News Kannada
Tuesday, September 27 2022

ಕ್ರೀಡೆ

ಟಿ-20 ತ್ರಿಕೋನ ಸರಣಿ: ಶ್ರೀಲಂಕಾಗೆ ಐದು ವಿಕೆಟ್ ಭರ್ಜರಿ ಜಯ - 1 min read

Photo Credit :

ಟಿ-20 ತ್ರಿಕೋನ ಸರಣಿ: ಶ್ರೀಲಂಕಾಗೆ ಐದು ವಿಕೆಟ್ ಭರ್ಜರಿ ಜಯ

ಕೊಲಂಬೊ: ಒಂದು ಕಡೆಯಲ್ಲಿ ತುರ್ತು ಪರಿಸ್ಥಿತಿಯ ಘೋಷಣೆಯ ಮಧ್ಯೆ ಸಾಗಿದ ತ್ರಿಕೋನ ಟಿ-20ಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ, ಟೀಂ ಇಂಡಿಯಾ ವಿರುದ್ಧ ಐದು ವಿಕೆಟ್ ಗಳ ಭರ್ಜರಿ ಗೆಲುವು ದಾಖಲಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಗೆ ಇಳಿದ ರೋಹಿತ್ ಶರ್ಮಾ ಪಡೆ ಶಿಖರ್ ಧವನ್ 90 ರನ್ ನಿಂದ 20 ಓವರ್ ಗಳಲ್ಲಿ 174 ರನ್ ಪೇರಿಸಿತು. ಇದಕ್ಕೆ ಉತ್ತರಿಸಿದ ಲಂಕಾ ಕುಸಾಲ್ ಪರೇರಾ(66) ಭರ್ಜರಿ ಬ್ಯಾಇಂಗ್ ನೆರವಿನಿಂದ ಗೆಲುವು ತನ್ನದಾಗಿಸಿಕೊಂಡಿತು.

ಕುಸಾಲ್ ಪರೇರಾ(66), ಕುಸಾಲ್ ಮೆಂಡೀಸ್(11), ಧುನುಷ್ಕಾ ಗುಣತಿಲಕ(19), ದಿನೇಶ್ ಚಂದಿಮಾಲ್(14), ತಿಸಾರ ಪರೇರಾ (22) ಮತ್ತು ಧನುನ್ ಶನಕ(15) ರನ್ ಮಾಡಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.

ಇದಕ್ಕೂ ಮೊದಲು ಟೀಂ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ(0) ವಿಕೆಟ್ ಬೇಗನೆ ಕಳೆದುಕೊಂಡಿತು. ಇದರ ಬಳಿಕ ರೈನಾ ಕೂಡ ಬೇಗನೆ ನಿರ್ಗಮಿಸಿದರು. ಆದರೆ ಧವನ್ ಮತ್ತು ಮನೀಷ್ ಪಾಂಡೆ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಹೋರಾಟಕಾರಿ ಮೊತ್ತಕ್ಕೆ ನೆರವಾದರು.

See also  ಐಪಿಎಲ್‌ ಟೂರ್ನಿ: ಚೆನ್ನೈ ಎದುರು ಡೆಲ್ಲಿ ಕ್ಯಾಪಿಟಲ್ಸ್ ಜಯ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು