ಮೂಡುಬಿದಿರೆ: ಮಣಿಪಾಲದಲ್ಲಿ ನಡೆದ ಮಂಗಳೂರು ವಿಶ್ವವಿದ್ಯಾನಿಲಯ ಬಿ.ಸಿ. ಆಳ್ವ ಅಂತರ್ ವಲಯ ಕ್ರಿಕೆಟ್ ಪಂದ್ಯಾಟದಲ್ಲಿ ಆಳ್ವಾಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್ ಪಂದ್ಯಾಟದಲ್ಲಿ ಎಸ್.ಎಂ.ಎಸ್. ಬ್ರಹ್ಮಾವರ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿದ್ದು ನಿಗದಿತ 50 ಓವರ್ ಗಳಲ್ಲಿ 116 ರನ್ 7 ವಿಕೆಟ್ ನಷ್ಟಕ್ಕೆ ಬಾರಿಸಿತು. ಇದಕ್ಕೆ ಉತ್ತರವಾಗಿ ಆಳ್ವಾಸ್ ತಂಡವು 20.2 ಓವರ್ಗಳಲ್ಲಿ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಜಯವನ್ನು ಸಾಧಿಸಿತು. ಆಳ್ವಾಸ್ ತಂಡದ ರಾಹುಲ್ ಬೆಸ್ಟ್ ಬ್ಯಾಟ್ಸ್ಮ್ಯಾನ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಎಸ್.ಎಂ.ಎಸ್ ತಂಡದ ಅಭಿಜಿತ್ ಬೆಸ್ಟ್ ಬೌಲರ್ ಪ್ರಶಸ್ತಿ ಪಡೆದರು. ಫೈನಲ್ ಪಂದ್ಯಾಟದಲ್ಲಿ ರಾಹುಲ್ 53 ರನ್ಗಳನ್ನು ಗಳಿಸಿದರು. ಪಂದ್ಯದ ನಿರ್ವಾಹಕರಾದ ರೋಲ್ಯಾಂಡ್ ಪಿಂಟೊ ಹಾಗೂ ಶಿವನಾರಾಯಣ್ ಐತಾಳ್ ಪ್ರಶಸ್ತಿ ಪ್ರದಾನ ಮಾಡಿದರು.