News Kannada
Tuesday, October 04 2022

ಕ್ರೀಡೆ

ನಾಳೆಯಿಂದ ಪ್ರೊ ಕಬಡ್ಡಿ ಆರಂಭ - 1 min read

Photo Credit :

ನಾಳೆಯಿಂದ ಪ್ರೊ ಕಬಡ್ಡಿ ಆರಂಭ

ಮೈಸೂರು: ಜನಪ್ರಿಯ ಸ್ಟಾರ್ ಸ್ಪೋರ್ಟ್ಸ್ ಪ್ರೊ ಕಬಡ್ಡಿ ಲೀಗ್ ನ 5ನೇ ಆವೃತ್ತಿಯು ಇದೇ 28ರಿಂದ ಆರಂಭವಾಗಲಿದ್ದು, ಕಬಡ್ಡಿ ಪ್ರಿಯರ ಮನತಣಿಸಲಿದೆ. ಈ ಪಂದ್ಯಾವಳಿಗಾಗಿ ಕಾಯುತ್ತಿರುವ ಕ್ರೀಡಾಪ್ರೇಮಿಗಳಿಗೆ ಹಲವು ರೀತಿಯ ರೋಮಾಂಚನಕಾರಿ ಕ್ಷಣಗಳು ಎದುರಾಗುವ ಸಾಧ್ಯತೆಯಿದೆ. ಒಂದು ತಂಡಕ್ಕಿಂತ ಒಂದು ಬಲಿಷ್ಠವಾಗಿರುವ ಕಾರಣ ಸೆಣಸಾಟ ನೋಡಲು ಎಲ್ಲರೂ ಕಾತರರಾಗಿರುವುದಂತು ನಿಜ. ಈ ಬಾರಿ ಮೈಸೂರಿನ ಎನ್.ಆರ್.ಗ್ರೂಪ್ ನ ಸೈಕಲ್ ಪ್ಯೂರ್ ಅಗರಬತ್ತೀಸ್ ಜೈಪುರ ಪಿಂಕ್ ಪ್ಯಾಂಥರ್ ತಂಡಕ್ಕೆ ಸಹಯೋಗ ನೀಡಿದೆ. ಜೈಪುರ ಪಿಂಕ್ ಪ್ಯಾಂಥರ್ಸ್ ಯು ಮುಂಬಾ, ಪುಣೆರಿ ಪಾಲ್ಟನ್, ಪಾಟ್ನಾ ಪೈರೇಟ್ಸ್, ಬಂಗಾಳ ವಾರಿಯರ್ಸ್, ಬೆಂಗಳೂರು ಬುಲ್ಸ್, ದಬಂಗ್ ದೆಹಲಿ ಕೆ.ಸಿ, ತೆಲುಗು ಟೈಟಾನ್ಸ್ ಇದಲ್ಲದೆ ನೂತನವಾಗಿ ಗುಜರಾತ್ ಫಾಚರ್ಸ್ ಗೇಂಟ್ಸ್, ಉತ್ತರಪ್ರದೇಶ ಯೋದ್ಧಾ, ತಮಿಳು ತಲಿಯಾವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ಹೀಗೆ 12 ತಂಡಗಳು ಪಾಲ್ಗೊಳ್ಳಲಿವೆ. ಪಂದ್ಯಾವಳಿ “ಕಾರವಾನ್ ಸ್ವರೂಪ”ದಲ್ಲಿ ನಡೆಯಲಿದ್ದು, ಆಯ್ದ 12 ಸ್ಥಳಗಳಲ್ಲಿ ಸುಮಾರು 112 ಪಂದ್ಯಗಳು ನಡೆಯಲಿವೆ.

ಆರಂಭಿಕ ಉದ್ಘಾಟನಾ ಪಂದ್ಯ ಜುಲೈ 28 ರಂದು ನಡೆಯಲಿದ್ದು, ಹೈದರಾಬಾದ್ ನ ಮೈದಾನದಲ್ಲಿ ತಮಿಳು ತಲಿಯಾವಾಸ್ ಹಾಗೂ ತೆಲುಗು ಟೈಟಾನ್ಸ್ ತಂಡಗಳು ಮೈದಾನಕ್ಕೆ ಇಳಿಯಲಿವೆ. ಪಂದ್ಯಾವಳಿಯ ಅವಧಿಯಲ್ಲಿ, ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು 22 ಪಂದ್ಯಗಳಲ್ಲಿ ಆಡುವ ನಿರೀಕ್ಷೆಯಿದೆ. ಫೈನಲ್ ಪಂದ್ಯವು ಅಕ್ಟೋಬರ್ 28ರಂದು ಚೆನ್ನೈನಲ್ಲಿ ನಡೆಯಲಿದೆ.ಸುಮಾರು ಮೂರು ದಿನಗಳ ಕಾಲ ನಡೆಯಲಿರುವ ಪಂದ್ಯಾವಳಿ ಬಹಳಷ್ಟು ಕ್ರೀಡಾ ಪ್ರೇಕ್ಷಕರ ಮನತಣಿಸುವುದಂತು ಖಚಿತ. ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿರುವ ಪ್ರೊ.ಕಬಡ್ಡಿ ಪಂದ್ಯಾವಳಿಗೆ ಈ ಬಾರಿ 4 ಹೆಚ್ಚುವರಿ ತಂಡಗಳು ಸೇರ್ಪಡೆಯಾಗಿರುವುದು ಇನ್ನಷ್ಟು ಮೆರಗು ತಂದಿದೆ. ಗೆಲ್ಲಲೇ ಬೇಕೆಂಬ ಉಮೇದಿನಲ್ಲಿರುವ ತಂಡಗಳು ಕಠಿಣ ಅಭ್ಯಾಸದಲ್ಲಿ ತೊಡಗಿವೆ ಗೆಲುವು ಯಾರಿಗೆ ಎಂಬುದನ್ನು ಕಾದು ನೋಡಬೇಕಿದೆ

See also  ಜಿಲ್ಲಾ ಮಟ್ಟದ ಪ್ರೌಢಶಾಲಾ ವಿಭಾಗದ ಬಾಲ್ ಬಾಡ್ಮಿಂಟನ್ :ನಾಟೆಕಲ್- ಕಟೀಲು ಪ್ರಥಮ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು