News Kannada
Wednesday, December 07 2022

ಕ್ರೀಡೆ

ಚಾಹಲ್ ಸ್ಪಿನ್ ಮೋಡಿಗೆ ಮಂಕಾದ ಆಫ್ರಿಕಾ: ಟೀಂ ಇಂಡಿಯಾ ಸುಲಭ ಜಯ

Photo Credit :

ಚಾಹಲ್ ಸ್ಪಿನ್ ಮೋಡಿಗೆ ಮಂಕಾದ ಆಫ್ರಿಕಾ: ಟೀಂ ಇಂಡಿಯಾ ಸುಲಭ ಜಯ

ಸೆಂಚೂರಿಯನ್: ಯಜುವೇಂದ್ರ ಚಾಹಲ್ ಸ್ಪಿನ್ ಜಾದೂಗೆ ಕಂಗೆಟ್ಟ ದಕ್ಷಿಣ ಆಫ್ರಿಕಾದ ವಿಕೆಟ್ ಗಳು ತರಗೆಲೆಯಂತೆ ಉರುಳಿದ್ದು, ಟೀಂ ಇಂಡಿಯಾ 9 ವಿಕೆಟ್ ಸುಲಭ ಗೆಲುವಿನೊಂದಿಗೆ ಆರು ಪಂದ್ಯಗಳ ಏಕದಿನ ಸರಣಿಯಲ್ಲಿ 2-0 ಮುನ್ನಡೆ ಪಡೆದುಕೊಂಡಿದೆ.

ಏಕದಿನ ಕ್ರಿಕೆಟಿನಲ್ಲಿ ಜೀವನಶ್ರೇಷ್ಠ ಪ್ರದರ್ಶನ ನೀಡಿದ ಚಾಹಲ್ 22 ರನ್ ಗಳಿಗೆ ಐದು ವಿಕೆಟ್ ಉರುಳಿಸಿ ಆಫ್ರಿಕಾ ಬ್ಯಾಟ್ಸ್ ಮೆನ್ ಗಳನ್ನು ಕಟ್ಟಿ ಹಾಕಿದರು. ಇವರಿಗೆ ಸರಿಯಾದ ಜತೆ ನೀಡಿದ ಕುಲದೀಪ್ ಯಾದವ್ 20 ರನ್ ಗಳಿಗೆ ಮೂರು ವಿಕೆಟ್ ಕಬಳಿಸಿ ದ. ಆಫ್ರಿಕಾವನ್ನು ಕೇವಲ 32.2 ಓವರ್ ಗಳಲ್ಲಿ 118 ರನ್ ಗಳಿಗೆ ಕಟ್ಟಿಹಾಕಿದರು.

ಅಲ್ಪ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಟೀಂ ಇಂಡಿಯಾ, ಆರಂಭಿಕ ರೋಹಿತ್ ಶರ್ಮಾ ವಿಕೆಟನ್ನು ನಾಲ್ಕನೇ ಓವರ್ ನಲ್ಲಿ ಕಳಕೊಂಡಿತು. ಇದರ ಬಳಿಕ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ದ. ಆಫ್ರಿಕಾ ಬೌಲರ್ ಗಳ ಮೇಲೆ ಸವಾರಿ ಮಾಡಿ ಕೇವಲ 20.3 ಓವರ್ ಗಳಲ್ಲಿ ಗೆಲುವು ತಂದಿತ್ತರು.

ಧವನ್ 56 ಎಸೆತಗಳಲ್ಲಿ 51 ರನ್ ಬಾರಿಸಿದರೆ, ಕಪ್ತಾನ ಕೊಹ್ಲಿ 50 ಎಸೆತಗಳಿಗೆ ಉತ್ತರವಾಗಿ 46 ರನ್ ಸಿಡಿಸಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.

ಟೀಂ ಇಂಡಿಯಾದ ಗೆಲುವಿಗೆ ಕೇವಲ ಎರಡು ರನ್ ಬೇಕಿದ್ದಾಗ ಅಂಪಾಯರ್ ಗಳು ಲಂಚ್ ಬ್ರೇಕ್ ಗೆ ಸೂಚಿಸಿದ್ದು ಭಾರೀ ಟೀಕೆಗೆ ಕಾರಣವಾಯಿತು.

See also  ಭಾರತಕ್ಕೆ ಮೊದಲ ಸ್ವರ್ಣ ತಂದಿತ್ತ ಮೀರಾ ಬಾಯಿ ಚಾನು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು