ಮುಂಬಯಿ: ಒಲಿಂಪಿಕ್ಸ್ ನಲ್ಲಿ ಕ್ರಿಕೆಟನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ) ಟಿ-10 ಮಾದರಿ ಬಗ್ಗೆ ಚಿಂತಿಸಬೇಕಾಗಿದೆ ಎಂದು ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೇವಾಗ್ ಅಭಿಪ್ರಾಯಪಟ್ಟಿದ್ದಾರೆ.
ಒಲಿಂಪಿಕ್ಸ್ ನಲ್ಲಿ ಕ್ರಿಕೆಟ್ ಸೇರಿಸಬೇಕೆನ್ನುವ ಬಗ್ಗೆ ನಾನು ಮಾತನಾಡುತ್ತಿದ್ದೇವೆ. ಆದರೆ ಇದಕ್ಕೆ ಟಿ-10 ಮಾದರಿಯು ತುಂಬಾ ಸೂಕ್ತಿ. ಯಾಕೆಂದರೆ ಇದು ಕೇವಲ 90 ನಿಮಿಷದಲ್ಲಿ ಕೊನೆಗೊಳ್ಳುವುದು ಮತ್ತು ಫುಟ್ಬಾಲ್ ಪಂದ್ಯದಷ್ಟೇ ಸಮಯ ಬೇಕಾಗುವುದು. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಜತೆ ಐಸಿಸಿ ಮಾತನಾಡಬೇಕು ಎಂದು ಸೇವಾಗ್ ಹೇಳಿದರು.
ಯುಎಇಯಲ್ಲಿ ಡಿ.14ರಿಂದ 17ರ ತನಕ ನಡೆಯಲಿರುವ ಟಿ-10 ಕ್ರಿಕೆಟ್ ಟೂರ್ನಮೆಂಟ್ ನಲ್ಲಿ ಸೇವಾಗ್ ಮರಾಠ ಅರೇಬಿಯನ್ಸ್ ತಂಡವನ್ನು ಮುನ್ನಡೆಸುವರು. ಈ ತಂಡದಲ್ಲಿ ಶ್ರೀಲಂಕಾದ ಮಾಜಿ ಆಟಗಾರ ಕುಮಾರ ಸಂಗಕ್ಕರ, ಪಾಕಿಸ್ತಾನದ ಮೊಹಮ್ಮದ್ ಅಮೀರ್ ಮತ್ತು ಕಮ್ರಾನ್ ಅಕ್ಮಲ್ ಅವರಿದ್ದಾರೆ.