News Kannada
Sunday, September 25 2022

ಕ್ರೀಡೆ

ಕೊಹ್ಲಿ ಕಳಪೆ ಬ್ಯಾಟಿಂಗ್: ತವರಿಗೆ ಮರಳಿದ ನವವಧು ಅನುಷ್ಕಾ! - 1 min read

Photo Credit :

ಕೊಹ್ಲಿ ಕಳಪೆ ಬ್ಯಾಟಿಂಗ್: ತವರಿಗೆ ಮರಳಿದ ನವವಧು ಅನುಷ್ಕಾ!

ಮುಂಬಯಿ: ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟೆಸ್ಟ್ ನ ಮೊದಲ ಇನ್ನಿಂಗ್ಸ್ ನಲ್ಲಿ ಕಪ್ತಾನ ವಿರಾಟ್ ಕೊಹ್ಲಿ ಸಂಪೂರ್ಣವಾಗಿ ವಿಫಲವಾಗಿರುವ ಕಾರಣ ಟ್ವಿಟರ್ ನಲ್ಲಿ ವ್ಯಾಪಕವಾಗಿ ಟ್ರಾಲ್ ಗೆ ಒಳಗಾಗಿರುವ ಅವರ ಪತ್ನಿ ಅನುಷ್ಕಾ ಶರ್ಮಾ ಭಾರತಕ್ಕೆ ಮರಳಿದ್ದಾರೆ.

ಮೊದಲ ಟೆಸ್ಟ್ ಪಂದ್ಯವನ್ನು ನೋಡಲು ನವವಧು ಅನುಷ್ಕಾ ಕೂಡ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದು ಹುರಿದುಂಬಿಸುತ್ತಿದ್ದರು. ಆದರೆ ಕೊಹ್ಲಿ ಕೇವಲ ಐದು ರನ್ ಗೆ ಬೇಗನೆ ಔಟಾಗಿ ಪತ್ನಿ ಹಾಗೂ ಕ್ರಿಕೆಟ್ ಪ್ರೇಮಿಗಳಿಗೆ ನಿರಾಶೆ ಉಂಟು ಮಾಡಿದ್ದರು.

ಇದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಕೊಹ್ಲಿ ಕಳಪೆ ಬ್ಯಾಟಿಂಗ್ ಗೆ ಅನುಷ್ಕಾರೇ ಕಾರಣವೆಂದು ಟ್ವಿಟರ್ ನಲ್ಲಿ ವ್ಯಾಪಕ ಟ್ರಾಲ್ ಆಗಿತ್ತು. ಇದರಿಂದ ಮನನೊಂದ ಅನುಷ್ಕಾ ಭಾರತಕ್ಕೆ ಹಿಂತಿರುಗಿದ್ದಾರೆ.

ಚಿತ್ರವೊಂದರ ಚಿತ್ತೀಕರಣದಲ್ಲಿ ಭಾಗವಹಿಸಲು ಅನುಷ್ಕಾ ಬಂದಿದ್ದಾರೆ ಎಂದು ಕೆಲವು ಮೂಲಗಳು ಹೇಳಿವೆ. ಆದರೆ ಏನೇ ಆದರೂ ಕೊಹ್ಲಿ ಕಳಪೆ ಬ್ಯಾಟಿಂಗ್ ಗೆ ಅನುಷ್ಕಾ ಎರಡನೇ ಸಲ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇದಕ್ಕೆ ಮೊದಲು ಅವರಿಬ್ಬರು ಪ್ರೀತಿಸಲು ಆರಂಭಿಸಿದ ದಿನಗಳಲ್ಲಿ ಅನುಷ್ಕಾ ಪ್ರೇಕ್ಷಕರ ಗ್ಯಾಲರಿಯಲ್ಲಿ ಕಾಣಿಸಿಕೊಂಡಾಗ ಇದೇ ರೀತಿ ಆಗಿತ್ತು.

See also  ಮಹಿಳಾ ಟಿ-20 ವಿಶ್ವಕಪ್ ನಿಂದ ಹೊರಬಿದ್ದ ಭಾರತ ತಂಡ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು