News Kannada
Friday, September 30 2022

ಕ್ರೀಡೆ

ಅಖಿಲ ಭಾರತ ಅಂತರ್ ವಿ.ವಿ ಮಟ್ಟದ ನೆಟ್ಬಾಲ್ ಪಂದ್ಯಾಟಕ್ಕೆ ವೀರೇಂದ್ರ ಹೆಗ್ಗಡೆ ಅದ್ಧೂರಿ ಚಾಲನೆ - 1 min read

Photo Credit :

ಅಖಿಲ ಭಾರತ ಅಂತರ್ ವಿ.ವಿ ಮಟ್ಟದ ನೆಟ್ಬಾಲ್ ಪಂದ್ಯಾಟಕ್ಕೆ ವೀರೇಂದ್ರ ಹೆಗ್ಗಡೆ ಅದ್ಧೂರಿ ಚಾಲನೆ

ಉಜಿರೆ: ಮಾನಸಿಕ, ದೈಹಿಕ ಕ್ಷಮತೆಯನ್ನು ಹೆಚ್ಚಿಸುವಲ್ಲ್ಲಿ ಕ್ರೀಡೆಯ ಪಾತ್ರ ಪ್ರಾಮುಖ್ಯವಾದುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.

ಎಸ್.ಡಿ.ಯಂ ಶಿಕ್ಷಣ ಸಂಸ್ಥೆಗಳ ಪ್ರಾಯೋಜಕತ್ವದಲ್ಲಿ ಮಂಗಳೂರು ವಿ.ವಿ ಹಾಗೂ ಉಜಿರೆಯ ಎಸ್.ಡಿ.ಎಮ್ ಸ್ವಾಯತ್ತ ಕಾಲೇಜಿನ ಜಂಟಿ ಆಶ್ರಯದಲ್ಲಿ ಇದೇ 25 ರಿಂದ 28ರ ವರೆಗೆ ಉಜಿರೆ ರತ್ನವರ್ಮಹೆಗ್ಡೆ ಕ್ರೀಡಾಂಗಣದಲ್ಲಿ ನಡೆಯಲಿರುವ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಮಟ್ಟದ ಪುರುಷರ ನೆಟ್ಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕ್ರೀಡೆ ಎಂಬುದು ಮಾನಸಿಕ ಸ್ಥಿಮಿತವನ್ನು ಕಾಪಾಡಿಕೊಳ್ಳುವಲ್ಲಿ ತುಂಬಾ ಸಹಾಯಕ, ಪ್ರತಿಯೋರ್ವ ವ್ಯಕ್ತಿಯನ್ನ ಭೌತಿಕವಾಗಿ ಸದೃಢಗೊಳಿಸುವಲ್ಲಿ ಕ್ರೀಡೆ ಮಹತ್ತರ ಪಾತ್ರವಹಿಸುತ್ತದೆ. ಈ ನಿಟ್ಟಿನಲ್ಲಿ ಯೋಗಾಭ್ಯಾಸವೂ ಇದಕ್ಕೆ ಪೂರಕವಾಗಿದೆ ಎಂದು ನುಡಿದರು.
ಯುವಕರ ಧೈರ್ಯ, ಕ್ರೀಡಾಮನೋಭಾವ ಸ್ಪರ್ಧಾ ಸ್ಪೂರ್ತಿಯ ವೃದ್ಧಿಗೆ ಈ ಪಂದ್ಯಾಟ ಉತ್ತಮ ಅವಕಾಶವಾಗಲಿದೆ. ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸೋಲು ಗೆಲುವು ಮುಖ್ಯವಲ್ಲ, ಕ್ರೀಡೋತ್ಸಾಹದಿಂದ ಭಾಗವಹಿಸುವಿಕೆ ಮುಖ್ಯವಾದುದು ಎಂದು ಹೇಳಿ, ಕ್ರೀಡಾಪಟುಗಳು ತಮ್ಮ ಕ್ರೀಡಾಕ್ಷಮತೆಯನ್ನು ಉತ್ತಮವಾಗಿ ಪ್ರದರ್ಶಿಸಿ ಎಂದು ಹುರಿದುಂಬಿಸಿದರು. ತ್ರಿವರ್ಣ ರಂಜಿತ ಬಲೂನುಗಳ ಗುಚ್ಛವನ್ನು ಆಕಾಶದೆಡೆಗೆ ಹಾರಬಿಡುವ ಮೂಲಕ ಕಾರ್ಯಕ್ರಮಕ್ಕೆ ವಿಶೇಷವಾಗಿ ಅವರು ಚಾಲನೆ ನೀಡಿದರು.

ಈ ಸಂದರ್ಭದಲಿ ಪಂದ್ಯಾಟ ನಿರೀಕ್ಷಕರಾಗಿ ಆಗಮಿಸಿರುವ ಕುರುಕ್ಷೇತ್ರ ವಿಶ್ವವಿದ್ಯಾಲಯದ ಡಾ. ರಾಜೇಶ್ ಮಾತನಾಡಿ ವಿವಿಧ ಸಂಸ್ಕೃತಿ, ಭಾಷೆಯನ್ನು ಅಳವಡಿಸಿಕೊಂಡ ವಿವಿಧ ರಾಜ್ಯಗಳ ಕ್ರೀಡಾಪಟುಗಳಿಗೆ ಉಜಿರೆಯ ಉತ್ತಮ ಪರಿಸರದಲ್ಲಿ, ಸುವ್ಯವಸ್ಥಿತವಾಗಿ ಸಜ್ಜುಗೊಂಡ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯಾಟವು ವಿಶೇಷವಾಗಿದೆ ಎಂದು ಶ್ಲಾಘಿಸಿದರು.

ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನೆಟ್ ಬಾಲ್ ನಲ್ಲಿ ವಿಶೇಷ ಸಾಧನೆಮಾಡಿ ಗುರುತಿಸಿಕೊಂಡಿರುವ ಕಾಲೇಜಿನ ಕ್ರೀಡಾವಿದ್ಯಾರ್ಥಿ ನಿತಿನ್ ಎಲ್ಲಾ ಕ್ರೀಡಾಪಟುಗಳ ಪರವಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು.

ವೇದಿಕೆಯಲ್ಲಿ ಎಸ್.ಡಿ.ಎಮ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ. ಯಶೋವರ್ಮ, ಕಾಲೇಜಿನ ಕ್ರೀಡಾಧಿಕಾರಿ ರಮೇಶ್ ಉಪಸ್ಥಿತರಿದ್ದರು. ಪಂದ್ಯಾಟದ ವ್ಯವಸ್ಥಾಪಕ ಕಾರ್ಯದರ್ಶಿ ಡಾ.ಕಿಶೋರ್ ಕುಮಾರ್ ಸಿ.ಕೆ ಸ್ವಾಗತಿಸಿ, ಕಾಲೇಜಿನ ಪ್ರಾಂಶುಪಾಲ ಟಿ.ಎನ್.ಕೇಶವ್ ವಂದಿಸಿ, ಪ್ರಾದ್ಯಾಪಕ ಡಾ.ಬಿ.ಎ.ಕುಮಾರ್ ಹೆಗ್ಡೆ ನಿರೂಪಿಸಿದರು.

ಮೊದಲ ದಿನ ಮಧ್ಯಾಹ್ನದ ವೇಳೆಗೆ 45 ತಂಡಗಳು ನೋಂದಾಯಿಸಿಕೊಂಡಿದ್ದು ಇನ್ನೂ ಕೆಲವು ತಂಡಗಳು ಆಗಮಿಸುವ ಸಾಧ್ಯತೆಯಿದೆ ಎಂದು ಸಂಘಟಕರು ತಿಳಿಸಿದ್ದಾರೆ. ವಿನೂತನ ಕ್ರೀಡೆಯು ಆಗಿರುವ ಹಿನ್ನಲೆಯಲ್ಲಿ ಸ್ಥಳೀಯರು ಕುತೂಹಲದಿಂದ ಪಂದ್ಯಾಟ ವೀಕ್ಷಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.

See also  ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ ವಾರ್ನರ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

149
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು