News Kannada
Tuesday, September 27 2022

ಕ್ರೀಡೆ

ಆಸೀಸ್ ಬ್ಯಾಟ್ಸ್ ಮೆನ್ ಗಳಿಗೆ ಟೀಂ ಇಂಡಿಯಾ ಭೀತಿ! - 1 min read

Photo Credit :

ಆಸೀಸ್ ಬ್ಯಾಟ್ಸ್ ಮೆನ್ ಗಳಿಗೆ ಟೀಂ ಇಂಡಿಯಾ ಭೀತಿ!

ರಾಂಚಿ: ಆಸ್ಟ್ರೇಲಿಯಾ ಬ್ಯಾಟ್ಸ್ ಮೆನ್ ಗಳಿಗೆ ಟೀಂ ಇಂಡಿಯಾದ ಭೀತಿಯಿತ್ತು ಎಂದು ಆಸ್ಟ್ರೇಲಿಯಾ ತಂಡದ ಹಂಗಾಮಿ ಕೋಚ್ ಡೇವಿಡ್ ಸಕೇರ್ ಅಭಿಪ್ರಾಯಪಟ್ಟಿದ್ದಾರೆ.

ಐದು ಏಕದಿನ ಪಂದ್ಯಗಳ ಸರಣಿಯಲ್ಲಿ ಟೀಂ ಇಂಡಿಯಾವು 4-1ರಿಂದ ಜಯಿಸಿತ್ತು. ಐದನೇ ಏಕದಿನ ಪಂದ್ಯವನ್ನು ಗೆದ್ದ ಟೀಂ ಇಂಡಿಯಾ ಏಕದಿನ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಪಡೆದುಕೊಂಡಿತ್ತು.

ನಾನು ಯಾವುದೇ ವೈಯಕ್ತಿಕ ಟೀಕೆ ಮಾಡುತ್ತಿಲ್ಲ. ಆದರೆ ಅವರ ಮನಸ್ಥಿತಿಯಿಂದ ಹೀಗೆ ಆಗಿದೆ ಮತ್ತು ಆದಷ್ಟು ಬೇಗ ಅವರು ಆಟಕ್ಕೆ ಮರಳಬೇಕು. ಹೆಚ್ಚಿನ ಬ್ಯಾಟ್ಸ್ ಮೆನ್ ಗಳು ಭೀತಿಯಿಂದ ಆಡುತ್ತಿದ್ದಾರೆ. ನಾವು ಹೀಗೆ ಮಾಡಬಾರದು. ಬ್ಯಾಟ್ಸ್ ಮೆನ್ ಗಳು ಹೆಚ್ಚು ಸ್ವತಂತ್ರವಾಗಿ ಆಡಿ ರನ್ ಗಳಿಸಬೇಕು ಎಂದು ಸಕೇರ್ ತಿಳಿಸಿದರು.

ಶನಿವಾರ ರಾಂಚಿಯಲ್ಲಿ ನಡೆಯಲಿರುವ ಮೊದಲ ಟಿ-20ಯಲ್ಲಿ ಆಸ್ಟ್ರೇಲಿಯಾವು ಟೀ ಇಂಡಿಯಾವನ್ನು ಎದುರಿಸಲಿದೆ.

ಹೆಚ್ಚಿನವರು ತುಂಬಾ ಭೀತಿಯಿಂದ ಆಡುತ್ತಿದ್ದಾರೆ. ಈ ರೀತಿ ಆಡಬಾರದು. ಪಂದ್ಯಗಳನ್ನು ಸೋಲುತ್ತಿರುವಾಗ ಇಂತಹ ಭೀತಿ ಕಾಡುವುದು ಸಹಜ. ಕೆಲವೊಂದು ಸಲ ಇದು ತುಂಬಾ ನಾಟಕೀಯವೆನಿಸಬಹುದು. ಇದನ್ನು ಬಗೆಹರಿಸಬಹುದು. ತಂಡದಲ್ಲಿ ಪ್ರತಿಭೆಯಿದೆ ಎಂದರು.

See also  ಶ್ರೀಲಂಕಾ ಬೌಲರ್ ಕುಲಶೇಖರ ಅವರನ್ನು ಬಂಧಿಸಿದ ಪೋಲೀಸರು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು