News Kannada
Sunday, November 27 2022

ಕ್ರೀಡೆ

ಕೆಎಲ್ ರಾಹುಲ್ ವೇಗದ ಅರ್ಧಶತಕ: ಪಂಜಾಬ್ ಭರ್ಜರಿ ಗೆಲುವು - 1 min read

Photo Credit :

ಕೆಎಲ್ ರಾಹುಲ್ ವೇಗದ ಅರ್ಧಶತಕ: ಪಂಜಾಬ್ ಭರ್ಜರಿ ಗೆಲುವು

ನವದೆಹಲಿ: ಡೆಲ್ಲಿ ಡೇರ್ ಡೇವಿಲ್ಸ್ ವಿರುದ್ಧ 6 ವಿಕೆಟ್ ಗಳ ಸುಲಭ ಗೆಲುವು ದಾಖಲಿಸಿಕೊಂಡ ಕಿಂಗ್ಸ್ ಇಲೆವನ್ ಪಂಜಾಬ್ ಈ ವರ್ಷದ ಐಪಿಎಲ್ ನಲ್ಲಿ ಶುಭಾರಂಭ ಮಾಡಿದೆ.

ಐಪಿಎಲ್ ನಲ್ಲಿ ವೇಗದ ಅರ್ಧಶತಕ ಬಾರಿಸಿದ ಕೆಎಲ್ ರಾಹುಲ್ ಆಕ್ರಮಣಕಾರಿ ಬ್ಯಾಟಿಂಗ್ ನಿಂದ ಪಂಜಾಬ್ ಗೆಲುವು ತನ್ನದಾಗಿಸಿಕೊಂಡಿತು. ರಾಹುಲ್ ಕೇವಲ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. 167 ರನ್ ಗಳ ಗೆಲುವಿನ ಗುರಿ ಬೆನ್ನಟ್ಟುತ್ತಿದ್ದ ಪಂಜಾಬ್ ಕೇವಲ ಮೂರು ಓವರ್ ಗಳಲ್ಲಿ 52 ರನ್ ಸೂರೆಗೈದಿತು.

ರಾಹುಲ್ ಆರು ಬೌಂಡರಿ ಮತ್ತು ನಾಲ್ಕು ಸಿಕ್ಸರ್ ಸಿಡಿಸಿ 51 ರನ್ ಮಾಡಿ ನಿರ್ಗಮಿಸಿದರು. ಆದರೆ ರಾಹುಲ್ ನಿರ್ಗಮನದ ಬಳಿಕ ಪಂಜಾಬ್ ನ ರನ್ ರೇಟ್ ಸಂಪೂರ್ಣವಾಗಿ ಕುಸಿಯಿತು.

ಯುವರಾಜ್ ಸಿಂಗ್ ಕೇವಲ 12 ರನ್ ಮಾಡಿ ನಿರ್ಗಮಿಸಿದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಕರುಣ್ ನಾಯರ್50 ಮತ್ತು ಡೇವಿಡ್ ಮಿಲ್ಲರ್ 24 ರನ್ ಮಾಡಿ ತಂಡವನ್ನು ಗೆಲುವಿನ ಮೆಟ್ಟಿಲೇರಿಸಿದರು.

ಇದಕ್ಕೂ ಮೊದಲು ಡೆಲ್ಲಿ ಗೌತಮ್ ಗಂಭೀರ್ ಬಾರಿಸಿ 55 ರನ್ ಗಳಿಂದ ಸಮಾಧಾನಕರ ಮೊತ್ತ ಪೇರಿಸಿತು. ರಿಶಬ್ ಪಂತ್ 28 ರನ್ ಮತ್ತು ಕ್ರಿಸ್ ಮೋರಿಸ್ 27 ರನ್ ಬಾರಿಸಿದರು.

See also  ಏಷ್ಯನ್ ಕೂಟಕ್ಕೆ ಆಳ್ವಾಸ್ ನ 13 ಅಥ್ಲೆಟಿಕ್ಸ್ ಗಳಿಗೆ ಸ್ಥಾನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

187

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು