News Kannada
Tuesday, November 29 2022

ಕ್ರೀಡೆ

ಮೈಸೂರು ವಾರಿಯರ್ಸ್ ಗೆ ಆಟಗಾರರ ಆಯ್ಕೆ - 1 min read

Photo Credit :

ಮೈಸೂರು ವಾರಿಯರ್ಸ್ ಗೆ ಆಟಗಾರರ ಆಯ್ಕೆ

ಮೈಸೂರು: ಎನ್.ಆರ್. ಸಮೂಹದ ಒಡೆತನದಲ್ಲಿರುವ ಸೈಕಲ್ ಪ್ಯೂರ್ ಅಗರಬತ್ತೀಸ್ನ ಮಾಲೀಕತ್ವದಲ್ಲಿರುವ ಮೈಸೂರು ವಾರಿಯರ್ಸ್ ತಂಡಕ್ಕೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ  18 ಆಟಗಾರರನ್ನು ಆಯ್ಕೆ ಮಾಡಲಾಗಿದೆ.ಅರ್ಜುನ್ ಹೊಯ್ಸಳ, ಕರುಣ್ ನಾಯರ್, ಸುಹಿತ್ ಜೆ. ಅವಿನಾಶ್ ಕೆ.ಸಿ. ಶ್ರೇಯಸ್ ಗೋಪಾಲ್, ಸುನೀಲ್ ರಾಜು, ಭರತ್ ಎನ್.ಪಿ. ಮಂಜುನಾಥ್ ಎಸ್.ಪಿ. ಅಕ್ಷಯ್ ಎಸ್.ಎಲ್. ನಿಖಿತ್ ಎಸ್, ವೈಶಾಖ್ ಕುಮಾರ್, ಆರ್.ಪ್ರತೀಕ್ಷ್ ಆರ್. ಶಿವಿಲ್ ಕೌಶಿಕ್, ಶ್ರಿಜಿತ್ ಕೆ,ಎಲ್. ವಿನೀತ್ ಯಾದವ್, ಕುಶಾಲ್ ವಾದ್ವಾನಿ, ವಿಕಾಶ್ ಕುಮಾರ್ ಸಿನ್ಹಾ, ರಾಮ್ ಸಾರಿಕ್ ಯಾದವ್ ಅವರಂತಹ ಆಟಗಾರರು ತಂಡದಲ್ಲಿದ್ದಾರೆ.

ಹರಾಜು ಪ್ರಕ್ರಿಯೆಯಲ್ಲಿ 215 ಆಟಗಾರರು ಭಾಗವಹಿಸಿದ್ದರು. ಅವರನ್ನು ಎರಡು ವಿಭಿನ್ನ ಗುಂಪುಗಳಲ್ಲಿ ಪ್ರತ್ಯೇಕಿಸಿ ಆಯ್ಕೆ ಮಾಡಲಾಗಿದೆ.ಈ ಕುರಿತಂತೆ  ಮಾತನಾಡಿದ  ಮೈಸೂರು ವಾರಿಯರ್ಸ್ ನ ಮಾಲೀಕರಾದ ಅರ್ಜುನ್ ರಂಗ ಅವರು ತಮ್ಮ ತಂಡದಲ್ಲಿ ಅನುಭವಿ ಆಟಗಾರರ ಸಮತೋಲನ ಸಂಖ್ಯೆಯನ್ನು ಹೊಂದಿದ್ದು,  ಆಯ್ಕೆ ಮಂಡಳಿ ಉತ್ತಮ ಆಟಗಾರರನ್ನು ಒಟ್ಟುಗೂಡಿಸಿದ್ದಾರೆ ಮುಂದಿನ ಪಂದ್ಯದಲ್ಲಿ ತಂಡದ ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡುವ  ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಪಂದ್ಯಾವಳಿಯು  ಸೆಪ್ಟೆಂಬರ್ 1ರಿಂದ ಆರಂಭಗೊಳ್ಳಲಿದ್ದು, ಬೆಂಗಳೂರು, ಮೈಸೂರು ಮತ್ತು ಹುಬ್ಬಳ್ಳಿ ಯಲ್ಲಿ ನಡೆಯಲಿದೆ. ಮೈಸೂರು ವಾರಿಯರ್ಸ್ ಸೇರಿದಂತೆ ಬಳ್ಳಾರಿ ಟಸ್ಕರ್ಸ್, ಬೆಳಗಾವಿ ಪ್ಯಾಂಥರ್ಸ್, ಬಿಜಾಪುರ ಬುಲ್ಸ್, ನಮ್ಮಶಿವಮೊಗ್ಗ, ಹುಬ್ಬಳ್ಳಿ ಟೈಗರ್ಸ್ ಮತ್ತು ಕಲ್ಯಾಣಿ ಬ್ಲಾಸ್ಟರ್ಸ್ ತಂಡಗಳು ಗೆಲುವಿಗಾಗಿ ಸೆಣಸಾಟ ನಡೆಸಲಿವೆ. ಈ ವರ್ಷದ ಕಾರ್ಬನ್ ಸ್ಮಾರ್ಟ್ ಫೋನ್ ಕೆಪಿಎಲ್ 2017ರ ಪಂದ್ಯವನ್ನು ಕೆಎಸ್ ಸಿಎ ಮಾಜಿ ಅಧ್ಯಕ್ಷ ಮತ್ತು ಮೈಸೂರು ರಾಜ ಕುಟುಂಬದ ಕುಡಿ ಶ್ರೀಕಾಂತದತ್ತ ನರಸಿಂಹರಾಜ ವಡೆಯರ್ ಸ್ಮರಣಾರ್ಥ ಆಡಲಾಗುತ್ತದೆ. 8 ತಂಡಗಳ ನಡುವೆ ಸ್ಪರ್ಧೆ ನಡೆಯಲಿದೆ. ಮೊದಲ ಹಂತದ ಪಂದ್ಯಾವಳಿಯು ಮೈಸೂರಿನಲ್ಲಿ ನಂತರ  ಹುಬ್ಬಳ್ಳಿಯಲ್ಲಿ ನಡೆಯಲಿದೆ ಎನ್ನಲಾಗಿದೆ.

See also  ಅವನಿ ಲೇಖರಾಗೆ ಎರಡು ಪದಕ: ಪ್ರಧಾನಿ, ರಾಷ್ಟ್ರಪತಿ ಅಭಿನಂದನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು