ದೋಹಾ: ಏಷ್ಯನ್ ಸ್ನೂಕರ್ ಚಾಂಪಿಯನ್‌ಷಿಪ್‌ನ ಫೈನಲ್ ಹೋರಾಟದಲ್ಲಿ ಸೋಲನ್ನನುಭವಿಸುವ ಮೂಲಕ ಪ್ರಶಸ್ತಿ ಗೆಲ್ಲುವ ಅವಕಾಶದಿಂದ ವಂಚಿತರಾಗಿದ್ದಾರೆ.
ಚೀನಾದ ಹಾವೊತಿಯಾನ್ ಎದುರು ಶುಕ್ರವಾರ ನಡೆದ ಪುರುಷರ ವಿಭಾಗದ ಫೈನಲ್ ಹೋರಾಟದಲ್ಲಿ 3–6 ಫ್ರೇಮ್‌ಗಳಿಂದ ಪಂಕಜ್ ಸೋಲಿಗೆ ಶರಣಾಗಿದ್ದಾರೆ. ಈ ಮೂಲಕ ಒಂದೇ ವರ್ಷದಲ್ಲಿ ಸ್ನೂಕರ್ ಹಾಗೂ ಬಿಲಿಯರ್ಡ್ಸ್‌ನಲ್ಲಿ ಎರಡು ಪ್ರಶಸ್ತಿಗಳನ್ನು ಗೆಲ್ಲುವ ಅವಕಾಶ ಬೆಂಗಳೂರಿನ ಆಟಗಾರನಿಗೆ ತಪ್ಪಿ ಹೋದಂತಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕದ ಪಂಕಜ್ ಫೈನಲ್ ತಲುಪಿ ನಿರಾಸೆ ಕಂಡಿದ್ದು ಇದೇ ಮೊದಲಾಗಿದ್ದು. ಹಿಂದೆ ರಾಷ್ಟ್ರೀಯ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್, 6–ರೆಡ್ ಸ್ನೂಕರ್ ಸೇರಿದಂತೆ ಹಲವಾರು ಟೂರ್ನಿಗಳಲ್ಲಿ ಚಿನ್ನದ ಪದಕವನ್ನೇ ತಮ್ಮದಾಗಿಸಿಕೊಂಡಿದ್ದರು.
ಪಂಕಜ್ ಅವರು ರಾಷ್ಟ್ರೀಯ, ಏಷ್ಯಾ ಹಾಗೂ ವಿಶ್ವ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಚಾಂಪಿ ಯನ್‌ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ. ಮಾತ್ರವಲ್ಲ ದೀರ್ಘ ಮತ್ತು ಅಲ್ಪಾವಧಿಯ ವಿಭಾಗಗಳಲ್ಲೂ ಚಾಂಪಿಯನ್ ಆಗಿದ್ದಾರೆ.