News Kannada
Monday, October 03 2022

ಕ್ರೀಡೆ

ನಾಟಕೀಯ ಪತನ ಕಂಡ ಲಂಕಾ: ಟೀಂ ಇಂಡಿಯಾ ಭರ್ಜರಿ ಗೆಲುವು - 1 min read

Photo Credit :

ನಾಟಕೀಯ ಪತನ ಕಂಡ ಲಂಕಾ: ಟೀಂ ಇಂಡಿಯಾ ಭರ್ಜರಿ ಗೆಲುವು

ಇಂದೋರ್: ಹಂಗಾಮಿ ಕಪ್ತಾನ ರೋಹಿತ್ ಶರ್ಮಾ ಟಿ-20ಯಲ್ಲಿ ಮತ್ತೊಂದು ದಾಖಲೆ ಬರೆದಿದ್ದು, ಅತಿ ವೇಗದ ಶತಕ ಬಾರಿಸಿದ ಸಾಲಿನಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ದಾಖಲೆ ಸರಿಗಟ್ಟಿದ್ದಾರೆ. ಶರ್ಮಾ ಶತಕದಿಂದ ಎರಡನೇ ಟಿ-20 ಪಂದ್ಯದಲ್ಲಿ ಟೀಂ ಇಂಡಿಯಾ 88 ರನ್ ಗಳ ಭರ್ಜರಿ ಗೆಲುವು ಪಡೆದಿದೆ.

ಟೀಂ ಇಂಡಿಯಾ 261 ರನ್ ಗಳ ಗೆಲುವಿನ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ಒಂದು ಹಂತದಲ್ಲಿ ನಾಟಕೀಯ ಕುಸಿತಕ್ಕೆ ಒಳಗಾಗಿ ಕೇವಲ 17.2 ಓವರ್ ಗಳಲ್ಲಿ 172 ರನ್ ಗಳಿಗೆ ಸೋಲುಂಡಿತು. ಲಂಕಾ ಪರ ಕುಸಾಲ್ ಪೆರೇರಾ 71 ರನ್ ಮತ್ತು ಉಪುಲ್ ತರಂಗಾ 47 ರನ್ ಬಾರಿಸಿದತು. ಇದನ್ನು ಹೊರತುಪಡಿಸಿ ಲಂಕಾ ಬೇರೆ ಬ್ಯಾಟ್ಸ್ ಮೆನ್ ಗಳು ಪೆವಿಲಿಯನ್ ಪರೇಡ್ ನಡೆಸಿದರು. ಕೇವಲ 10 ಎಸೆತಗಳಲ್ಲಿ 5 ವಿಕೆಟ್ ಕಳಕೊಂಡ ಲಂಕಾ ನಾಟಕೀಯ ಕುಸಿತ ಕಂಡಿತು.

ಲಂಕಾ ಕುಸಿತದಲ್ಲಿ ಟೀಂ ಇಂಡಿಯಾದ ಸ್ಪಿನ್ನರ್ ಗಳಾದ ಯಜುವೇಂದ್ರ ಚಾಹಲ್ ನಾಲ್ಕು ವಿಕೆಟ್ ಮತ್ತು ಕುಲದೀಪ್ ಯಾದವ್ ಮೂರು, ಉನಾದ್ಕತ್ ಮತ್ತು ಪಂಡ್ಯಾ ತಲಾ ಎರಡೆರಡು ವಿಕೆಟ್ ಉರುಳಿಸಿ ಪ್ರಮುಖ ಪಾತ್ರ ವಹಿಸಿದರು.

ಇದಕ್ಕೆ ಮೊದಲು ರೋಹಿತ್ ಶರ್ಮಾ 35 ಎಸೆತಗಳಲ್ಲಿ 8 ಸಿಕ್ಸ್ ಹಾಗೂ 11 ಬೌಂಡರಿ ಸಹಿತ 101 ರನ್ ಸಿಡಿಸಿದರು. ಇದು ರೋಹಿತ್ ಎರಡನೇ ಟಿ-20 ಶತಕವಾಗಿದೆ.

ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ರೋಹಿತ್ ಶರ್ಮಾ ಈ ದಾಖಲೆ ಸರಿಗಟ್ಟಿದ್ದಾರೆ.

ಶರ್ಮಾ ಶತಕದೊಂದಿಗೆ ಕೆಎಲ್ ರಾಹುಲ್ ಅರ್ಧಶತಕ ಬಾರಿಸಿ ತಂಡದ ಬೃಹತ್ ಮೊತ್ತಕ್ಕೆ ನೆರವಾದರು.

See also   ಐಸಿಸಿ ಮಹಿಳಾ ವಿಶ್ವಕಪ್‌ ಟೂರ್ನಿ: ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಸೋಲು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು