News Kannada
Wednesday, November 30 2022

ಕ್ರೀಡೆ

ಬಾಕ್ಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಚಾಮರಾಜನನಗರ ಯೋಧ ಶಿವಶಂಕರಪ್ಪ - 1 min read

Photo Credit :

ಬಾಕ್ಸಿಂಗ್ ನಲ್ಲಿ ದೇಶಕ್ಕೆ ಕೀರ್ತಿ ತಂದ ಚಾಮರಾಜನನಗರ ಯೋಧ ಶಿವಶಂಕರಪ್ಪ

ಚಾಮರಾಜನಗರ: ಭಾನುವಾರ ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿ ನಡೆದ ಬಾಕ್ಸಿಂಗ್ನಲ್ಲಿ  ಸ್ಪೇನ್ ವಿರುದ್ಧ ಚಾಮರಾಜನಗರ ಜಿಲ್ಲೆಯ ಯೋಧ ಎಚ್. ಎಂ. ಶಿವಶಂಕರಪ್ಪ ಚಿನ್ನದ ಪದಕ ಗಳಿಸಿ ಜಿಲ್ಲೆ ಮತ್ತು ದೇಶಕ್ಕೆ ಕೀರ್ತಿ ತಂದಿದ್ದಾರೆ. ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಹಂಗಳ ಹೋಬಳಿಯ ಹೊನ್ನೇಗೌಡನಹಳ್ಳಿ ಗ್ರಾಮದ ಎಚ್.ವಿ.ಮಹದೇವಪ್ಪ ಹಾಗೂ ಮಲ್ಲಿಗಮ್ಮನವರ ಪುತ್ರ ಎಚ್.ಎಂ.ಶಿವಶಂಕರಪ್ಪ ಬಾಕ್ಸಿಂಗ್ ನಲ್ಲಿ ಚಿನ್ನದ ಪದಕ ಪಡೆದವರು.

2003ರಲ್ಲಿ ಭಾರತೀಯ ಗಡಿಭದ್ರತಾಪಡೆಗೆ ಸೇರಿದ ಇವರು ಸದ್ಯ ದೆಹಲಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸೇವಾ ಅವಧಿಯಲ್ಲಿ 2004 ರಿಂದ 2007ರ ವರೆಗೆ ಬಾಕ್ಸಿಂಗ್ ತರಬೇತಿ ಪಡೆದು 2008-09 ರಲ್ಲಿ ಅಖಿಲ ಭಾರತ ಪೊಲೀಸ್ ಅಕಾಡೆಮಿಯ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ಬೆಳ್ಳಿ ಪದಕ, ನಂತರ 2010ರಿಂದ 15ರವರೆಗೆ ನಡೆದ ಎಲ್ಲಾ ಸ್ಪರ್ಧೆಗಳಲ್ಲಿಯೂ ಭಾಗವಹಿಸಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. 2012ರಲ್ಲಿ ಬ್ರೆಜಿಲ್ನಲ್ಲಿ ನಡೆದ ಬಾಕ್ಸಿಂಗ್ ಸ್ಪಧರ್ೆಯಲ್ಲಿ ಭಾಗವಹಿಸಿ ಚಿನ್ನದ ಪದಕ, 2016ರಲ್ಲಿ ಯುಎಸ್ಎ  ವರ್ಜಿನಿಯಾದ ವಾಷಿಂಗ್ಟನ್ನಲ್ಲಿ ನಡೆದ ವಿಶ್ವ ಪೊಲೀಸ್ ಕ್ರೀಡಾಕೂಟದಲ್ಲಿ ಅತಿಹೆಚ್ಚು ಭಾರದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಬೆಳ್ಳಿಯ ಪದಕ ಪಡೆದುಕೊಂಡಿದ್ದರು.ಆ 13ರ ಭಾನುವಾರ ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿ ಸ್ಪೇನ್ ವಿರುದ್ದ ನಡೆದ ಬಾಕ್ಸಿಂಗ್ ಕ್ರೀಡಾಕೂಟದಲ್ಲಿ ಚಿನ್ನದ ಪದಕಗಳಿಸಿ ದೇಶಕ್ಕೆ ಕೀರ್ತಿ ತಂದಿದಕ್ಕೆ ಕುಟುಂಬಸ್ತರು, ಸ್ನೇಹಿತರು ಹರ್ಷವ್ಯಕ್ತಪಡಿಸಿದ್ದಾರೆ. ಪತ್ನಿ ಸಂದ್ಯಾರಾಣಿ ಹಾಗೂ ಮಗಳು ಲೇಖನಾ ಇದ್ದು ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದಾರೆ.

See also  ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ವಾರ್ನರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು