News Kannada
Tuesday, November 29 2022

ಕ್ರೀಡೆ

ಪ್ರೊ ಕಬಡ್ಡಿ ತೆಲುಗು ಟೈಟನ್ಸ್ ಗೆ ಶುಭಾರಂಭ - 1 min read

Photo Credit :

ಪ್ರೊ ಕಬಡ್ಡಿ ತೆಲುಗು ಟೈಟನ್ಸ್ ಗೆ ಶುಭಾರಂಭ

ಹೈದರಾಬಾದ್: ಹೊಸ ಹುಮ್ಮಸ್ಸಿನೊಂದಿಗೆ ಪಂದ್ಯಾಟಕ್ಕೆ ಇಳಿದ ತೆಲುಗು ಟೈಟನ್ಸ್ ತಂಡ 32–27 ಪಾಯಿಂಟ್ಸ್ಗಳಿಂದ ತಮಿಳ್ ತಲೈವಾಸ್ ಎದುರು ಭರ್ಜರಿ ಶುಭಾರಂಭ ಮಾಡಿತು. ತಂಡದ ಸ್ಟಾರ್ ಆಟಗಾರ ರಾಹುಲ್ ಚೌಧರಿ ಮೊದಲ ಪಂದ್ಯದಲ್ಲಿಯೇ ಭರವಸೆ ಮೂಡಿಸಿದರು. ರಾಹುಲ್ ತಂಡಕ್ಕೆ 10 ಪಾಯಿಂಟ್ಸ್ ತಂದರು. ರೈಡರ್ ನಿಲೇಶ್ ಸಾಳುಂಕೆ 9 ಪಾಯಿಂಟ್ಸ್ಗಳಿಂದ ಗಮನ ಸೆಳೆದರು. ಟೈಟನ್ಸ್ ಒಟ್ಟು 19 ಪಾಯಿಂಟ್ಸ್ಗಳನ್ನು ರೈಡಿಂಗ್ನಲ್ಲಿ ಪಡೆಯಿತು. ಟ್ಯಾಕಲ್ನಲ್ಲಿ 11 ಪಾಯಿಂಟ್ಸ್ಗಳು ಬಂದವು. ಆಲ್ಔಟ್ನಲ್ಲಿ ಎರಡು ಪಾಯಿಂಟ್ಸ್ ಪಡೆದುಕೊಂಡಿತ್ತು.
ಮೊದಲರ್ಧಕ್ಕೆ ರಾಹುಲ್ ಚೌಧರಿ ನಾಯಕತ್ವದ ಟೈಟನ್ಸ್ ಅಮೋಘ ಆರಂಭ ಪಡೆದಿತ್ತು. 18–11ರಲ್ಲಿ ಮುನ್ನಡೆ ಪಡೆದು ಸ್ವಲ್ಪ ವಿರಾಮ ಪಡೆದುಕೊಂಡಿತ್ತು. ಮೂರನೇ ಕ್ವಾರ್ಟರ್ನಲ್ಲಿ ಈ ತಂಡ ರೈಡಿಂಗ್ನಲ್ಲಿ ಪಾಯಿಂಟ್ಸ್ ಗಳಿಸಲಿಲ್ಲ. ತಲೈವಾಸ್ ತಂಡವು ಅನುಭವಿ ಆಟಗಾರರ ಕೊರತೆ ಎದುರಿಸಿತು. ಆದರೆ ಈ ತಂಡದ ಯುವ ಆಟಗಾರ ಪ್ರಪಂಜನ್ ಕೊನೆ ಕ್ಷಣಗಳಲ್ಲಿ ತಂಡಕ್ಕೆ ಪಾಯಿಂಟ್ಸ್ ತಂದುಕೊಟ್ಟು ತಂಡದಲ್ಲಿ ಉತ್ಸವವನ್ನು ಮೂಡಿಸಿದರು. ಒಟ್ಟು 7 ಪಾಯಿಂಟ್ಸ್ ಗಳಿಸಿದ ಅವರು ಇನ್ನೇನು ತೆಲುಗು ತಂಡವನ್ನು ಆಲ್ಔಟ್ ಮಾಡಿ ಗೆಲುವಿನತ್ತ ಸಮೀಸುವ ಮುನ್ಸೂಚನೆಯನ್ನು ನೀಡಿದರು.ಆದರೆ ತೆಲುಗು ತಂಡ ಇದಕ್ಕೆ ಅವಕಾಶ ನೀಡದೆ ಉತ್ತಮವಾಗಿ ಆಡಿ ಗೆಲುವನ್ನು ತನ್ನದಾಗಿಸಿಕೊಂಡಿತ್ತು.

See also  ಮೊದಲ ಟೆಸ್ಟ್ ನಲ್ಲಿ ಆಸ್ಟ್ರೇಲಿಯಾ ಫೇವರಿಟ್: ಅಜಿಂಕ್ಯ ರಹಾನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು