News Kannada
Thursday, September 29 2022

ಕ್ರೀಡೆ

ಏ.9ರಂದು ಮೂರ್ನಾಡಿನಲ್ಲಿ ಪತ್ರಕರ್ತರ ಕ್ರಿಕೆಟ್ - 1 min read

Photo Credit :

ಏ.9ರಂದು ಮೂರ್ನಾಡಿನಲ್ಲಿ ಪತ್ರಕರ್ತರ ಕ್ರಿಕೆಟ್

ಮಡಿಕೇರಿ: ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಮೂರ್ನಾಡು ಫ್ರೆಂಡ್ಸ್ ಕ್ರಿಕೆಟರ್ಸ್ ಸಂಯುಕ್ತಾಶ್ರಯದಲ್ಲಿ ಮೂರ್ನಾಡು ವಿದ್ಯಾಸಂಸ್ಥೆ ಮೈದಾನದಲ್ಲಿ ಏ.9 ರಂದು ಜಿಲ್ಲಾಮಟ್ಟದ ಕ್ರಿಕೆಟ್ ಪಂದ್ಯಾವಳಿ ನಡೆಯಲಿದೆ. ಅಂದು ಬೆಳಗ್ಗೆ 9.30ಕ್ಕೆ ಮೂರ್ನಾಡು ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಡುವಂಡ ಅರುಣ್ ಅಪ್ಪಚ್ಚು ಚಾಲನೆ ನೀಡಲಿದ್ದಾರೆಂದು ಸಂಘದ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಭಾರತೀಯ ಪತ್ರಕರ್ತರ ಒಕ್ಕೂಟ ಸದಸ್ಯ ಬಿ.ಎಸ್. ಲೋಕೇಶ್ಸಾಗರ್ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ಮುಖ್ಯಅತಿಥಿಗಳಾಗಿ ಜಿಲ್ಲಾ ಪತ್ರಕರ್ತರ ಸಂಘ ಪ್ರಧಾನ ಕಾರ್ಯದರ್ಶಿ ಕುಡೆಕಲ್ಲು ಸಂತೋಷ್, ಕ್ಷೇಮಾಭಿವೃದ್ಧಿ ಸಮಿತಿ ಅಧ್ಯಕ್ಷ ಸಣ್ಣುವಂಡ ಎಂ. ಚಂಗಪ್ಪ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನಿರ್ದೇಶಕರಾದ ಬಾಚರಣಿಯಂಡ ಅನು ಕಾರ್ಯಪ್ಪ, ಎಸ್.ಐ. ಮುರಳೀಧರ್, ಸೋಮವಾರಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ, ವಿರಾಜಪೇಟೆ ತಾಲೂಕು ಪತ್ರಕರ್ತರ ಸಂಘ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ ಪಾಲ್ಗೊಳ್ಳಲಿದ್ದಾರೆ.

ಸಂಜೆ 6 ಗಂಟೆಗೆ ಜಿಲ್ಲಾ ಪತ್ರಕರ್ತರ ಸಂಘ ಖಜಾಂಚಿ ಸವಿತಾ ರೈ ಅಧ್ಯಕ್ಷತೆಯಲ್ಲಿ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಜಿಪಂ ಅಧ್ಯಕ್ಷ ಬಿ.ಎ. ಹರೀಶ್, ಶಕ್ತಿ ಸಂಪಾದಕ ಜಿ. ಚಿದ್ವಿಲಾಸ್, ಸಿದ್ದಾಪುರದ ಪತ್ರಕರ್ತ ಅಂಚೆಮನೆ ಸುಧಿಕುಮಾರ್ ಪಾಲ್ಗೊಳ್ಳಲಿದ್ದಾರೆ. ವಿಜೇತ ತಂಡಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ ಟ್ರೋಫಿ ವಿತರಿಸಲಿದ್ದಾರೆ. ನಗದು ಬಹುಮಾನವನ್ನು ಜಿಪಂ ಮಾಜಿ ಅಧ್ಯಕ್ಷ ಶಾಂತೆಯಂಡ ರವಿ ಕುಶಾಲಪ್ಪ, ಕೃಷಿಕ ಚೆಟ್ಟಿಮಾಡ ಅಮರ್, ಉದ್ಯಮಿ ಪೃಥ್ವಿ ಹರೀಶ್, ಮಾಜಿ ಯೋಧ ದೀಪಕ್ ಬಹುಮಾನ ವಿತರಿಸಲಿದ್ದಾರೆ. ಅಂತಿಮ ಪಂದ್ಯವನ್ನು ಜಯಕರ್ನಾಟಕ ಜಿಲ್ಲಾಧ್ಯಕ್ಷ ರಾಬಿನ್ ಕುಟ್ಟಪ್ಪ ಉದ್ಘಾಟಿಸಲಿದ್ದಾರೆ. ಪ್ರದರ್ಶನ ಪಂದ್ಯವನ್ನು ಉದ್ಯಮಿ ಕೆರೆಮನೆ ಭರತ್, ಕೃಷಿಕ ಕೋಟೇರ ಸಚಿನ್ ಉದ್ಘಾಟಿಸಲಿದ್ದಾರೆ.

ಸುವರ್ಣ ಮಂಜು ನಾಯಕತ್ವದ ಮೀಡಿಯಾ ಇಲೆವನ್, ಕುಡೆಕಲ್ಲು ಸಂತೋಷ್ ನಾಯಕತ್ವದ ಬ್ಲ್ಯಾಕ್ ಕೋಬ್ರಾ, ಪಳೆಯಂಡ ಪಾರ್ಥ ಚಿಣ್ಣಪ್ಪ ನಾಯಕತ್ವದ ಸೌತ್ ಟೈಗರ್ಸ್, ವಿಜಯ ಹಾನಗಲ್ಲು ನಾಯಕತ್ವದ ನಾರ್ತ್ ಲಯನ್ಸ್ ತಂಡಗಳು ಸೆಣಸಾಟ ನಡೆಸಲಿವೆ. ಜಿಲ್ಲಾ ಪತ್ರಕರ್ತರ ಸಂಘ ಉಪಾಧ್ಯಕ್ಷ ಜಿ.ವಿ. ರವಿಕುಮಾರ್ ನಾಯಕತ್ವದ ಹಿರಿಯ ಪತ್ರಕರ್ತರ ತಂಡ ಹಾಗೂ ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್ಕುಮಾರ್ ನಾಯಕತ್ವದ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಲಿದೆ.

ಪ್ರತಿ ಪಂದ್ಯ 6 ಒವರ್ ಗೆ ಸೀಮಿತವಾಗಿರುತ್ತದೆ. ಒಂದು ತಂಡದಲ್ಲಿ ಕನಿಷ್ಠ 5 ಬೌಲರ್ಗಳು ಇರಬೇಕಾಗುತ್ತದೆ. ಫೈನಲ್ ಪಂದ್ಯ 8 ಒವರ್ಗಳಿಗೆ ಸೀಮಿತವಾಗಿರುತ್ತದೆ. ಲೀಗ್ ಪಂದ್ಯಾಟ ವಾಗಿದ್ದು, ಗೆದ್ದವರಿಗೆ 2 ಅಂಕ, ಟೈ ಅದಲ್ಲಿ ಎರಡು ತಂಡಗಳಿಗೆ ತಲಾ 1 ಅಂಕ ನೀಡಲಾಗುತ್ತದೆ. ಅಂಕ ಪಟ್ಟಿಯಲ್ಲಿ ಪ್ರಥಮ ಎರಡು ಸ್ಥಾನ ಪಡೆಯುವ ತಂಡಗಳ ನಡುವೆ ಅಂತಿಮ ಪಂದ್ಯ ನಡೆಯಲಿದೆ.

See also  ಪಂಜಾಬನ್ನು ಹೀನಾಯವಾಗಿ ಸೋಲಿಸಿದ ಸನ್ ರೈಸರ್ಸ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು