ಕರ್ನಾಟಕ ರಣಜಿ ತಂಡದ ಹಿರಿಯ ಬ್ಯಾಟ್ಸ್ ಮನ್ ಕನ್ನಡಿಗ ರಾಬಿನ್ ಉತ್ತಪ್ಪ ತಮ್ಮ ತಂಡದ ಪರ ಆಡಲು ಕೇರಳ ಕ್ರಿಕೆಟ್ ಸಂಸ್ಥೆ ಸೆಳೆಯಲು ಪ್ರಯತ್ನ ನಡೆಸಿದೆ.
2017-18ರ ಸಾಲಿನ ರಣಜಿ ಟ್ರೋಫಿಗೆ ತಮ್ಮ ತಂಡದ ಪರ ಆಡಲು ಸೆಳೆಯಲು ಪ್ರಯತ್ನ ನಡೆಸಿದ್ದೇವೆ ಎಂದು ಕೇರಳ ಕ್ರಿಕೆಟ್ ಸಂಸ್ಥೆ ಮಾಹಿತಿ ನೀಡಿದೆ. ಕಳೆದ ವರ್ಷವೇ ಉತ್ತಪ್ಪ ಅವರನ್ನು ಸಂಪರ್ಕಿಸಲಾಗಿತ್ತು. ಆದರೆ ಅದು ಸಾಧ್ಯವಾಗಿರಲಿಲ್ಲ. ಈ ಬಾರಿ ಮತ್ತೊಮ್ಮೆ ಅವರನ್ನು ನಮ್ಮ ತಂಡದ ಪರ ಆಡಲು ಕೇಳಿದ್ದೇವೆ ಎಂದು ಕ್ರಿಕೆಟ್ ಸಂಸ್ಥೆ ಹೇಳಿದೆ.