News Kannada
Sunday, September 25 2022

ಕ್ರೀಡೆ

ಅಂತರ್ ವಿವಿ ನೆಟ್ ಬಾಲ್ ಪಂದ್ಯಾವಳಿ: ಮಂಗಳೂರು ವಿ.ವಿ.ಗೆ ಗೆಲುವಿನ ಗರಿ - 1 min read

Photo Credit :

ಅಂತರ್ ವಿವಿ ನೆಟ್ ಬಾಲ್ ಪಂದ್ಯಾವಳಿ: ಮಂಗಳೂರು ವಿ.ವಿ.ಗೆ ಗೆಲುವಿನ ಗರಿ

ಉಜಿರೆ: ಇಲ್ಲಿಯ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನಡೆದ ನಾಲ್ಕು ದಿನಗಳ ಅಖಿಲ ಭಾರತ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ನೆಟ್ ಬಾಲ್ ಪಂದ್ಯಾವಳಿಯಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ತಂಡವು ಗೆಲುವು ತನ್ನದಾಗಿಸಿಕೊಂಡಿದೆ.

ಆರಂಭದಿಂದಲೂ ವಿವಿಧ ಹಂತಗಳ ಪಂದ್ಯಗಳಲ್ಲಿ ಆಕರ್ಷಕ ಆಟದೊಂದಿಗೆ ಸ್ಥಿರತೆಯನ್ನು ಕಾಯ್ದುಕೊಂಡ ತಂಡವು ಪಾಟಿಯಾಲಾದ ಪಂಜಾಬ್ ವಿವಿ ತಂಡದೊಂದಿಗಿನ ಅಂತಿಮ ಹಣಾಹಣಿಯಲ್ಲಿ ನಿರಂತರ ಗೋಲ್ ಗಳೊಂದಿಗೆ 62 ಪಾಯಿಂಟ್ ಗಳನ್ನು ಪಡೆಯಿತು. ಇದಕ್ಕೂ ಮುನ್ನ ಕ್ಯಾಲಿಕಟ್ ವಿ.ವಿ. ತಂಡದೊಂದಿಗಿನ ಪೈಪೋಟಿಯಲ್ಲಿ 53 ಪಾಯಿಂಟ್ ಗಳನ್ನು ಗಳಿಸಿ ಅಂತಿಮ ಪಂದ್ಯದ ಹಂತವನ್ನು ಪ್ರವೇಶಿಸಿತು.

ಪ್ರಬಲ ಪೈಪೋಟಿ ನೀಡಿದ ಕಲ್ಲಿಕೋಟೆ ವಿ.ವಿ. ತಂಡ ರನ್ನರ್ ಅಪ್ ಮನ್ನಣೆ ಪಡೆಯಿತು. ಪಾಟಿಯಾಲದ ಪಂಜಾಬ್ ವಿ.ವಿ. ಮತ್ತು ಕುರುಕ್ಷೇತ್ರ ವಿ.ವಿ. ತಂಡಗಳು ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನ ಪಡೆದುಕೊಂಡವು. ಪಂಜಾಬ್ ವಿ.ವಿ.ಯ ಸಂದೀಪ್ ಸಿಂಗ್ ಬೆಸ್ಟ್ ಸೆಂಟರ್, ಮಂಗಳೂರು ವಿ.ವಿ.ಯ ಕೀರ್ತನ್ ಬೆಸ್ಟ್ ಡಿಫೆಂಡರ್, ಹಾಗೂ ನಿತಿನ್ ಬೆಸ್ಟ್ ಶೂಟರ್ ಆಗಿ ಹೊರಹೊಮ್ಮಿದರು. ಭಾನುವಾರ ಆರಂಭಗೊಂಡಿದ್ದ ನೆಟ್ ಬಾಲ್ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳ ವಿ.ವಿ. ತಂಡಗಳ ನಡುವೆ ಒಟ್ಟು 47 ಪಂದ್ಯಗಳು ನಡೆದವು.

ಬುಧವಾರ ಮಧ್ಯಾಹ್ನ ನಡೆದ ಸಮಾರೋಪ ಸಮಾರಂಭದಲ್ಲಿ ಮಂಗಳೂರು ವಿ.ವಿ.ಯ ಕುಲಪತಿಗಳಾದ ಪ್ರೊ.ಕೆ.ಬೈರಪ್ಪ ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ ನೀಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಅವರು, ಪಂದ್ಯಾವಳಿಯ ಯಶಸ್ಸಿನಲ್ಲಿ ಆತಿಥ್ಯ ವಹಿಸಿಕೊಂಡ ಎಸ್.ಡಿ.ಎಂ ಸಂಸ್ಥೆಯ ಪಾತ್ರ ಮಹತ್ವದ್ದು ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳೂರು ವಿ.ವಿ.ಯ ರಾಷ್ಟ್ರಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಮುಂಚೂಣಿ ಸ್ಥಾನವನ್ನು ಕಾಯ್ದುಕೊಳ್ಳುತ್ತಿದೆ. ವಿ.ವಿ.ಯನ್ನು ಪ್ರತಿನಿಧಿಸುವ ಕ್ರೀಡೆ ಮತ್ತು ಸಾಂಸ್ಕೃತಿಕ ತಂಡಗಳಲ್ಲಿ ಶೇ.30ರಷ್ಟು ಪ್ರತಿಭೆಗಳು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ವಿವಿಧ ಕಾಲೇಜುಗಳ ಹಿನ್ನೆಲೆಯವರು. ಈ ಸಂಸ್ಥೆ ಉಜಿರೆಯಲ್ಲಿ ಅಖಿಲ ಭಾರತ ನೆಟ್ ಬಾಲ್ ಪಂದ್ಯಾವಳಿಯನ್ನು ಆಯೋಜಿಸಿರುವುದು ವಿಶೇಷ ಎಂದರು.

ಮಂಗಳೂರು ವಿ.ವಿ.ಯು ಕ್ರೀಡಾರಂಗದಲ್ಲಿ ಗುರುತಿಸಿಕೊಳ್ಳಲಿಚ್ಚಿಸುವ ಪ್ರತಿಭಾನ್ವಿತರಿಗೆ ನೆರವಾಗುವ ಸೌಲಭ್ಯಗಳನ್ನು ಒದಗಿಸುತ್ತಿದೆ. ಅನುಭವೀ ತಜ್ಞರನ್ನು ನೇಮಿಸಿ ತಂಡಗಳ ಕ್ರೀಡಾ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕೆ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.

ಪಂದ್ಯಾವಳಿಯ ಅಬ್ಸರ್ವರ್ ಆಗಿ ಕಾರ್ಯನಿರ್ವಹಿಸಿದ ಕುರುಕ್ಷೇತ್ರ ವಿ.ವಿ.ಯಡಾ.ರಾಜೇಶ್ ಮಾತನಾಡಿ, ಪಂದ್ಯಾವಳಿ ಯಶಸ್ವಿಯಾಗಿ ಆಯೋಜಿಸಲ್ಪಟ್ಟಿತು ಎಂದರು. ಕ್ರೀಡೆಗಾಗಿಯೇ ಪ್ರತ್ಯೇಕ ಶೈಕ್ಷಣಿಕ ನೀತಿಯೊಂದನ್ನು ರೂಪಿಸುವ ಅಗತ್ಯತೆಯ ಬಗ್ಗೆ ಕರ್ನಾಟಕ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಮಂಗಳೂರು ವಿ.ವಿಗಮನಾರ್ಹ ಪಾತ್ರವಹಿಸಿದೆ ಎಂದು ಎಂದರು.

ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಬಿ.ಯಶೋವರ್ಮ ಅಧ್ಯಕ್ಷತೆ ವಹಿಸಿದ್ದರು. ಆಟಗಾರರ ಕೌಶಲ್ಯಪೂರ್ಣತೆಯಿಂದಾಗಿ ಪಂದ್ಯಾವಳಿಯ ಪ್ರತಿಯೊಂದು ಪಂದ್ಯವನ್ನು ಹಲವರು ಕುತೂಹಲದಿಂದ ವೀಕ್ಷಿಸಿದರು. ಇದು ಕ್ರೀಡೆಯೊಂದರ ಶ್ರೇಷ್ಠತೆಯ ಲಕ್ಷಣ ಎಂದು ನುಡಿದರು.

ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಟಿ.ಎನ್ ಕೇಶವ ಮಾತನಾಡಿದರು. ಮಂಗಳೂರು ವಿ.ವಿ.ಯ ದೈಹಿಕ ಶಿಕ್ಷಣ ವಿಭಾಗದನಿರ್ದೇಶಕ, ಪಂದ್ಯಾವಳಿಯ ಸಂಘಟನಾ ಕಾರ್ಯದರ್ಶಿ ಡಾ.ಕಿಶೋರ್ ಕುಮಾರ್ ಸಿ.ಕೆ ಪಂದ್ಯಾವಳಿಯ ಸಮಗ್ರ ವರದಿಯನ್ನು ಮಂಡಿಸಿದರು. ದೈಹಿಕ ಶಿಕ್ಷಣ ವಿಭಾಗದ ರಮೇಶ್ ಪಿ.ಡಿ ಉಪಸ್ಥಿತರಿದ್ದರು. ಪ್ರೊ.ಕುಮಾರ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

See also  ಚಾಂಪಿಯನ್ಸ್ ಟ್ರೋಫಿ: ಹಾಕಿ ತಂಡಕ್ಕೆ ಶ್ರೀಜೇಶ್ ನಾಯಕ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು