News Kannada
Tuesday, September 27 2022

ಕ್ರೀಡೆ

ಮೂರು ದಿನಗಳ ಕಾಲ ಮೈಸೂರು ಮೇಯರ್ ಗೋಲ್ಡ್ ಕಪ್ ಕಬ್ಬಡಿ ಪಂದ್ಯಾವಳಿ - 1 min read

Photo Credit :

ಮೂರು ದಿನಗಳ ಕಾಲ ಮೈಸೂರು ಮೇಯರ್ ಗೋಲ್ಡ್ ಕಪ್ ಕಬ್ಬಡಿ ಪಂದ್ಯಾವಳಿ

ಮೈಸೂರು: ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಮೂರು ದಿನಗಳ ಕಾಲ ಮೇಯರ್ ಗೋಲ್ಡ್ ಕಪ್ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನ ಆಯೋಜಿಸಲಾಗಿದೆ ಎಂದು ಮೈಸೂರು ಮೇಯರ್ ಎಂ.ಜೆ ರವಿಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

ಇದೇ ತಿಂಗಳ 9ರಿಂದ 11 ರವರೆಗೆ ಮೂರು ದಿನಗಳ ನಗರದ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ಪುರುಷರು ಮತ್ತು ಮಹಿಳೆಯರ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದ್ದು, ಈ ಮೇಯರ್ ಗೋಲ್ಡ್ ಕಪ್ ಕಬ್ಬಡಿ ಪಂದ್ಯಾವಳಿಯಲ್ಲಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ವಿವಿಧ ಭಾಗಗಳಿಂದ ಒಟ್ಟು 32 ತಂಡಗಳು ಭಾಗವಹಿಸುತ್ತಿವೆ.

ಮೂರು ದಿನಗಳ ಕಾಲ ನಡೆಯುವ ಮೇಯರ್ ಗೋಲ್ಡ್ ಕಪ್ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಗಳನ್ನು ವೀಕ್ಷಣೆ ಮಾಡಲು ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು, ಪುರುಷರು ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 2 ಲಕ್ಷ, ದ್ವೀತಿಯ ಬಹುಮಾನವಾಗಿ 1 ಲಕ್ಷ, ತೃತೀಯ ಬಹುಮನವಾಗಿ 50 ಸಾವಿರ, ಬೆಸ್ಟ್ ಕ್ಯಾಚರ್ ಗೆ 10 ಸಾವಿರ, ಬೆಸ್ಟ್ ರೈಡರ್ ಗೆ 10 ಸಾವಿರ ಹಾಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ 25 ಸಾವಿರ ಬಹುಮಾನ ನೀಡಲಾಗುತ್ತದೆ.

ಇನ್ನೂ ಮಹಿಳೆಯರ ವಿಭಾಗದಲ್ಲಿ ಪ್ರಥಮ ಬಹುಮಾನವಾಗಿ 1.5 ಲಕ್ಷ, ದ್ವೀತಿಯ ಬಹುಮಾನವಾಗಿ 1 ಲಕ್ಷ, ತೃತೀಯ ಬಹುಮನವಾಗಿ 40 ಸಾವಿರ, ಬೆಸ್ಟ್ ಕ್ಯಾಚರ್ ಗೆ 10 ಸಾವಿರ, ಬೆಸ್ಟ್ ರೈಡರ್ ಗೆ 10 ಸಾವಿರ ಹಾಗೂ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದವರಿಗೆ 15 ಸಾವಿರ ಬಹುಮಾನ ನೀಡಲಾಗುತ್ತದೆ.

ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಈ ಮೇಯರ್ ಕಪ್ ಕಬ್ಬಡಿ ಪಂದ್ಯಾವಳಿಗೆ 25 ಲಕ್ಷ ಪಾಲಿಕೆಯ ಹಣ ವೆಚ್ಚ ಮಾಡಲು ಕೌನ್ಸಿಲ್ ಅನುಮೋದನೆ ಪಡೆಯಲಾಗಿದೆ ಎಂದು ಮೈಸೂರು ಮೇಯರ್ ಎಂ.ಜೆ ರವಿಕುಮಾರ್ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು.

See also  ಚೆಂಡು ವಿರೂಪ ಪ್ರಕರಣ: ನಿಯಮ ಕಠಿಣಗೊಳಿಸಲಿರುವ ಐಸಿಸಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು