರವೇರಿತ್ತು. ಸಾಕ್ಷಿ ಕುಸ್ತಿಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಪಟುವಾಗಿದ್ದಾರೆ. ಇನ್ನು, ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಸೈನಾ ನೆಹ್ವಾಲ್, ದೀಪಾ ಕರ್ಮಾಕರ್ ಸೇರಿದಂತೆ ಸಾಮಾಜಿಕ ಜಾಲತಾಣಗಳ ಮೂಲ ನೂತನ ಜೋಡಿಗೆ ಶುಭಕೋರಿದ್ದಾರೆ.