News Kannada
Wednesday, November 30 2022

ಕ್ರೀಡೆ

ಆಸ್ಟ್ರೇಲಿಯಾದ ಟೆನಿಸ್ ಆಟಗಾರ ಮರ್ವಿನ್ ವಿಧಿವಶ - 1 min read

Photo Credit :

ಆಸ್ಟ್ರೇಲಿಯಾದ ಟೆನಿಸ್ ಆಟಗಾರ ಮರ್ವಿನ್ ವಿಧಿವಶ

ಸಿಡ್ನಿ: ಆಸ್ಟ್ರೇಲಿಯಾದ ಟೆನಿಸ್ ಆಟಗಾರ ಮರ್ವಿನ್ ರೋಸ್ (87) ಮಂಗಳವಾರ ನಿಧನರಾಗಿದ್ದಾರೆ. ವಿಶ್ವ ಪ್ರಸಿದ್ಧ ಮಾಜಿ ಆಟಗಾರ್ತಿಯರಾದ ಮಾರ್ಗರೆಟ್‌ ಕೋರ್ಟ್ ಹಾಗೂ ಲಜೀನ್ ಕಿಂಗ್ ಅವರಿಗೆ ರೋಸ್ ಕೋಚ್ ಆಗಿದ್ದರು.ಸಿಂಗಲ್ಸ್ ವಿಭಾಗದಲ್ಲಿ ಎರಡು ಬಾರಿ ಗ್ರ್ಯಾಂಡ್‌ ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದರು. ಸಿಂಗಲ್ಸ್‌ನಲ್ಲಿ ಆಸ್ಟ್ರೇಲಿಯಾ ಓಪನ್‌ ಹಾಗೂ ಫ್ರೆಂಚ್ ಓಪನ್‌ ಗೆದ್ದುಕೊಂಡಿದ್ದಾರೆ. ಡಬಲ್ಸ್‌ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಐದು ಗ್ರ್ಯಾಂಡ್‌ ಸ್ಲಾಮ್ ಪ್ರಶಸ್ತಿಗಳು ಇವರ ಮುಡಿ ಸೇರಿವೆ. 1951 ಹಾಗೂ 1957ರಲ್ಲಿ ಡೇವಿಸ್ ಕಪ್ ಗೆದ್ದುಕೊಂಡ ಆಸ್ಟ್ರೇಲಿಯಾ ತಂಡದಲ್ಲೂ ರೋಸ್‌ ಆಡಿದ್ದರು. ನಿವೃತ್ತಿ ಪಡೆದ ಬಳಿಕ ಅವರು ಕೋಚ್ ಆಗಿ ಸಾಕಷ್ಟು ಹೆಸರು ಮಾಡಿದ್ದರು. 2001ರಲ್ಲಿ ಅಂತರರಾಷ್ಟ್ರೀಯ ಟೆನಿಸ್ ಹಾಲ್ ಆಫ್‌ ಫ್ರೇಮ್‌ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

See also  ಭಾರತದ ಮಹಿಳಾ ಹಾಕಿ ತಂಡ ಮುಖ್ಯ ಕೋಚ್ ಸ್ಯೋರ್ಡ್ ಮರೈನ್ ರಾಜೀನಾಮೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು