News Kannada
Monday, September 26 2022

ಕ್ರೀಡೆ

ಚಿನ್ನದ ಹುಡುಗ ಸಂಶೀರ್ ಮುಂದೆ ಒಲಿಂಪಿಕ್ಸ್ ಎಂಬ ದೊಡ್ಡ ಕನಸು - 1 min read

Photo Credit :

ಚಿನ್ನದ ಹುಡುಗ ಸಂಶೀರ್ ಮುಂದೆ ಒಲಿಂಪಿಕ್ಸ್ ಎಂಬ ದೊಡ್ಡ ಕನಸು

ಸುಳ್ಯ: ಒಲಿಂಪಿಕ್ಸ್ಗೆ ಅರ್ಹತೆ ಪಡೆಯಬೇಕು, ದೇಶಕ್ಕಾಗಿ ಒಂದು ಪದಕ ಗಳಿಸಬೇಕು. ಯಾವೊಬ್ಬ ಕ್ರೀಡಾಪಟುವಿನಂತೆ ತನ್ನ ದೊಡ್ಡ ಕನಸನ್ನು ಬಿಚ್ಚಿಡುತ್ತಾರೆ ಲಾಂಗ್ ಜಂಪ್ ನ ಚಿನ್ನದ ಹುಡುಗ ಎಸ್.ಇ.ಸಂಶೀರ್.

ಇತ್ತೀಚೆಗೆ ಚೆನ್ನೈನಲ್ಲಿ ನಡೆದ 57ನೇ ರಾಷ್ಟ್ರೀಯ ಮುಕ್ತ ಅತ್ಲೆಟಿಕ್ ಚಾಂಪಿಯಶಿಪ್ ನಲ್ಲಿ ರೈಲ್ವೇಸ್ಗಾಗಿ ಚಿನ್ನದ ಪದಕ ಪಡೆದ ಸಂಶೀರ್ ಸುಳ್ಯದ ಜಯನಗರದ ತನ್ನ ಮನೆಯಲ್ಲಿ ಕುಳಿತು ಭವಿಷ್ಯದ ಕನಸಿನ ಕುರಿತು ಮನ ಬಿಚ್ಚಿದರು. ಜಯನಗರದ ಎಸ್.ಎಂ.ಇಬ್ರಾಹಿಂ ಮತ್ತು ಆಯಿಷಾ ದಂಪತಿಗಳ ಪುತ್ರ ಸಂಶೀರ್ ತನ್ನ ಛಲ ಬಿಡದ ನಿರಂತರ ಪ್ರಯತ್ನದಿಂದ ಲಾಂಗ್ ಜಂಪ್ ತಾರೆಯಾಗಿ ಮಿಂಚುತ್ತಿದ್ದಾರೆ.

2020ರ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಭಾಗವಹಿಸಬೇಕೆಂಬ ತನ್ನ ಕನಸನ್ನು ನನಸು ಮಾಡಲು ಮನಸ್ಸನ್ನೂ ಶರೀರರವನ್ನು ಒಂದಾಗಿಸಿ ಪ್ರಯತ್ನಿಸುತ್ತಿದ್ದಾರೆ ಸಂಶೀರ್. ಅದಕ್ಕಿಂತ ಮುನ್ನ ಏಷ್ಯನ್ ಗೇಮ್ಸ್ ಮತ್ತು ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾಗವಹಿಸಿ ಪದಕ ಪಡೆಯಬೇಕು ಎಂಬ ಗುರಿ ಸಂಶೀನ್ ಮುಂದಿದೆ. ತನ್ನ ಸರ್ವಶ್ರೇಷ್ಠ ಸಾಧನೆ ಮಾಡಿ 7.74 ಮೀಟರ್ ನೆಗೆದ ಸಂಶೀರ್ ಮುಂದೆ 7.81 ದೂರ ಜಿಗಿದು ಏಷ್ಯನ್ ಗೇಮ್ಸ್ ಮತ್ತು ಎಂಟು ಮೀಟರ್ ಜಿಗಿದು ಕಾಮನ್ವೆಲ್ತ್ ಗೇಮ್ಸ್ಗೆ ಅರ್ಹತೆ ಪಡೆಯುವ ತವಕದಲ್ಲಿದ್ದಾರೆ. ಅಲ್ಲಿ ಅರ್ಹತೆಯ ಜೊತೆಗೆ ಪದಕವನ್ನೂ ಪಡೆದರೆ ತನ್ನ ಕನಸಿನ ಒಲಿಂಪಿಕ್ಸ್ ಅಂಗಳಕ್ಕೆ ಜಿಗಿಯುವ ಹಾದಿ ಇನ್ನಷ್ಟು ಸುಗಮವಾಗಬಹುದು ಎಂಬುದು ಸಂಶೀರ್ನ ಲೆಕ್ಕಾಚಾರ. ಚೆನ್ನೈನಲ್ಲಿ ಪಡೆದ ಚಿನ್ನ ಭವಿಷ್ಯದ ಸಿದ್ಧತೆಗೆ ಆತ್ಮ ವಿಶ್ವಾಸ ಮತ್ತು ಧೈರ್ಯವನ್ನು ತುಂಬುತಿದೆ ಎನ್ನುತ್ತಾರೆ ಸಂಶೀರ್.

ಜಾವಲಿನ್ ತ್ರೋ ದಿಂದ ಲಾಂಗ್ ಜಂಪ್ ವರೆಗೆ: ಜಾವಲಿನ್ ತ್ರೋ ಪಟುವಾಗಿದ್ದ ಹುಡುಗ ಲಾಂಗ್ ಜಂಪ್ ತಾರೆಯಾಗಿ ಬೆಳೆದ ಕಥೆ ಸಂಶೀರ್ನದ್ದು. ಹೈಸ್ಕೂಲ್ ಮಟ್ಟದಲ್ಲಿ ಜಾವಲಿನ್ ತ್ರೋ ಮತ್ತು ಟ್ರಿಫಲ್ ಜಂಪ್ ನಲ್ಲಿ ಪದಕ ಪಡೆಯುತ್ತಿದ್ದ ಸಂಶೀರ್ ಮೂಡಬಿದ್ರೆಯ ಆಳ್ವಾಸ್ ಕಾಲೇಜಿಗೆ ಸೇರಿದ ಬಳಿಕ ಲಾಂಗ್ ಜಂಪ್ ನತ್ತ ಚಿತ್ತ ಹರಿಸಿದರು. ತರಬೇತುದಾರರ ಸೂಚನೆಯ ಮೇರೆಗೆ ಅವರು ಲಾಂಗ್ ಜಂಪ್ನತ್ತ ಗಮನ ಹರಿಸಿ ಯಶಸ್ವಿಯಾದರು. ಸಂಶೀರ್ ಎಂಬ ಕ್ರೀಡಾಪಟುವನ್ನು ಸೃಷ್ಠಿಸಿ ದೇಶದ ಕ್ರೀಡಾ ಕ್ಷೇತ್ರಕ್ಕೆ ನೀಡಿರುವುದರಲ್ಲಿ ಆಳ್ವಾಸ್ ಕಾಲೇಜಿನ ಪಾತ್ರ ಬಲು ಹಿರಿದಾದುದು.

ಆಳ್ವಾಸ್ನಲ್ಲಿ ಐದು ವರ್ಷಗಳ ಕಾಲ ಉಚಿತ ಶಿಕ್ಷಣ, ತರಬೇತಿ, ಪ್ರೋತ್ಸಾಹ ಮತ್ತು ಸಹಾಯದಿಂದ ಬೆಳೆದ ಸಂಶೀರ್ ರಾಜ್ಯ, ರಾಷ್ಟ್ರ ಮತ್ತು ವಿವಿ ಮಟ್ದಲ್ಲಿ ಪದಕಗಳನ್ನು ಬಾಚಿದರು. ಲಾಂಗ್ ಜಂಪ್ ಜೊತೆಗೆ ಟ್ರಿಪಲ್ ಜಂಪ್, ರಿಲೇಗಳಲ್ಲಿ ಹಲವು ಪದಕಗಳನ್ನು ಹಾಕಿ ಕೊಂಡಿದ್ದಾರೆ. ಒಬ್ಬ ಕ್ರೀಡಾಪಟುವನ್ನಾಗಿ ಆಳ್ವಾಸ್ ಕಾಲೇಜು ತನ್ನನ್ನು ಬೆಳೆಸಿದೆ ಎಂದು ಸಂಶೀರ್ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.

ಪದಕಗಳ ಬೇಟೆಯ ಹಾದಿ: 2012ರ ನ್ಯಾಷನಲ್ ಸ್ಕೂಲ್ ಗೇಮ್ಸ್ನಲ್ಲಿ ಲಾಂಗ್ ಜಂಪ್, ಟ್ರಿಪಲ್ ಜಂಪ್ ಮತ್ತ ರಿಲೇಯಲ್ಲಿ ಚಿನ್ನದ ಬೇಟೆಯಾಡಿದ ಅವರು ವಲಯ ಮತ್ತು ದಕ್ಷಿಣ ವಲಯ ಮಟ್ಟದಲ್ಲಿ ಬೆಳ್ಳಿಯ ಪದಕ ಪಡೆದರು. 20 ವರ್ಷ ಕೆಳಗಿನ ವಿಭಾಗದಲ್ಲಿ ಕರ್ನಾಟಕ ರಾಜ್ಯಮಟ್ಟದಲ್ಲಿ ದಾಖಲೆಯೊಂದಿಗೆ ಲಾಂಗ್ ಜಂಪ್ ಮತ್ತು ಟ್ರಿಪಲ್ ಜಂಪ್ನಲ್ಲಿ ಚಿನ್ನ ಪಡೆದರು. ಹೀಗೆ ಅಂತರ್ ವಿವಿ, ರಾಜ್ಯ ರಾಷ್ಟ್ರ ಮಟ್ಟದಲ್ಲಿ ಪದಕ ಪಡೆಯುತ್ತಾ ಮುನ್ನುಗ್ಗಿದ ಸಂಶೀರ್ 2015ರಲ್ಲಿ ಕೇರಳದಲ್ಲಿ ನಡೆದ ನ್ಯಾಷನಲ್ ಗೇಮ್ಸ್ ನಲ್ಲಿ ಕರ್ನಾಟಕ್ಕಾಗಿ ಕಂಚಿನ ಪದಕ ಪಡೆದರು.

See also  ಸಚಿನ್ 2003ರ ವಿಶ್ವಕಪ್ ನಲ್ಲಿ 98ರನ್ ಗೆ ಔಟಾಗಿರುವುದು ಬೇಸರ ಮೂಡಿಸಿತ್ತು: ಅಖ್ತರ್

7.46 ಮೀಟರ್ ಜಿಗಿದು ಕಂಚಿನ ಪದಕ ಪಡೆದಾಗ ದೇಶವೇ ಇವರತ್ತ ಗಮನ ಹರಿಸಿತು. ಇದು ಅವರ ಕ್ರೀಡಾ ಬದುಕಿಗೆ ಬಲು ದೊಡ್ಡ ಟರ್ನೀಂಗ್ ನೀಡಿತು. ಬಳಿಕ ತನ್ನ ನೆಗೆತದ ದೂರವನ್ನು ಹೆಚ್ಚಿಸುತ್ತಾ ಪದಕ ಬೇಟೆಯನ್ನು ಮುಂದುವರಿಸುತ್ತಾ ಸಾಗಿದ್ದಾರೆ. ಈ ವರ್ಷ ಚೆನ್ನೈನಲ್ಲಿ ಚಿನ್ನ ಪಡೆಯುವುದಕ್ಕಿಂತಲೂ ಮುನ್ನ ಫೆಡರೇಷನ್ ಸೀನಿಯರ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮತ್ತು ಗ್ರಾಂಡ್ಪ್ರಿಕ್ಸ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಬೆಳ್ಳಿ ಪದಕ ಪಡೆದಿದ್ದಾರೆ. ಏಷ್ಯನ್ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ ಮತ್ತು ಏಷ್ಯನ್ ಇಂಡೋರ್ ಅತ್ಲೆಟಿಕ್ಸ್ ಚಾಂಪಿಯನ್ ಶಿಫ್ ನಲ್ಲಿ ಭಾಗವಹಿಸಿದ್ದರು. ತನ್ನ ಕ್ರೀಡಾ ಕನಸಿನ ಸಾಕಾರಕ್ಕಾಗಿ ಸದಾ ಪ್ರಯತ್ನಿಸುತ್ತಿರುವ ಸಂಶೀರ್ ಈಗ ತಿರುವನಂತಪುರದ ರಾಷ್ಟ್ರೀಯ ಶಿಬಿರದಲ್ಲಿ ತೀವ್ರ ತರಬೇತಿ ಪಡೆಯುತ್ತಿದ್ದಾರೆ. ಪಶ್ಚಿಮ ರೈಲ್ವೇಯಲ್ಲಿ ಅಧಿಕಾರಿಯಾಗಿದ್ದಾರೆ ಇವರು.

ಆರ್ಥಿಕ ಸಂಕಷ್ಟದ ಮಧ್ಯೆ ಗೆಲುವಿನ ನಗೆ: ದೊಡ್ಡ ಆರ್ಥಿಕ ಸಂಕಷ್ಟದ ಹೊರೆಯ ಮಧ್ಯೆ ಗೆಲುವಿನ ನಗೆ ಬೀರುತ್ತಿರುವುದು ಸಂಶೀರ್ನ ಹಿರಿಮೆ. ಸಂಶೀರ್ ತಂದೆ ಇಬ್ರಾಹಿಂ ಮತ್ತು ಆಯಿಷಾ ಆರ್ಥಿಕ ಸಂಕಷ್ಟದ ಮಧ್ಯೆಯೂ ಮಗನನ್ನು ಕ್ರೀಡಾಪಟುವಾಗಿ ಬೆಳೆಸಿದ್ದಾರೆ. ಜಯನಗರದಲ್ಲಿ ಕೇವಲ ಐದು ಸೆಂಟ್ಸ್ ಜಾಗ ಮತ್ತು ಒಂದು ಸಾಮಾನ್ಯ ಹೆಂಚಿನ ಮನೆ ಮಾತ್ರ ಇವರ ಆಸ್ತಿ. ತಾವು ದುಡಿದ ಆದಾಯದ ಜೊತೆಗೆ ಸಾಲ ಮಾಡಿಯೂ ಮಗನ ಬೆಳವಣಿಗೆಗೆ ಪ್ರಯತ್ನಿಸಿದ್ದಾರೆ. ತರಬೇತಿ, ಕ್ರೀಡಾ ಸಾಮಾಗ್ರಿಗಳ ಖರೀದಿ, ಪೌಷ್ಠಿಕ ಆಹಾರಗಳ ಟ್ಯಾಬ್ಲೇಟ್ ಖರೀದಿ ಸೇರಿದಂತೆ ದೊಡ್ಡ ಮೊತ್ತದ ಖರ್ಚು ತಗುಲುತ್ತದದೆ.

ಈಗಲೂ ಪ್ರತಿ ತಿಂಗಳು ಸಾವಿರಾರು ರೂಗಳು ಬೇಕಾಗುತ್ತದೆ ಎಂದು ಇಬ್ರಾಹಿಂ ಮತ್ತು ಆಯಿಷಾ ಹೇಳುತ್ತಾರೆ. ಸರ್ಕಾರಗಳಿಂದ ಯಾವುದೇ ಆರ್ಥಿಕ ನೆರವು ಸಿಕ್ಕಿಲ್ಲ, ವಿವಿಧ ಕ್ರೀಡಾಕೂಟಗಳಲ್ಲಿ ಪದಕ ಪಡೆದವರಿಗೆ ಕರ್ನಾಟಕ ಸರ್ಕಾರ ಘೋಷಣೆ ಮಾಡಿದ ಬಹುಮಾಮನದ ಮೊತ್ತವೂ ಇನ್ನೂ ಇವರ ಕೈ ಸೇರಿಲ್ಲ. ಸಂಶೀರ್ ಪಡೆದ ಪದಕಗಳ ಬಹುಮಾನದ ಬಾಬ್ತು ಸುಮಾರು ಮೂರು ಲಕ್ಷದಷ್ಟು ಸರ್ಕಾರದಿಂದ ಬರಲು ಬಾಕಿ ಇದೆ ಎನ್ನುತ್ತಾರವರು.

`ಒಲಿಂಪಿಕ್ಸ್ ನಲ್ಲಿ ಭಾಗವಹಿಸಿ ದೇಶಕ್ಕಾಗಿ ಒಂದು ಪದಕ ಪಡೆಯುವುದು ನನ್ನ ದೊಡ್ಡ ಕನಸು. ಅದಕ್ಕಾಗಿ ಕೋಚ್ ಗಳ ನಿರ್ದೇಶನದಂತೆ ತೀವ್ರ ತರಬೇತಿ ಪಡೆಯುತ್ತಿದ್ದೇನೆ. ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮತ್ತು ಒಲಿಂಪಿಕ್ಸ್ ತನ್ನ ಮುಂದಿರುವ ದೊಡ್ಡ ಗುರಿ’- -ಸಂಶೀರ್ ಎಸ್.ಇ.

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು