ಚಿಕ್ಕಮಗಳೂರು: ಗುಲಾಬಿ ನಗರಿ ರಾಜಸ್ತಾನದ ಜೈಪುರದಲ್ಲಿ ಇತ್ತೀಚೆಗೆ ನಡೆದ 17 ನೇ ರಾಷ್ಟ್ರಮಟ್ಟದ ಪ್ಯಾರಾ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ನಗರದ ಆಶಾಕಿರಣ ಅಂಧ ಮಕ್ಕಳ ವಸತಿ ಪಾಠ ಶಾಲೆಯ 5 ಅಂಧ ವಿದ್ಯಾರ್ಥಿಗಳು ಭಾಗವಹಿಸಿ 3 ಚಿನ್ನ, 4 ಬೆಳ್ಳಿ, 1 ಕಂಚು ಸೇರಿ ಒಟ್ಟು 8 ಪದಕಗಳನ್ನು ಪಡೆಯುವುದರೊಂದಿಗೆ ಶಾಲೆ, ಜಿಲ್ಲೆ ಮತ್ತು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.
800 ಮೀ ಮತ್ತು 5000 ಮೀಟರ್ ನಲ್ಲಿ ಪ್ರಥಮ ಹೆಚ್.ಎಸ್.ಅನುಪ, 400 ಮೀ ತೃತೀಯ, 800ಮೀ ದ್ವಿತೀಯ, 1500ಮೀ ದ್ವಿತೀಯ ಪಿ. ವರದರಾಜು, 200 ಮೀ ದ್ವಿತೀಯ, 400 ಮೀ ಪ್ರಥಮ ಆರ್.ರಕ್ಷಿತಾ, 800 ಮೀಟರ್ನಲ್ಲಿ ದ್ವಿತೀಯ ಸ್ಥಾನ ಎಂ.ಎನ್. ಸೌಮ್ಯ ಗಳಿಸಿದ್ದಾರೆ. ವಿದ್ಯಾರ್ಥಿಗಳ ಈ ಅತ್ಯುತ್ತಮ ಸಾಧನೆ ಮಾಡಲು ಕಾರಣರಾದ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಪಿ.ಮಂಜಣ್ಣ ಪರಿಶ್ರಮ ಶ್ಲಾಘನೀಯ. ಈ ತಂಡಕ್ಕೆ ಶಾಲೆಯ ಆಡಳಿತ ಮಂಡಳಿ, ಮುಖ್ಯೋಪಾಧ್ಯಾಯರು, ಸಮಸ್ತ ಸಿಬ್ಬಂದಿ ವರ್ಗ ಮತ್ತು ಮಕ್ಕಳ ಪರವಾಗಿ ಸಂಸ್ಥೆಯ ಅಧ್ಯಕ್ಷ ಡಾ. ಜೆ.ಪಿ.ಕೃಷ್ಣೇಗೌಡ ತುಂಬು ಹೃದಯದ ಧನ್ಯವಾದ ಸಲ್ಲಿಸಿದ್ದಾರೆ.