ಬರ್ಮಿಂಗ್ಹ್ಯಾಮ್: ಏಕದಿನ ಮತ್ತು ಟ್ವೆಂಟಿ–20 ಪಂದ್ಯಕ್ಕಾಗಿ ವೆಸ್ಟ್ ಇಂಡೀಸ್ ಪ್ರವಾಸ ಕೈಗೊಳ್ಳಲಿರುವ ಭಾರತ ತಂಡವು ಆಟಗಾರರ ಪಟ್ಟಿಯನ್ನು ಪ್ರಕಟಿಸಿದೆ.
ತಂಡ ಸದಸ್ಯರ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಗುರುವಾರ ತಂಡದ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಪಂದ್ಯದ ಆರಂಭಿಕ ಬ್ಯಾಟ್ಸ್ ಮನ್ ಗಳಾದ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬೂಮ್ರಾ ಅವರಿಗೆ ವಿಶ್ರಾಂತಿ ನೀಡಿ, ಬದಲಾಗಿ ತಂಡದಲ್ಲಿ ರಿಷಬ್ ಹಾಗೂ ಕುಲದೀಪ್ ಗೆ ಸ್ಥಾನವನ್ನು ನೀಡಲಾಗಿದೆ.
ಪಕ್ಕೆಲುಬಿನ ನೋವಿಗೆ ಒಳಗಾಗಿದ್ದ ರೋಹಿತ್ ಶರ್ಮಾ ಗುಣಮುಖರಾದ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ನಿರಂತರ ಆಟವನ್ನು ಆಡಿದ್ದರು. ಅವರನ್ನು ಮೇಲಿಂದ ಮೇಲೆ ಕಣಕ್ಕೆ ಇಳಿಸಲು ಇಷ್ಟಪಡದ ತಂಡದ ಆಡಳಿತವು ವಿಶ್ರಾಂತಿ ನೀಡಲು ನಿರ್ಧರಿಸಿದೆ. ಐಪಿಎಲ್ನಲ್ಲಿ ನಿರಂತರ ಬೆವರು ಸುರಿಸಿದ ಬೂಮ್ರಾ ಅವರ ಮೇಲೆಯೂ ಹೆಚ್ಚು ಒತ್ತಡ ಹೇರದಿರಲು ಆಡಳಿತ ನಿರ್ಧರಿಸಿದೆ. ರೋಹಿತ್ ಶರ್ಮಾ ಅನುಪ ಸ್ಥಿತಿಯಲ್ಲಿ ಅಜಿಂಕ್ಯ ರಹಾನೆ ಅಥವಾ ರಿಷಭ್ ಪಂತ್ ಅವರಿಗೆ ಇನಿಂಗ್ಸ್ ಆರಂಭಿಸುವ ಅವಕಾಶ ಲಭಿಸಲಿದೆ.