News Kannada
Thursday, September 29 2022

ಕ್ರೀಡೆ

ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ: ಸಿಂಥೇಟಿಕ್ ಟ್ರಾಕ್, ಒಳಾಂಗಣ ಕ್ರೀಡಾಂಗಣಕ್ಕೆ 14.5 ಕೋ.ರೂ. ಪ್ರಸ್ತಾವನೆ - 1 min read

Photo Credit :

ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಂಗಣ: ಸಿಂಥೇಟಿಕ್ ಟ್ರಾಕ್, ಒಳಾಂಗಣ ಕ್ರೀಡಾಂಗಣಕ್ಕೆ 14.5 ಕೋ.ರೂ. ಪ್ರಸ್ತಾವನೆ

ಪುತ್ತೂರು: ಪುತ್ತೂರು ತಾಲೂಕು ಮೈದಾನವನ್ನು ಅಂತಾರಾಷ್ಟ್ರೀಯ ದರ್ಜೆಯ ಕ್ರೀಡಾಂಗಣವನ್ನಾಗಿ ಪರಿವರ್ತಿಸಲು 14.5 ಕೋಟಿ ರೂ.ಪ್ರಸ್ತಾವನೆ ಸರಕಾರಕ್ಕೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಕ್ರೀಡಾ ಇಲಾಖೆಯಿಂದ ಸಕರಾತ್ಮಕ ಸ್ಪಂದನೆ ವ್ಯಕ್ತವಾಗಿದ್ದು, ಬಹುನಿರೀಕ್ಷಿತ ಯೋಜನೆ ಅನುಷ್ಠಾನದ ಕನಸು ಗರಿಗೆದರಿದೆ.

ತಾಲೂಕು ಕ್ರೀಡಾಂಗಣ
ಪುತ್ತೂರು ನಗರದ ಕೇಂದ್ರ ಭಾಗದ ಕೊಂಬೆಟ್ಟುವಿನಲ್ಲಿ ತಾಲೂಕು ಕ್ರೀಡಾಂಗಣವಿದೆ. 1991-92 ಅನಂತರ ಕೊಂಬೆಟ್ಟು ಡಿಸ್ಟ್ರಿಕ್ ಶಾಲಾ ಆವರಣದಲ್ಲಿದ್ದ ಈ ಮೈದಾನವನ್ನು ತಾಲೂಕು ಕ್ರೀಡಾಂಗಣವಾಗಿ ಯುವಜನಸೇವಾ ಇಲಾಖೆಯ ವ್ಯಾಪ್ತಿಗೆ ಸೇರಿಸಲಾಗಿತ್ತು. 400 ಮೀಟರ್ ಮಣ್ಣಿನ ಟ್ರಾಕ್ ಹೊಂದಿರುವ ಈ ಕ್ರೀಡಾಂಗಣದಲ್ಲಿ ಜಿಲ್ಲಾ, ರಾಜ್ಯಮಟ್ಟದ ಅನೇಕ ಕ್ರೀಡಾಕೂಟಗಳು ನಡೆದಿದೆ.

ಕ್ರೀಡಾಂಗಣ ಅಭಿವೃದ್ಧಿ
ಪುತ್ತೂರಿನ ಶಾಸಕರಾಗಿದ್ದ ವಿನಯ ಕುಮಾರ್ ಸೊರಕೆ, ಡಿ.ವಿ.ಸದಾನಂದ ಗೌಡ, ಮಲ್ಲಿಕಾ ಪ್ರಸಾದ್, ಶಕುಂತಳಾ ಟಿ.ಶೆಟ್ಟಿ ಮೊದಲಾದಿ ಜನಪ್ರತಿನಿಧಿಗಳ ಅವಧಿಯಲ್ಲಿ ಕ್ರೀಡಾಂಗಣದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ನಡೆದಿದೆ. ಮಣ್ಣಿನ ಟ್ರ್ಯಾಕ್ ಮತ್ತು ಒಂದು ಬದಿಯ ಪೆವಿಲಿಯನ್ ನಿರ್ಮಾಣ, ಜಿಮ್ ಕೊಠಡಿ ಮೊದಲಾದ ಅಭಿವೃದ್ಧಿಗಳು ಆಗಿವೆ. ಈ ಹಿಂದೆ ಎರಡನೆ ಹಂತದ ಅಭಿವೃದ್ಧಿಗಾಗಿ 1.5 ಕೋ.ರೂ ವೆಚ್ಚದ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿತ್ತು. ಈಗ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ ಸರಕಾರದ ಮಟ್ಟದಲ್ಲಿ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಪ್ರಸ್ತಾವನೆಯಲ್ಲಿ ಏನೇನಿದೆ..?
6.5 ಕೋಟಿ ವೆಚ್ಚದಲ್ಲಿ 400 ಮೀಟರ್ ಸಿಂಥೇಟಿಕ್ ಟ್ರಾಕ್, 8 ಕೋಟಿ ರೂ. ವೆಚ್ಚದಲ್ಲಿ ಒಳಾಂಗಣ-ಹೊರಾಂಗಣ ಕ್ರೀಡಾಂಗಣ, ಪೆವಿಲಿಯನ್ ನಿರ್ಮಿಸುವ ಬಗ್ಗೆ ಪ್ರಸ್ತಾವಿಸಲಾಗಿದೆ. 60*20 ಅಡಿ ಉದ್ದ-ಅಗಲದ ಮೂರು ಅಂತಸ್ತಿನ ಒಳಾಂಗಣ ಕ್ರೀಡಾಂಗಣ ಇಲ್ಲಿ ನಿರ್ಮಾಣಗೊಳ್ಳಲಿದೆ. ಈಗಾಗಲೇ ಎರಡು ಕಡೆ ಪೆವಿಲಿಯನ್ ಇದ್ದು, ಇನ್ನೊಂದು ಬದಿಯಲ್ಲಿ ಹೊಸದಾಗಿ ಪೆವಿಲಿಯನ್ ನಿರ್ಮಾಣವೂ ಸೇರಿದೆ. ಇದಕ್ಕಾಗಿ ಒಟ್ಟು 14.5 ಕೋಟಿ ರೂ.ವೆಚ್ಚ ಅಂದಾಜು ಪಟ್ಟಿ ತಯಾರಿಸಲಾಗಿದೆ.
ನೀಲ ನಕಾಶೆ
ಅಂತಾರಾಷ್ಟ್ರೀಯ ಕ್ರೀಡಾಂಗಣ ರೂಪಿಸುವ ಕುರಿತಂತೆ ಹೊಸದಾಗಿ ರಚಿಸಲಾದ ಪುತ್ತೂರು ಸ್ಪೋಟ್ಸ್ ಕ್ಲಬ್, ವಿವಿಧ ದೈಹಿಕ ಶಿಕ್ಷಣ ಶಿಕ್ಷಕರ ಉಪಸ್ಥಿತಿಯಲ್ಲಿ ಸಭೆ ನಡೆದಿದೆ. ಅನಂತರ ನ್ಯೂ ಡೆಲ್ಲಿ ಶಿವನರೇಶ್ ಸ್ಪೋರ್ಟ್ಸ್ ಪ್ರೈವಟ್ ಲಿಮಿಟೆಡ್ ಸಂಸ್ಥೆ ತಾಂತ್ರಿಕ ಅಧಿಕಾರಿಗಳು ಸಿಂಥೆಟಿಕ್ ಟ್ರಾಕ್, ಒಳಾಂಗಣ, ಹೊರಾಂಗಣ, ಪೆವಿಲಿಯನ್ ನಿರ್ಮಾಣ ಕಾರ್ಯದ ಕುರಿತು ನೀಲ ನಕಾಶೆ ತಯಾರಿಸಿದ್ದಾರೆ. ವಾರದ ಹಿಂದೆ ಶಾಸಕಿ ಶಕುಂತಳಾ ಟಿ.ಶೆಟ್ಟಿ, ಯುವಜನ ಕ್ರೀಡಾಕಾರಿ ಮೊದಲಾದವರು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರನ್ನು ಭೇಟಿ ಮಾಡಿ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆ ಕುರಿತು ಚರ್ಚಿಸಿದ್ದಾರೆ. ಸಚಿವರಿಂದಲೇ ತ್ವರಿತ ಪ್ರಯತ್ನಕ್ಕೆ ಸಕರಾತ್ಮಕ ಸ್ಪಂದನೆ ಸಿಕ್ಕಿದೆ.
ಕ್ರೀಡಾಂಗಣ ಕನಸು
ಪುತ್ತೂರಿನ ಮಾಜಿ ಮತ್ತು ಹಾಲಿ ಶಾಸಕರ ಅವಯಲ್ಲಿ ತಾಲೂಕು ಕ್ರೀಡಾಂಗಣದ ಅಭಿವೃದ್ಧಿಗೆ ಅನೇಕ ಪ್ರಯತ್ನ ಆಗಿತ್ತು. ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರು ಶಾಸಕಿ ಶಕುಂತಳಾ.ಟಿ ಶೆಟ್ಟಿ ಕೋರಿಕೆ ಮೇರೆಗೆ ಪುತ್ತೂರಿಗೆ ಜಿಲ್ಲಾ ಕ್ರೀಡಾಂಗಣಕ್ಕೆ ದೊಡ್ಡ ಮೊತ್ತದ ಅನುದಾನ ನೀಡುವ ಘೋಷಣೆ ಮಾಡಿದ್ದರು. ಅನಂತರ ಸಮಿತಿ ರಚಿಸಿ, ಕ್ರೀಡಾಂಗಣ ರೂಪಿಸುವ ಬಗ್ಗೆ ಹಲವು ಪ್ರಯತ್ನ ನಡೆದಿತ್ತು. ಈಗ ಪ್ರಸ್ತಾವನೆ ಸರಕಾರದ ಹಂತದಲ್ಲಿದ್ದು, ಕ್ರೀಡಾ ಸಚಿವರ ಭರವಸೆ ಹಿನ್ನೆಲೆಯಲ್ಲಿ ಸಿಂಥೆಟಿಕ್ ಕ್ರೀಡಾಂಗಣದ ಕನಸು ಗರಿಗೆದರಿದೆ.
ಸಿಂಥೆಟಿಕ್ ಟ್ರಾಕ್
ಮಂಗಳೂರು, ಮೂಡಬಿದಿರೆಯಲ್ಲಿ ಈಗಾಗಲೇ ಸಿಂಥೆಟಿಕ್ ಟ್ರಾಕ್ ನಿರ್ಮಾಣವಾಗಿದೆ. ಜಿಲ್ಲಾ ಕೇಂದ್ರವಾಗಿ ರೂಪುಗೊಳ್ಳಲು ಅರ್ಹತೆ ಹೊಂದಿರುವ ಪುತ್ತೂರಿಗೂ ಸಿಂಥೆಟಿಕ್ ಟ್ರಾಕ್, ಒಳಾಂಗಣ ಕ್ರೀಡಾಂಗಣ ಅಭಿವೃದ್ಧಿ ಮತ್ತು ಕ್ರೀಡಾಪಟುಗಳ ಹಿತದೃಷ್ಟಿಯಿಂದ ಅಗತ್ಯವಾಗಿತ್ತು. ಕ್ರೀಡಾಪಟುಗಳಿಗೆ ಸಮಸ್ಯೆ ಏನೆಂದರೆ, 400 ಮೀ. ಮಣ್ಣಿನ ಟ್ರ್ಯಾಕ್ನಲ್ಲಿ ಓಡಿದ ಸ್ರ್ಪಗೆ ಮಂಗಳೂರಿನ ಸಿಂಥೇಟಿಕ್ ಟ್ರ್ಯಾಕ್ನಲ್ಲಿ ಓಡುವುದು ಅಷ್ಟು ಸುಲಭವಲ್ಲ. ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹೊಯಿಗೆ ಮೇಲೆ ಹಾರಿದ ಸ್ರ್ಪ ಮಂಗಳೂರಿನಲ್ಲಿ ಜಂಪ್ಸ್ಬೆಡ್ ನಲ್ಲಿ ಹಾರುವುದು ಸಲಿಸಲ್ಲ. ಮೂಲಭೂತ ಸೌಕರ್ಯ ತಾಲೂಕಿನಿಂದ ರಾಷ್ಟ್ರದ ತನಕ ಒಂದೇ ತೆರನಾಗದಿದ್ದರೆ, ಕ್ರೀಡಾಪಟುಗಳ ಪ್ರದರ್ಶನದ ಮೇಲೆ ನಕರಾತ್ಮಕ ಪರಿಣಾಮ ಬೀರುತ್ತದೆ.
ಸಾಲು-ಸಾಲು ಸಾಧಕರು..!
ಪುತ್ತೂರಿನಲ್ಲಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಕ ಬೇಟೆಯಾಡಿದ ಸಾವಿರಾರು ಸ್ರ್ಪಗಳು ಇದ್ದಾರೆ. ಅಥ್ಲೆಟಿಕ್ಸ್, ಗೇಮ್ಸ್, ಕರಾಟೆ, ಚೆಸ್ ಸೇರಿದಂತೆ ಪ್ರತಿ ಸ್ಪರ್ಧೆಯಲ್ಲೂ ಅತ್ಯುತ್ತಮ ಸಾಧನೆ ನೀಡಿದ್ದಾರೆ. ಈಗಿನ ಸಾಧಕರ ಪಟ್ಟಿ ಗಮನಿಸಿದರೆ, ಸರ್ಫಿಂಗ್ ನಲ್ಲಿ ಅಂತಾರಾಷ್ಟ್ರೀಯ ಪದಕ ಪಡೆದ ಸಿಂಚನಾ, ಅನೀಶಾ ನಾಯಕ್, ಈಜು ಸ್ರ್ಪ ವೈಷ್ಣವ್ ಹೆಗ್ಡೆ, ಈಟಿ ಎಸೆತದಲ್ಲಿ ಕನ್ನಿಕಾ ಅಡಪ, ರೆಬೆಕಾ, ಪ್ರೋ ಕಬಡ್ಡಿ ಆಟಗಾರ ಪ್ರಶಾಂತ್ ರೈ, ತ್ರೋಬಾಲ್ನಲ್ಲಿ ಪೂರ್ಣಿಮಾ ಹೀಗೆ ಸಾಲು-ಸಾಲು ಸಾಧಕರು ಇಲ್ಲಿದ್ದಾರೆ.
ಐಪಿಎಲ್ ಕ್ರಿಕೆಟ್ ಮೈದಾನ
ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸುವಂತ ಸುಸಜ್ಜಿತ ಕ್ರೀಡಾಂಗಣ ನಿರ್ಮಿಸಲು ತಾಲೂಕಿನ ಬೆಟ್ಟಂಪಾಡಿ ಬಳಿ ಸರಕಾರಿ ಜಾಗದ ಪರಿಶೀಲನೆ ನಡೆದಿದೆ. ಐಪಿಎಲ್, ರಣಜಿಯಂತಹ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಿಸುವ ನಿಟ್ಟಿನಲ್ಲಿ ಶಾಸಕರಾದಿಯಾಗಿ, ರಾಜ್ಯ ಕ್ರಿಕೆಟ್ ಬೋರ್ಡ್ ಅಕಾರಿಗಳು ಉತ್ಸುಕತೆ ಹೊಂದಿದ್ದು, ಸ್ಥಳ ಅಂತಿಮಗೊಂಡರೆ ಪುತ್ತೂರಿಗೆ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣಗೊಳ್ಳುವುದು ಖಚಿತ.
ಸಕರಾತ್ಮಕ ಸ್ಪಂದನೆ
ಪುತ್ತೂರಿನಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟದ ಕ್ರೀಡಾಂಗಣ ನಿರ್ಮಾಣಕ್ಕೆ 14.5 ಕೋ.ರೂ.ವೆಚ್ಚದಲ್ಲಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 400 ಮೀ. ಸಿಂಥೆಟಿಕ್ ಟ್ರಾಕ್, ಒಳಾಂಗಣ ಕ್ರೀಡಾಂಗಣ, ಪೆವಿಲಿಯನ್ ಈ ಪ್ರಸ್ತಾವನೆಯಲ್ಲಿ ಸೇರಿದೆ. ಶಾಸಕರ ಉಪಸ್ಥಿತಿಯಲ್ಲಿ ಕ್ರೀಡಾ ಸಚಿವರಿಗೂ ಪ್ರಸ್ತಾವನೆ ಪ್ರತಿ ಸಲ್ಲಿಸಿದ್ದು, ಸಕರಾತ್ಮಕ ಸ್ಪಂದನೆ ದೊರೆತಿದೆ. -ಮಾಮಚ್ಚನ್ ಎಂ ಸಹಾಯಕ ಯುವ ಸಬಲೀಕರಣ ಮತ್ತು ಕ್ರೀಡಾಕಾರಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ

See also  ಪಾಕ್ ವಿರುದ್ಧ ಆಸ್ಟ್ರೇಲಿಯಾಕ್ಕೆ 7 ವಿಕೆಟ್​​ಗಳ ಸುಲಭ ಗೆಲುವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು