News Kannada
Monday, September 26 2022

ಕ್ರೀಡೆ

ಕಪಿಲ್, ಕ್ಯಾಲೀಸ್, ಪಾಂಡ್ಯಗೆ ಈ ದಿನ ತುಂಬಾ ವಿಶೇಷವಾದದ್ದು! - 1 min read

Photo Credit :

ಕಪಿಲ್, ಕ್ಯಾಲೀಸ್, ಪಾಂಡ್ಯಗೆ ಈ ದಿನ ತುಂಬಾ ವಿಶೇಷವಾದದ್ದು!

ನವದೆಹಲಿ: ವಿಶ್ವಕ್ರಿಕೆಟಿನಲ್ಲಿ ಶ್ರೇಷ್ಠ ಆಲ್ ರೌಂಡರ್ ಯಾರು ಎಂದು ಕೇಳಿದರೆ ಮೊದಲ ಹೆಸರು ಬರುವುದು ಗ್ಯಾರಿ ಸೋಬರ್ಸ್. ಇದೇ ಪಟ್ಟಿಯಲ್ಲಿ ಭಾರತದ ಕಪಿಲ್ ದೇವ್ ಮತ್ತು ದಕ್ಷಿಣ ಆಫ್ರಿಕಾದ ಜಾಕಸ್ ಕ್ಯಾಲೀಸ್ ಅವರೂ ಇದ್ದಾರೆ. ಇವರಿಬ್ಬರಿಗೆ ಅ.16 ತುಂಬಾ ವಿಶೇಷ ದಿನವಾಗಿದೆ.

ಜಾಕಸ್ ಕ್ಯಾಲೀಸ್ ಅ.16ರಂದು ತನ್ನ 42ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಕಪಿಲ್ ಇದೇ ದಿನ 1978ರಲ್ಲಿ ಪಾಕಿಸ್ತಾನ ವಿರುದ್ಧ ಫೈಸ್ಲಾಬಾದ್ ನಲ್ಲಿ ಟೆಸ್ಟ್ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು.

ಕಪಿಲ್ ಟೆಸ್ಟ್ ಕ್ರಿಕೆಟಿನಲ್ಲಿ ಗರಿಷ್ಠ ವಿಕೆಟ್ ಸಾಧಕರಲ್ಲಿ ರಿಚರ್ಡ್ ಹೆಡ್ಲಿ ದಾಖಲೆ ಮುರಿದಿದ್ದರು. ಕಪಿಲ್ 131 ಟೆಸ್ಟ್ ನಲ್ಲಿ 434 ವಿಕೆಟ್ ಕಬಳಿಸಿದ್ದಾರೆ. ಕಪಿಲ್ 83 ವಿಕೆಟ್ ಗಳಿಗೆ 9 ವಿಕೆಟ್ ಕಬಳಿಸಿರುವುದು ಅವರ ಜೀವನಶ್ರೇಷ್ಠ ಸಾಧನೆಯಾಗಿದೆ. ಕಪಿಲ್ 8 ಟೆಸ್ಟ್ ಮತ್ತು 27 ಅರ್ಧಶತಕದೊಂದಿಗೆ 5,248 ರನ್ ಬಾರಿಸಿದ್ದಾರೆ.

ಕಳೆದ ವರ್ಷ ಇದೇ ದಿನ ಧರ್ಮಶಾಲಾದಲ್ಲಿ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಏಕದಿನ ಕ್ರಿಕೆಟಿಗೆ ಪಾದಾರ್ಪಣೆ ಮಾಡಿದ್ದರು. ಪಾಂಡ್ಯ ಮೂರು ಟೆಸ್ಟ್, 26 ಏಕದಿನ ಮತ್ತು 21 ಟಿ20 ಪಂದ್ಯಗಳನ್ನು ಆಡಿದ್ದಾರೆ.

2014ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದ ಕ್ಯಾಲೀಸ್ 166 ಟೆಸ್ಟ್, 328 ಏಕದಿನ ಮತ್ತು 24 ಟಿ20 ಪಂದ್ಯಗಳನ್ನು ಆಡಿದ್ದಾರೆ.

See also  ಮಗನ ಮದುವೆಗೆ ಹೋಗಲ್ಲ: ಯುವರಾಜ್ ಸಿಂಗ್ ತಂದೆ ಹೇಳಿಕೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು