News Kannada
Monday, December 05 2022

ಕ್ರೀಡೆ

ಟೀಂ ಇಂಡಿಯಾಗೆ ಗೆಲುವು ತಂದಿತ್ತ ಶಮಿ

Photo Credit :

ಟೀಂ ಇಂಡಿಯಾಗೆ ಗೆಲುವು ತಂದಿತ್ತ ಶಮಿ

ಜೋಹನ್ಸ್ ಬರ್ಗ್: ಮೊಹಮ್ಮದ್ ಶಮಿ ಮಾರಕ ಬೌಲಿಂಗ್ ದಾಳಿ ನೆರವಿನಿಂದ ಟೀಂ ಇಂಡಿಯಾ ಮೂರನೇ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 63 ರನ್ ಗೆಲುವು ದಾಖಲಿಸಿಕೊಂಡಿದ್ದು, ದಕ್ಷಿಣ ಆಫ್ರಿಕಾ 2-1 ರಿಂದ ಸರಣಿ ಗೆಲುವು ಸಾಧಿಸಿದೆ.

241 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ದ. ಆಫ್ರಿಕಾ ಒಂದು ಹಂತದಲ್ಲಿ ಒಂದು ವಿಕೆಟ್ ನಷ್ಟಕ್ಕೆ 124 ರನ್ ಮಾಡಿ ಬಲಿಷ್ಠ ಸ್ಥಿತಿಯಲ್ಲಿತ್ತು. ಆದರೆ ಶಮಿ 28 ರನ್ ಗಳಿಗೆ ಐದು ವಿಕೆಟ್ ಉರುಳಿಸಿ ದ. ಆಫ್ರಿಕಾದ ಸರಣಿ ಸ್ವೀಪ್ ಗೆಲುವಿನ ಕನಸನ್ನು ಭಗ್ನಗೊಳಿಸಿದರು. ಡೀನ್ ಎಲ್ಗರ್ 86 ರನ್ ಮಾಡಿ ಔಟಾಗದೆ ಉಳಿದರೂ ತಂಡದ ಸೋಲು ತಪ್ಪಿಸಲು ಸಾಧ್ಯವಾಗಲಿಲ್ಲ.

ನಾಲ್ಕನೇ ದಿನದ ಮೊದಲ ಅವಧಿಯಲ್ಲಿ ದ. ಆಫ್ರಿಕಾ ಯಾವುದೇ ವಿಕೆಟ್ ಕಳಕೊಂಡಿರಲಿಲ್ಲ. ಅಮ್ಲಾ ಮತ್ತು ಎಲ್ಗರ್ ಶತಕದ ಜತೆಯಾಟ ನಡೆಸಿ ತಂಡವನ್ನು ಗೆಲುವಿನತ್ತ ಮುನ್ನಡೆಸುತ್ತಿದ್ದರು. ಆದರೆ 52 ರನ್ ಮಾಡಿದ ಆಮ್ಲಾ ವಿಕೆಟ್ ಪತನವಾಗುತ್ತಿದ್ದಂತೆ ದ. ಆಫ್ರಿಕಾದ ಕುಸಿತ ಆರಂಭವಾಯಿತು.

ಇಶಾಂತ್ ಶರ್ಮಾ ಮತ್ತು ಜಸ್ಪೀತ್ ಬುಮ್ರಾ ತಲಾ ಎರಡೆರಡು ವಿಕೆಟ್ ಪಡೆದರು.

ಈ ಗೆಲುವು ಟೀಂ ಇಂಡಿಯಾವು ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರ ಸ್ಥಾನ ಕಾಯ್ದುಕೊಳ್ಳುವಂತಾಯಿತು. ದ. ಆಫ್ರಿಕಾ ಕ್ಲೀನ್ ಸ್ವೀಪ್ ಸಾಧಿಸಿದ್ದರೆ ಟೀಂ ಇಂಡಿಯಾ ರ‍್ಯಾಂಕಿಂಗ್ ನಲ್ಲಿ ಕುಸಿತಕ್ಕೆ ಒಳಗಾಗುತ್ತಿತ್ತು.

See also  ಐಪಿಎಲ್: ಸನ್ ರೈಸರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಗೆ ಜಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು