ಮಡಿಕೇರಿ: ಕೂರ್ಗ್ ಯುನೈಟೆಡ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ದುಬೈನಲ್ಲಿ ನಡೆದ ಕೂರ್ಗ್ ಈದ್ ಮೀಟ್ ಹೊನಲು ಬೆಳಕಿನ ವಾಲಿಬಾಲ್ ಮತ್ತು ಕ್ರಿಕೆಟ್ ಪಂದ್ಯಾವಳಿಯಲ್ಲಿ ಜಿವೈಸಿ ಗುಂಡಿಕೆರೆ ತಂಡ ಟ್ರೋಫಿ ಗೆದ್ದುಕೊಂಡಿದೆ.
ಪಿ.ಹೆಚ್.ಸುಹೈಲ್ ನೇತೃತ್ವದ ಜಿವೈಸಿ ತಂಡದಲ್ಲಿ ನಾಯಕ ಜಕ್ರಿಯಾ, ನಿಜಾರ್, ಸುಫಿಯಾನ್, ಜಾಬಿರ್, ಹುಸೈನ್, ಜಂಶೀರ್, ಸಲೀಮ್ ಪಾಲ್ಗೊಂಡು ಪ್ರಶಸ್ತಿಗಾಗಿ ಸೆಣಸಾಡಿದರು. ದ್ವಿತೀಯ ಸ್ಥಾನವನ್ನು ಮಿರ್ಶಾ ಫ್ರೆಂಡ್ಸ್ ಹಾಗೂ ತೃತೀಯ ಸ್ಥಾನವನ್ನು ಚೆರಿಯ ಪರಂಬು ತಂಡ ಗೆದ್ದುಕೊಂಡಿತು. ಪಂದ್ಯಾವಳಿಯಲ್ಲಿ ಒಟ್ಟು 10 ತಂಡಗಳು ಪಾಲ್ಗೊಂಡಿದ್ದವು.
ಒಟ್ಟು 12 ತಂಡಗಳ ನಡುವೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸಿಟಿ ಬಾಯ್ಸ್ ಕಂಡಂಗ ತಂಡ ಪ್ರಥಮ, ಎಸ್ವೈಸಿ ಚಮಿಯಾಲ್ ದ್ವಿತೀಯ ಹಾಗೂ ಕುಂಜಿಲ ತಂಡ ತೃತೀಯ ಸ್ಥಾನ ಪಡೆದುಕೊಂಡಿತು.
ದುಬೈನಲ್ಲಿರುವ ಕೊಡಗಿನ ಹಲವು ಮಂದಿ ಅರೆಬಿಯನ್ ಮರಳು ಗಾಡಿನಲ್ಲಿ ಹೆಚ್ಐಜಿ ಗುಂಡಿಕೆರೆ ಎನ್ನುವ ಸಂಘಟನೆಯನ್ನು ರಚಿಸಿಕೊಂಡಿದ್ದು, ಪಂದ್ಯಾವಳಿಯ ಸಂದರ್ಭ ಸಂಘದ ಮಹಾಸಭೆ ಸಲೀಮ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಗೌರವ ಅಧ್ಯಕ್ಷರಾದ ಎಂ.ಬಿ.ಮೊದು, ಸಿ.ಪಿ.ಆಲಿ, ಎಂ.ಎ.ಅಕ್ಬರ್, ಲತೀಫ್ ಕಿರಾತ್, ಸಂಘದ ಕಾರ್ಯದರ್ಶಿ ಎಂ.ಎ.ಸೈದಲವಿ ಮತ್ತಿತರ ಪ್ರಮುಖರು ಸಭೆಯಲ್ಲಿ ಹಾಜರಿದ್ದರು. ಮುಂದಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿ.ಎಂ.ಸಲೀಂ ಹಾಗೂ ಕಾರ್ಯದರ್ಶಿಯಾಗಿ ಎಂ.ಎಸ್.ಅಲಿ ಅವರನ್ನು ನೇಮಕ ಮಾಡಲಾಯಿತು. ಅಸಿಫ್ ಅವರ ಪ್ರಾರ್ಥಸಿ, ಸುಹೈಲ್ ಸ್ವಾಗತಿಸಿದರು.