News Kannada
Sunday, December 04 2022

ಕ್ರೀಡೆ

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ನೇಮಕ

Photo Credit :

ಟೀಂ ಇಂಡಿಯಾ ಕೋಚ್ ಆಗಿ ರವಿಶಾಸ್ತ್ರಿ ನೇಮಕ

ನವದೆಹಲಿ: ನಿರೀಕ್ಷೆಯಂತೆ ಭಾರತ ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ರವಿಶಾಸ್ತ್ರಿ ನೇಮಕಗೊಂಡಿದ್ದಾರೆ. ಸುಮಾರು ಒಂದು ತಿಂಗಳಿನಿಂದ ಖಾಲಿಯಿದ್ದ ಸ್ಥಾನಕ್ಕೆ ಬಿಸಿಸಿಐ ನೇಮಿಸಿದ್ದ ಸಿಎಸಿ ಸಮಿತಿ ರವಿಶಾಸ್ತ್ರಿ ಅವರನ್ನು ನೇಮಕ ಮಾಡಿದೆ.

ಕೊಹ್ಲಿ ಹಾಗೂ ತಮ್ಮ ನಡುವಿನ ಭಿನ್ನಾಭಿಪ್ರಾಯದಿಂದ ಮಾಜಿ ಆಟಗಾರ ಅನಿಲ್ ಕುಂಬ್ಳೆ ತಮ್ಮ ಕೋಚ್ ಹುದ್ದೆಗೆ ಕಳೆದ ತಿಂಗಳು ರಾಜೀನಾಮೆ ಸಲ್ಲಿಸಿದ್ದರು. ಅಲ್ಲಿಂದ ಹೊಸ ಕೋಚ್ ಹುಡುಕಾಟಕ್ಕೆ ಬಿಸಿಸಿಐ ಮುಂದಾಗಿತ್ತು. ಅದರಂತೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನೂ ಆಹ್ವಾನಿಸಿತ್ತು.  ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್ ಮತ್ತು ವಿವಿಎಸ್ ಲಕ್ಷ್ಮಣ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಸೋಮವಾರ ಒಟ್ಟು ಐದು ಜನ ಅಭ್ಯರ್ಥಿಗಳನ್ನು ಸಂದರ್ಶನ ಮಾಡಿತ್ತು. ವಿರೇಂದ್ರ ಸೆಹ್ವಾಗ್, ಟಾಮ್ ಮೂಡಿ, ರಿಚರ್ಡ್ ಪೇಬಸ್, ಫಿಲ್ ಸಿಮನ್ಸ್, ಲಾಲ್ಚಂದ್ ರಜ್ಪೂತ್ ಮತ್ತು ಶಾಸ್ತ್ರಿ ಸಂದರ್ಶನ ಎದುರಿಸಿದ್ದರು. ರವಿಶಾಸ್ತ್ರಿ ಹಾಗೂ ವಿರೇಂದ್ರ ಸೆಹ್ವಾಗ್ ಹೆಸರು ಹೆಚ್ಚು ಮುಂಚೂಣಿಯಲ್ಲಿತ್ತು.

ತಮ್ಮನ್ನು ಕೋಚ್ ಆಗಿ ಆಯ್ಕೆ ಮಾಡುವುದಾದರೇ ಅರ್ಜಿ ಸಲ್ಲಿಸುತ್ತೇನೆ ಎಂದು ರವಿಶಾಸ್ತ್ರಿ ಈ ಮೊದಲು ಹೇಳಿದ್ದರು. ಅದರಂತೆ ರವಿಶಾಸ್ತ್ರಿಯೇ ಮುಂದಿನ ಕೋಚ್ ಆಗ್ತಾರೆ ಅಂತಾ ಎಲ್ಲಡೆ ಚರ್ಚೆಯಾಗಿತ್ತು. ಎಲ್ಲರೂ ಊಹಿಸಿದಂತೆಯೇ ಇದೀಗ ಟೀಂ ಇಂಡಿಯಾ ಮಾಜಿ ನಿರ್ದೇಶಕ ರವಿಶಾಸ್ತ್ರಿ ಕೊಹ್ಲಿ ಪಡೆಗೆ ಮಾರ್ಗದರ್ಶನ ನೀಡಲು ನೇಮಕವಾಗಿದ್ದಾರೆ.  ರವಿಶಾಸ್ತ್ರಿ 2019ರ ವಿಶ್ವಕಪ್ ವರೆಗೂ ಟೀಂ ಇಂಡಿಯಾ ಕೋಚ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ಜುಲೈ 26 ರಿಂದ ಟೀಂ ಇಂಡಿಯಾ ನೆರೆಯ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಹೊಸ ಕೋಚ್ ರವಿಶಾಸ್ತ್ರಿಗೆ ಇದು ಮೊದಲ ಪರೀಕ್ಷೆ.

See also  ಐಪಿಎಲ್: ರಾಜಸ್ಥಾನ ರಾಯಲ್ಸ್ ಗೆ ಗೆಲವು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು