ನಂಜನಗೂಡು: ನಂಜನಗೂಡು ಪಟ್ಟಣದಲ್ಲಿ ಯುವಕ್ರೀಡಾ ಕೂಟದ ಅಭಿಮಾನಿಗಳು ಆಯೋಜಿಸಿದ್ದ 2 ದಿನಗಳ ರಾಜ್ಯಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ತಮ್ಮ ಪ್ರತಿಭೆ ಮೆರೆದ ಸ್ಪರ್ಧೆಗಳು ಬಹುಮಾನ ಪಡೆಯುವ ಮೂಲಕ ಹರ್ಷಗೊಂಡರು.
ರಾಜ್ಯ ಮಟ್ಟದ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿವಿಧ ಜಿಲ್ಲೆಯ ಸ್ಪರ್ಧೆಗಳು ಭಾಗವಹಿಸಿದ್ದರು. ಪಂದ್ಯಾವಳಿಯಲ್ಲಿ ಗೆಲುವು ಪಡೆದ ಕಿಶಾಲ್, ಕೌಷಿತ್, ಆದಿತ್ಯ, ಮಾನಸಿ, ಭಾರ್ಗವ್, ಅಂಕಿತ್, ಚೈತನ್ಯ, ಕುಶಾಲ್, ರಶ್ಮಿ, ಐಶ್ವರ್ಯ ಅವರಿಗೆ ಬಹುಮಾನ ನೀಡಲಾಯಿತು.
ಸಮಾರೋಪ ಸಮಾರಂಭದಲ್ಲಿ ತಹಸೀಲ್ದಾರ್ ಎಂ.ದಯಾನಂದ್ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ ಇಂದು ಶಿಕ್ಷಣಕ್ಕೆ ಎಷ್ಟು ಮಹತ್ವ ಇದೆಯೋ ಅಷ್ಟೇ ಕ್ರೀಡೆಗೂ ಇದೆ. ಕ್ರೀಡಾಪಟುಗಳು ಸೋಲು-ಗೆಲುವನ್ನು ಸಮವಾಗಿ ಸ್ವೀಕರಿಸಿ, ಸೋಲಿನ ಮೆಟ್ಟಿಲನ್ನೇರಿ, ಗೆಲವು ಸಾಧಿಸಲುಬೇಕು. ಇತ್ತೀಚೆಗೆ ಕ್ರೀಡಾಪಟುಗಳು ತಮ್ಮ ಉತ್ಸಾಹವನ್ನು ಕಳೆದುಕೊಳ್ಳುತ್ತಿದ್ದಾರೆ. ಮಕ್ಕಳು ಆಡುವ ಕ್ರೀಡೆಯನ್ನು ಪೋಷಕರು ಪ್ರೋತ್ಸಾಹಿಸಬೇಕು. ಯಾವುದೇ ಕ್ರೀಡೆಯಾಗಲಿ ಅದರ ಮೇಲೆ ಗೌರವಿರಬೇಕು ಎಂದರು.
ಕೈಗಾರಿಕಾ ಪದೇಶದ ಅಧ್ಯಕ್ಷರಾದ ರಾಂಪ್ರಸಾದ್, ಕೆಂಪೇಗೌಡ, ಅಂತರಾಷ್ಟ್ರೀಯ ಕ್ರೀಡಾಪಟು ಸುನಿಲ್ ಇದ್ದರು. ಕ್ರೀಡಾಪಟುಗಳಾದ ರವಿ, ಲೋಕೇಶ್, ದಿಲೀಪ್, ಷಣ್ಮುಗಂ, ರವಿಕುಮಾರ್, ಶ್ರೀನಿವಾಸ್, ಭರತ್, ಲೋಹಿತ್, ರಘು, ನವೀನ್, ಉಗಮ್ ಅವರನ್ನು ಗೌರವಿಸಲಾಯಿತು.