News Kannada
Wednesday, December 07 2022

ಕ್ರೀಡೆ

ದುಬೈನಲ್ಲಿ ಈದ್ ಮೀಟ್ ಕೊಡಗು ಕ್ರೀಡಾ ದಿನ

Photo Credit :

ದುಬೈನಲ್ಲಿ ಈದ್ ಮೀಟ್ ಕೊಡಗು ಕ್ರೀಡಾ ದಿನ

ಮಡಿಕೇರಿ: ಉದ್ಯೋಗ ನಿಮಿತ್ತ ಅರಬ್ಬಿ ರಾಷ್ಟ್ರವಾದ ದುಬೈಯಲ್ಲಿ ನೆಲೆಸಿರುವ ಕೊಡಗಿನ ನಿವಾಸಿಗಳು ಒಂದೆಡೆ ಸೇರಿ ರಂಜಾನ್ ಹಬ್ಬಾಚರಣೆಯ ಅಂಗವಾಗಿ ಈದ್ ಮೀಟ್ ಕೊಡಗು ಕ್ರೀಡಾ ದಿನವನ್ನು ಆಚರಿಸಿ ಸಂಭ್ರಮಿಸಿದ್ದಾರೆ. ಈ ಮೂಲಕ ತಾಯ್ನಾಡಿನ ಜನರು ಜಾತಿ ಧರ್ಮದ ಬೇಧವಿಲ್ಲದೆ ಒಂದೆಡೆ ಸೇರಿ ಖುಷಿಪಟ್ಟಿದ್ದಾರೆ. ದುಬೈ ಕೂರ್ಗ್  ಸ್ಪೋರ್ಟ್ಸ್  ಕ್ಲಬ್ ನ ಆಶ್ರಯದಲ್ಲಿ ಯು.ಎ.ಈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಸಹಯೋಗದಲ್ಲಿ ದುಬೈಯ ಶೇಕ್ ಜಾಹೇದ್ ರಸ್ತೆಯಲ್ಲಿರುವ ಅಲ್ಕೂಸ್ ಡೆಲ್ಕೊ ಹೊನಲು ಬೆಳಕಿನ ಮೈದಾನದಲ್ಲಿ  ಈದ್ ಮೀಟ್ ಕೊಡಗು ಕ್ರೀಡಾ ದಿನ ನಡೆಯಿತು.

ಕ್ರೀಡಾ ದಿನದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕಡಂಗ ಸಿಟಿ ಬಾಯ್ಸ್ ತಂಡ ಚಾಂಪಿಯನ್ ಪಟ್ಟ ತನ್ನದಾಗಿಸಿಕೊಂಡರೆ, ಚಾಮಿಯಾಲದ ಎಸ್. ವೈ.ಸಿ ತಂಡ ರನ್ನರ್ಸ್ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿತು. ಪುಟ್ಬಾಲ್ ಪಂದ್ಯಾವಳಿಯಲ್ಲಿ ಕುಂಜಿಲದ ಫೈನರಿ ಪ್ರೆಂಡ್ಸ್ ತಂಡ ವಿನ್ನರ್ಸ್ ಪ್ರಶಸ್ತಿ ಗೆದ್ದರೆ, ಚೆರಿಯಪರಂಬು ಪ್ರೆಂಡ್ಸ್ ತಂಡ 2ನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.

ವಾಲಿಬಾಲ್ ಪಂದ್ಯಾವಳಿಯಲ್ಲಿ ಗುಂಡಿಗೆರೆ ಫ್ರೆಂಡ್ಸ್ ತಂಡ ಪ್ರಥಮ ಸ್ಥಾನ ಪಡೆದರೆ, ಚೆರಿಯಪರಂಬು ಫೆಂಡ್ಸ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. 100 ಮೀ. ಓಟದ ಸ್ಪರ್ಧೆಯಲ್ಲಿ ಕಡಂಗಡ ಜಲೀಲ್ ಮೊದಲ ಸ್ಥಾನ ಪಡೆದರೆ, ಗುಂಡಿಗೆರೆಯ ಸೂಫಿಯಾನ್ ದ್ವಿತೀಯ ಮತ್ತು ವಿರಾಜಪೇಟೆಯ ನೂರುದ್ದೀನ್ ತೃತೀಯ ಸ್ಥಾನ ಪಡೆದರು. 400 ಮೀ. ಓಟದ ಸ್ಪರ್ಧೆಯಲ್ಲಿ ಕಡಂಗದ ಜಲೀಲ್ ಪ್ರಥಮ, ಹುಂಡಿಗೆರೆಯ ಸುಫಿಯಾನ್ ದ್ವಿತೀಯ ಮತ್ತು ಗುಂಡಿಗೆರೆಯ ಮಹಮ್ಮದಾಲಿ ತೃತೀಯ ಸ್ಥಾನವನ್ನು ಪಡೆದುಕೊಂಡರು.

ಬಳಿಕ ನಡೆದ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ದುಬೈ ಕೂರ್ಗ್ ಸ್ಪೋರ್ಟ್ಸ್ ಕ್ಲಬ್ ನ ಪ್ರಮುಖರಾದ ಕುಂಜಿಲದ ಕುಡಂಡ ರಫೀಕ್ ಅಲಿ, ಉದ್ಯೋಗವರಸಿ ವಿಶ್ವದ ಯಾವುದೇ ಮೂಲೆಯಲ್ಲಿ ಇದ್ದರೂ ತಾಯ್ನಾಡಿನ ಸತ್ವವನ್ನು ಕಾಪಾಡಿಕೊಳ್ಳುವುದು ಪ್ರತಿಯೊಬ್ಬ ಅನಿವಾಸಿ ಭಾರತೀಯನ ಮೂಲಭೂತ ಆಧ್ಯತೆಯಾಗಬೇಕು ಎಂದರು. ಬಹುಮಾನ ವಿತರಣಾ ಕಾರ್ಯಕ್ರಮದ ಅದ್ಯಕ್ಷತೆಯನ್ನು ಯು.ಎ.ಈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಹುಸೇನ್ ಸೋಮವಾರಪೇಟೆ ವಹಿಸಿದ್ದರು. ದುಬೈಯ ಪ್ರಮುಖ ಉದ್ಯಮಿ ಖಾಲಿದ್ ಬಿನ್ ಮೊಹಮ್ಮದ್ ಅಲ್ ಮರ್ರಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ  ಕೊಡಗು ಪ್ರತಿನಿಧಿ ಕುಶಾಲನಗರದ ಗಣೇಶ್ ರೈ, ದುಬೈ ಕೊಡಗು-ದ.ಕನ್ನಡ ಗೌಡ ಸಮಾಜದ ಅಧ್ಯಕ್ಷರಾದ ಹರೀಶ್ ಕೋಡಿ, ಕನ್ನಡಿಗರು ದುಬೈ ಸಂಘದ ಮಾಜಿ ಅಧ್ಯಕ್ಷರಾದ ಮಂಡ್ಯದ ಡಾ. ಮಲ್ಲಿಕಾರ್ಜುನ ಗೌಡ, ಯು.ಎ.ಇ.ಯ ಟೀಮ್ ಹಾಕಿ ಕೂರ್ಗ್ ನ ವ್ಯವಸ್ಥಾಪಕರಾದ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ಕನ್ನಡಿರು ದುಬೈ ಸಂಘದ ಅಧ್ಯಕ್ಷರಾದ ವೀರೇಂದ್ರ ಬಾಬು, ಉದ್ಯಮಿ ವಿರಾಜಪೇಟೆಯ ಶಕೀಲ್, ಮಡಿಕೇರಿಯ ಆರೀಫ್, ಗೋಣಿಕೊಪ್ಪದ ಇಬ್ರಾಹಿಂ, ಅಮೀದ್, ಎಮ್ಮೆಮಾಡಿನ ಹಂಝ, ನಾಪೋಕ್ಲುವಿ ಶ್ಯಾಂ, ಕಡಂಗದ ಮಜೀದ್ ಸಹದಿ, ನಲ್ವತೋಕ್ಲಿನ ದುದ್ದಿಯಂಡ ಜಿಯಾ ಮೊದಲಾದವರು ಭಾಗವಹಿಸಿದ್ದರು

See also  ಪರಸ್ಪರ ಸಿಹಿ ತಿನ್ನಿಸುವ ಮೂಲಕ ಮಾತಿನ ಯುದ್ಧಕ್ಕೆ ತೆರೆ ಎಳೆದ ಆಫ್ರೀದಿ-ಮಿಯಾಂದಾದ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು