News Kannada
Sunday, September 25 2022

ಕ್ರೀಡೆ

ಮೌಲಿಕ ಸಂದೇಶ ಸಾರಿದ ಎಸ್ ಡಿಎಂ ಕ್ರೀಡಾಕೂಟದ ಪಥಸಂಚಲನ - 1 min read

Photo Credit :

ಮೌಲಿಕ ಸಂದೇಶ ಸಾರಿದ ಎಸ್ ಡಿಎಂ ಕ್ರೀಡಾಕೂಟದ ಪಥಸಂಚಲನ

ಉಜಿರೆ: ಇಲ್ಲಿಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣವು ಗುರುವಾರ ವಿವಿಧ ಮೌಲಿಕ ಸಂದೇಶಗಳನ್ನು ರವಾನಿಸಿತು.

ಕ್ರೀಡಾ ದಿನಾಚರಣೆಯ ಪ್ರಯುಕ್ತ ಪ್ರಸಕ್ತ ವರ್ಷದ ಕ್ರೀಡಾಕೂಟಕ್ಕೆ ಚಾಲನೆ ನೀಡುವ ಸಂದರ್ಭದಲ್ಲಿ ಎಸ್ ಡಿಎಂ ಪದವಿ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ವಿವಿಧ ವಿಭಾಗಗಳ ವಿದ್ಯಾರ್ಥಿಗಳು ಪಥಸಂಚಲನದ ಮೂಲಕ ಸಾಮಾಜಿಕವಾಗಿ ಮಹತ್ವವೆನ್ನಿಸುವ ಸಂದೇಶ ಸಾರಿದರು.

ದೇಶಪ್ರೇಮ, ಸ್ವಚ್ಛ ಭಾರತ, ಗ್ರಾಮೀಣ ಕ್ರೀಡೆಗಳ ವಿಶೇಷತೆ, ಇ-ವೇಸ್ಟ್ ನಿರ್ಮೂಲನೆ, ರಾಷ್ಟ್ರೀಯ ಭಾವೈಕ್ಯತೆ, ಸೈನಿಕರ ತ್ಯಾಗ, ಸ್ವಾತಂತ್ರ್ಯದ ಅರ್ಥವಂತಿಕೆ, ಮಹಿಳಾ ಸ್ವಾತಂತ್ರ್ಯ, ಸಮಾನತೆಯ ವಿಶೇಷತೆ ಸೇರಿದಂತೆ ಹಲವು ಅಂಶಗಳಿಗೆ ಸಂಬಂಧಿಸಿದಂತೆ ವಿವಿಧ ಒಕ್ಕಣೆಗಳನ್ನು ಒಳಗೊಂಡ ಭಿತ್ತಿಫಲಕಗಳೊಂದಿಗೆ ವಿವಿಧ ವಿಭಾಗಗಳ ವಿದ್ಯಾರ್ಥೊಗಳು ಶಿಸ್ತುಬದ್ಧ ಹೆಜ್ಜೆಯಿಟ್ಟು ಗಮನ ಸೆಳೆದರು.

ಪಥಸಂಚಲನದಲ್ಲಿ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಮನಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು, ಮಹಿಳೆಯರು ವರ್ತಮಾನದಲ್ಲಿ ಎದುರಿಸುತ್ತಿರುವ ಸಂಕಟಗಳಿಗೆ ಕನ್ನಡಿ ಹಿಡಿಯುತ್ತಲೇ ಅವುಗಳಿಂದ ವಿಮುಕ್ತರಾಗಲು ಪೂರಕವಾಗುವ ಸಮಾನತೆಯ ಸದಾಶಯಗಳ ಮೇಲೆ ಬೆಳಕು ಚೆಲ್ಲಿದರು.
ಮಹಿಳಾ ದೌರ್ಜನ್ಯ ನಿಲ್ಲಬೇಕು, ಸಮಾನತೆ ನೆಲೆಗೊಳ್ಳಬೇಕು, ಮಕ್ಕಳ ಮೇಲಿನ ದೌರ್ಜನ್ಯ ಕೊನೆಗೊಳ್ಳಬೇಕು, ಕೌಟುಂಬಿಕ ದೌರ್ಜನ್ಯದ ಮನಃಸ್ಥಿತಿಯನ್ನು ಹೋಗಲಾಡಿಸಬೇಕು ಎಂಬ ಹಕ್ಕೊತ್ತಾಯದ ಘೋಷಣಾ ಭಿತ್ತಿಪತ್ರಗಳು ಆಕರ್ಷಿಸಿದವು.

ಪದವಿ ವಿದ್ಯಾರ್ಥಿಗಳು ತೆನೆಹೊತ್ತು ಮುನ್ನಡೆದರು. ಜೆಡಿಎಸ್ ಪಕ್ಷದ ಚಿಹ್ನೆಯನ್ನು ನೆನಪಿಸಿದರು. ಕೃಷಿವಲಯದಲ್ಲಿ ತೊಡಗಿಕೊಳ್ಳುವವರ ದಿನಚರಿಯನ್ನು ಅವರ ವೇಷ ಭೂಷಣಗಳಿಂದ ಪ್ರತಿಬಿಂಬಿಸಿದರು. ದೇಶದ ಐಕ್ಯತೆ, ಅಭಿವೃದ್ಧಿಯ ಹಾದಿಯಲ್ಲಿ ಅನ್ಯಾಯಮುಕ್ತ ಸಮಾಜದ ಪಾತ್ರವಿದೆ ಎಂಬ ಸಂದೇಶ ಸಾರಿದರು.

ಭಾರತೀಯ ನೌಕಾದಳದ ವಿಶ್ರಾಂತ ಅಧಿಕಾರಿ, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿರ್ವಹಣಾ ಅಧಿಕಾರಿ ಆಗಿರುವ ಶ್ರೀಕೃಷ್ಣ ಭಟ್ ಧ್ವಜಾರೋಹಣ ನಡೆಸುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಟಿ.ಎನ್.ಕೇಶವ್, ಜಿ.ಡಿ.ಲಕ್ಷ್ಮಣ್ ಉಪಸ್ಥಿತರಿದ್ದರು.

See also  ನಾಲ್ಕನೇ ಟೆಸ್ಟ್: ಸಂಕಷ್ಟದಲ್ಲಿ ಟೀಂ ಇಂಡಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು