ಹೈದರಾಬಾದ್: ಉತ್ತಮ ಪ್ರದರ್ಶನ ಅಗ್ರ ಸ್ಥಾನಕ್ಕೇರಲು ನೆರವಾಗುತ್ತದೆ ಎಂದು ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿವಿ ಸಿಂಧು ಹೇಳಿದ್ದಾರೆ.
ಮಲೇಷ್ಯಾ ಓಪನ್ ಮತ್ತು ಸಿಂಗಾಪುರ ಓಪನ್ ಸೂಪರ್ ಸೀರಿಸ್ ನ ಸೋಲಿನಿಂದಾಗಿ ಕಳೆದ ವಾರ ಸಿಂಧು 5ನೇ ಸ್ಥಾನಕ್ಕೆ ಕುಸಿದಿದ್ದು, ಇಂಡಿಯನ್ ಸೂಪರ್ ಸೀರಿಸ್ ನ ಚಾಂಪಿಯನ್ ಆಗಿ ಹೊರಹೊಮ್ಮಿದ ನಂತರ ಸಿಂಧು ವಿಶ್ವದ ಅಗ್ರ ಶ್ರೇಯಾಂಕದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದರು.
21 ವರ್ಷದ ಸಿಂಧು ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರೆ ಮುಂದೆ ಅಗ್ರಸ್ಥಾನ ಪಡೆಯಬಹುದು. ಇದಕ್ಕಾಗಿ ತಾನು ಸರ್ವ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ.
ಏಷ್ಯಾ ಬ್ಯಾಡ್ಮಿಂಟನ್ ಚಾಂಪಿಯನ್ ಏಪ್ರಿಲ್ 25ರಿಂದ ಚೀನಾದಲ್ಲಿ ಆರಂಭಗೊಳ್ಳಲಿದ್ದು, ಮೇ ನಲ್ಲಿ ನಡೆಯಲಿರುವ ಸುದೀರ್ಮನ್ ಕಪ್ ಎರಡರಲ್ಲಿಯೂ ಉತ್ತಮ ಪ್ರದರ್ಶನ ನೀಡುವುದಾಗಿ ಸಿಂಧು ತಿಳಿಸಿದ್ದಾರೆ.