News Kannada
Monday, September 26 2022

ಕ್ರೀಡೆ

ಬರ್ತ್ ಡೇ ಬಾಯ್ ಕುಂಬ್ಳೆಗೆ ಸೆಹ್ವಾಗ್ ಈ ರೀತಿ ಟ್ವೀಟ್? - 1 min read

Photo Credit :

ಬರ್ತ್ ಡೇ ಬಾಯ್ ಕುಂಬ್ಳೆಗೆ ಸೆಹ್ವಾಗ್ ಈ ರೀತಿ ಟ್ವೀಟ್?

ನವದೆಹಲಿ: ಧನ್ ತೇರಸ್ ದಿನ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಮಾಜಿ ನಾಯಕ ಅನಿಲ್ ಕುಂಬ್ಳೆ ಭಾರತದ ಶ್ರೇಷ್ಠ ಧನ(ಸಂಪತ್ತು) ಇದ್ದಂತೆ ಎಂದು ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ತುಂಬಾ ವಿಶೇಷವಾಗಿ ಟ್ವೀಟ್ ಮಾಡಿದ್ದಾರೆ.

ಜಂಬೋ ಎಂದು ಕರೆಯಲ್ಪಡುವ ಕರ್ನಾಟಕದ ಈ ಆಟಗಾರನನ್ನು ಕುಂಬ್ಳೆ ವಿಶೇಷ ರೀತಿ ಕೊಂಡಾಡಿದ್ದಾರೆ. ಸೆಹ್ವಾಗ್ ಈ ಟ್ವೀಟ್ ಬಾರಿ ಜನರನ್ನು ಆಕರ್ಷಿಸಿದೆ.

`ಧನ್ ತೇರಸ್ ದಿನ ಭಾರತದ ಶೇಷ್ಠ ಧನ@ಅನಿಲ್ ಕುಂಬ್ಳೆ1074 ಭಾಯಿ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು. ಜೈಜೈ ಶಿವ ಶಂಭೋ, ಹುಟ್ಟುಹಬ್ಬದ ಶುಭಾಶಯ ಜಂಬೋ’ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ರವಿಶಾಸ್ತ್ರಿ ಟೀಂ ಇಂಡಿಯಾದ ಕೋಚ್ ಆಗುವ ಮೊದಲು ಕುಂಬ್ಳೆ ಕೋಚ್ ಆಗಿದ್ದರು. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದ ಕುಂಬ್ಳೆ 132 ಟೆಸ್ಟ್ ಮತ್ತು 271 ಏಕದಿನ ಪಂದ್ಯಗಳನ್ನು ಆಡಿದ್ದಾರೆ.

619 ಟೆಸ್ಟ್ ವಿಕೆಟ್ ಪಡೆದಿರುವ ಕುಂಬ್ಳೆ ದೆಹಲಿಯ ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಒಂದೇ ಇನ್ನಿಂಗ್ಸ್ ನಲ್ಲಿ ಹತ್ತು ವಿಕೆಟ್ ಕಬಳಿಸಿದ್ದರು. ಕುಂಬ್ಳೆ 337 ಏಕದಿನ ವಿಕೆಟ್ ಪಡೆದುಕೊಂಡಿದ್ದಾರೆ.

See also  ಕೊನೇ ಕ್ಷಣದಲ್ಲಿ ಸೋತ ಈಜಿಪ್ಟ್: ವೀಕ್ಷಕ ವಿವರಣೆಗಾರನಿಗೆ ಹೃದಯಾಘಾತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು