News Kannada
Friday, September 30 2022

ಕ್ರೀಡೆ

ಬಾಲ್‌ಬ್ಯಾಡ್ಮಿಂಟನ್‌ : ಕರ್ನಾಟಕದ ವನಿತೆಯರಿಗೆ ಪ್ರಶಸ್ತಿ - 1 min read

Photo Credit :

ಬಾಲ್‌ಬ್ಯಾಡ್ಮಿಂಟನ್‌ : ಕರ್ನಾಟಕದ ವನಿತೆಯರಿಗೆ ಪ್ರಶಸ್ತಿ

ಬೆಂಗಳೂರು: ಕರ್ನಾಟಕದ ವನಿತೆಯರು ನವದೆಹಲಿಯಲ್ಲಿ ಭಾರತ ಬಾಲ್‌ ಬ್ಯಾಡ್ಮಿಂಟನ್‌ ಫೆಡರೇಷನ್‌ ಆಶ್ರಯದಲ್ಲಿ ನಡೆದ ನಾಲ್ಕನೇ ಅಂತರ ವಲಯ ಬಾಲ್‌ಬ್ಯಾಡ್ಮಿಂಟನ್‌ ಚಾಂಪಿಯನ್‌ ಷಿಪ್‌ನಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಗುರುವಾರ ನಡೆದ ಫೈನಲ್‌ ಪಂದ್ಯದಲ್ಲಿ ಕರ್ನಾಟಕದ ಆಟಗಾರ್ತಿಯರು 35–22ರಿಂದ ತಮಿಳುನಾಡು ತಂಡದ ವಿರುದ್ಧ ಗೆಲುವು ಗಳಿಸಿದರು.

ಇದಕ್ಕೆ ಮೊದಲು ನಡೆದ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಕರ್ನಾಟಕ ತಂಡವು ಒಡಿಶಾ ವಿರುದ್ಧ ಗೆದ್ದರೆ, ತಮಿಳುನಾಡಿನ ಆಟಗಾರ್ತಿಯರು ಛತ್ತೀಸ್‌ಗಡ ಎದುರು ಜಯ ಸಾಧಿಸಿದರು. ಹತ್ತು ಮಂದಿಯ ತಂಡದಲ್ಲಿ ಒಂಬತ್ತು ಆಟಗಾರ್ತಿಯರು ಮೂಡು ಬಿದಿರೆಯ ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ಸೇರಿದವರು.

ರಾಜ್ಯ ಪುರುಷರ ತಂಡಕ್ಕೆ ಎರಡನೇ ಸ್ಥಾನ: ಈ ಟೂರ್ನಿಯ ಇತಿಹಾಸದಲ್ಲೇ ಮೊದಲ ಬಾರಿಗೆ ಪುರುಷರ ವಿಭಾಗದಲ್ಲಿ ಫೈನಲ್‌ ತಲುಪಿದ ಕರ್ನಾಟಕ ತಂಡ ದವರು ರನ್ನರ್‌ ಅಪ್‌ ಸ್ಥಾನ ಗಳಿಸಈ ತಂಡದ ಐದು ಮಂದಿ ಪ್ರಮುಖ ಆಟಗಾರರೂ ಆಳ್ವಾಸ್‌ ಶಿಕ್ಷಣ ಸಂಸ್ಥೆಗೆ ಸೇರಿದವರು. ಅಂತಿಮ ಪಂದ್ಯದಲ್ಲಿ ಕರ್ನಾಟಕದ ಆಟಗಾರರು ಅತ್ಯುತ್ತಮ ವಾಗಿ ಆಡಿದ ರಾದರೂ 32–35ರಿಂದ ತಮಿಳು ನಾಡಿನ ಎದುರು ಸೋಲನುಭವಿಸಿದರು. ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡವು ಒಡಿಶಾ ವಿರುದ್ಧ ಗೆದ್ದರೆ, ತಮಿಳುನಾಡಿನ ಆಟಗಾರರು ಪಶ್ಚಿಮ ಬಂಗಾಳದ ಎದುರು ಗೆದ್ದರು.

ರಾಜ್ಯದ ಬಾಲ್‌ ಬ್ಯಾಡ್ಮಿಂಟನ್‌ ಚರಿತ್ರೆಯಲ್ಲೇ ಇದೊಂದು ಅನನ್ಯ ಸಾಧನೆ ಎಂದಿರುವ ಕರ್ನಾಟಕ ಬಾಲ್‌ಬ್ಯಾಡ್ಮಿಂಟನ್‌ ಸಂಸ್ಥೆಯ ಕಾರ್ಯ ದರ್ಶಿ ದಿನೇಶ್‌ ಅವರು ತಂಡಗಳನ್ನು ಅಭಿನಂದಿಸಿದ್ದಾರೆ.

See also  ಪ್ರಪ್ರಥಮ ಬಾರಿಗೆ ಫಿಫಾ ವಿಶ್ವಕಪ್ ಫೈನಲಿಗೆ ಕ್ರೊವೇಶಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು