News Kannada
Sunday, November 27 2022

ಕ್ರೀಡೆ

ಮೈಸೂರಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ - 1 min read

Photo Credit :

ಮೈಸೂರಿನಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್

ಮೈಸೂರು: ಶ್ರೀರಾಮಾನುಜಚಾರ್ಯರ ಸಹಸ್ರಮಾನೋತ್ಸವದ ಸಂಭ್ರಮಾಚರಣೆಯ ಅಂಗವಾಗಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ವತಿಯಿಂದ ಮೈಸೂರಿನ ಜೆ ಕೆ ಮೈದಾನದಲ್ಲಿ ಜು. 7, 8  ಮತ್ತು 9ರಂದು ಮೂರು 3ದಿನಗಳ ಕಾಲ  ರಾಮನುಜ ಕಪ್ ರಾಜ್ಯಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ ಪೋಸ್ಟರ್ನ್ನು  ಜಿಲ್ಲಾ ಪತ್ರಕರ್ತರ ಭವನದಲ್ಲಿ ಬಿಡುಗಡೆ  ಮಾಡಲಾಯಿತು.

ನಂತರ ಮಾಜಿ ನಗರಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ ಮಾತನಾಡಿ ಬ್ರಾಹ್ಮಣ ಸಮುದಾಯವನ್ನು ಬೇರು ಮಟ್ಟದಿಂದ ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಕಳೆದ ವರ್ಷ ರಾಜ್ಯಮಟ್ಟದ ಬ್ರಾಹ್ಮಣ ಯುವ ಸಮಾವೇಶವನ್ನು ಯಶಸ್ವಿಯಾಗಿ ಹಮ್ಮಿಕೊಳ್ಳಲಾಗಿತ್ತು. ಪ್ರತಿ ವರ್ಷವೂ ಸಮಾನಮನಸ್ಕರ 20 ಜಿಲ್ಲೆಗಳಿಂದ ಆಗಮಿಸುವ 32ತಂಡಗಳಿಗೆ ವಸತಿ ಮತ್ತು ಊಟದ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಪ್ರಥಮ ಬಹುಮಾನ 30 ಸಾವಿರ ಮತ್ತು ಟ್ರೋಫಿ, ದ್ವಿತೀಯ ಬಹುಮಾನ 2 ಸಾವಿರ ಮತ್ತು ಟ್ರೋಫಿ, ತೃತೀಯ ಬಹುಮಾನ 10 ಸಾವಿರ ರೂಪಾಯಿಗಳನ್ನು ಜುಲೈ 7ರ ಬೆಳಗ್ಗೆ 8 ಘಂಟೆಗೆ ರಾಮಾನುಜ ಕಪ್ ಪಂದ್ಯಾವಳಿಯನ್ನು ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ರವರು ಉದ್ಘಾಟಿಸಲಿದ್ದು, ಸಮಾರೋಪದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ರಾಜ್ಯ ಉಪಾಧ್ಯಕ್ಷರಾದ ಬಿವಿ ಮಂಜುನಾಥ್ ವಹಿಸಲಿದ್ದಾರೆ.

ಭಾಷ್ಯಂ ಸ್ವಾಮೀಜಿ, ಇಳೈ ಆಳ್ವಾರ್ ಸ್ವಾಮೀಜಿ ಭಾನುಪ್ರಕಾಶ್ ಶರ್ಮ ದಿವ್ಯಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಕೈಗಾರಿಕಾ ಸಚಿವರಾದ ಆರ್.ವಿ ದೇಶಪಾಂಡೆ, ಶಾಸಕರಾದ ದಿನೇಶ್ ಗುಂಡುರಾವ್ ಮತ್ತು ಪ್ರಸನ್ನ ಕುಮಾರ್, ಮಾಜಿ ಮಂತ್ರಿಗಳಾದ ಎಸ್.ಎ ರಾಮದಾಸ್, ಬಿಜೆಪಿ ಮುಖಂಡರಾದ ಕೆ.ಆರ್ ಮೋಹನ್ ಕುಮಾರ್, ಹೆಚ್.ವಿ ರಾಜೀವ್, ಶ್ರೀವತ್ಸ, ವಿಪ್ರ ಹಿರಿಯ ಮುಖಂಡರಾದ ಕೆ.ರಘುರಾಂ  ವಾಜಪೇಯಿ, ನಗರಪಾಲಿಕೆ ಸದಸ್ಯ ಮವಿ ರಾಂಪ್ರಸಾದ್ ಪನೀಶ್, ಗಿರಿಧರ್ ಸೇರಿದಂತೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು.

ಎನ್.ಆರ್ ಕ್ಷೇತ್ರದ ಅಧ್ಯಕ್ಷ ಗಿರಿಧರ್, ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಅಧ್ಯಕ್ಷ ಮುಳ್ಳೂರು ಗುರುಪ್ರಸಾದ್, ಉಪಾಧ್ಯಕ್ಷ ಹೆಚ್.ಎನ್ ಶ್ರೀಧರಮೂರ್ತಿ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಸಂಘಟನಾ ಕಾರ್ಯದಶರ್ಿ ಅಜಯ್ ಶಾಸ್ತ್ರಿ ರಾಜಗೋಪಾಲ್ ಇದ್ದರು.

See also  ಬಾಕ್ಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಚಾಮರಾಜನನಗರ ಯೋಧ ಶಿವಶಂಕರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು