ಮುಂಬೈ: ಕಳೆದ ತಿಂಗಳು ಲಂಡನ್‌ನಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿ ವೇಳೆ ಟೀಂ ಇಂಡಿಯಾ ಕ್ಯಾಪ್ಟನ್ ಹಾಗೂ ಅಂದಿನ ಕೋಚ್ ಅನಿಲ್ ಕುಂಬ್ಳೆ ನಡುವಿನ ಜಗಳ, ವೈಮನಸ್ಸು ವಿಚಾರಕ್ಕೆ ಸಂಬಂಧಿಸಿದಂತೆ ಬಿಸಿಸಿಐಗೆ ತಂಡದ ಮ್ಯಾನೇಜರ್ ಕಪಿಲ್ ಮಲ್ಹೋತ್ರಾ ವರದಿ ಸಲ್ಲಿಸಿದ್ದಾರೆ.
ಕೊಹ್ಲಿ-ಅನಿಲ್ ಕುಂಬ್ಳೆ ನಡುವೆ ಅಷ್ಟೆಲ್ಲಾ ವೈಮನಸ್ಸು ಹೊರಬಿದ್ದಿದ್ದರೂ ತಂಡದ ಮ್ಯಾನೇಜರ್ ಸಲ್ಲಿಸಿರುವ ವರದಿಯಲ್ಲಿ ಯಾವುದೇ ವಿವಾದಾತ್ಮಕ ಘಟನೆ ದಾಖಲಿಸಿಲ್ಲ. ತಂಡದ ಮ್ಯಾನೇಜರ್ ಕಪಿಲ್ ಮಲ್ಹೋತ್ರಾ ಇಂದು ವರದಿ ಸಲ್ಲಿಸಿದ್ದು, ಚಾಂಪಿಯನ್ಸ್ ಟ್ರೋಫಿ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ನಡುವೆ ಯಾವುದೇ ಭಿನ್ನಾಭಿಪ್ರಾಯ ಉಂಟಾಗಿರಲಿಲ್ಲ. ಕೊಹ್ಲಿ, ಅನಿಲ್ ಕುಂಬ್ಳೆ ಅವರೊಂದಿಗೆ ಕನಿಷ್ಠ ಒರಟಾಗಿಯೂ ನಡೆದುಕೊಂಡಿರಲಿಲ್ಲವೆಂದು ಮಲ್ಹೋತ್ರ ತಿಳಿಸಿದ್ದಾರೆಂದು ಬಿಸಿಸಿಐ ಮೂಲಗಳು ತಿಳಿಸಿವೆ. ಇದರಿಂದ ವಿರಾಟ್ ಕೊಹ್ಲಿ ಅವರಿಗೆ ಬಹುತೇಕ ಕ್ಲೀನ್ ಚಿಟ್ ಸಿಕ್ಕಿದೆ. ಪ್ರಮುಖವಾಗಿ ಬಿಸಿಸಿಐ ಡ್ರೆಸ್ಸಿಂಗ್ ರೂಮ್ನಲ್ಲಿ ನಡೆದಿದ್ದ ಘಟನೆ ಕುರಿತು ಮಾಹಿತಿ ಸಲ್ಲಿಸುವಂತೆ ಬಿಸಿಸಿಐ ಕೇಳಿಕೊಂಡಿತ್ತು.
ಟೀಂ ಇಂಡಿಯಾ ತವರಿನ್ನಲ್ಲಾಗಲೀ ಅಥವಾ ವಿದೇಶದಲ್ಲಾಗಲೀ ಯಾವುದೇ ಸರಣಿ ಆಡಿದ ಬಳಿಕ ಸಾಮಾನ್ಯವಾಗಿ ಬಿಸಿಸಿಐಗೆ ತಂಡದ ಮ್ಯಾನೇಜರ್ ವರದಿ ನೀಡುತ್ತಾರೆ.