News Kannada
Friday, December 02 2022

ಕ್ರೀಡೆ

ಚೆನ್ನೈ ಸೂಪರ್ ಕಿಂಗ್ಸ್ ನಿಂದ ಹೊರಬಿದ್ದ ಕೇದಾರ್ ಜಾಧವ್

Photo Credit :

ಚೆನ್ನೈ ಸೂಪರ್ ಕಿಂಗ್ಸ್ ನಿಂದ ಹೊರಬಿದ್ದ ಕೇದಾರ್ ಜಾಧವ್

ಚೆನ್ನೈ: ಐಪಿಎಲ್ 2018ರ ಗಾಯಾಳುಗಳ ಪಟ್ಟಿಗೆ ಈ ಬಾರಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉತ್ತಮ ಆಟಗಾರ ಕೇದಾರ್ ಜಾಧವ್ ಸೇರಿಕೊಂಡಿದ್ದಾರೆ.

ಸ್ನಾಯುಸೆಳೆತದ ಸಮಸ್ಯೆಯಿಂದ ಬಳಲುತ್ತಿರುವ ಕೇದಾರ್ ಜಾಧವ್ ಅವರು ಈ ಬಾರಿ ಐಪಿಎಲ್ ಟೂರ್ನಮೆಂಟ್ ನಿಂದಲೆ ಹೊರಗಿರಬೇಕಾಗಿದೆ ಎಂದು ಕೋಚ್ ಮೈಕ್ ಹಸ್ಸಿ ಹೇಳಿದ್ದಾರೆ.

ಶನಿವಾರದಂದು ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಡ್ವಾಯ್ನೆ ಬ್ರಾವೋ ಅವರಿಗೆ ಉತ್ತಮ ಸಾಥ್ ನೀಡುವ ಮೂಲಕ ಪಂದ್ಯ ಗೆಲ್ಲಲು ಕೇದಾರ್ ಜಾಧವ್ ಕಾರಣರಾಗಿದ್ದರು.

ಆದರೆ, ಇದೀಗ ಕೇದಾರ್ ಅವರ ಗಾಯದ ಸಮಸ್ಯೆ ಉಲ್ಬಣವಾಗಿದ್ದು, ಚಿಕಿತ್ಸೆ ನೀಡಿ, ಸ್ಕ್ಯಾನ್ ಮಾಡಿರುವ ವೈದ್ಯರು, ಐಪಿಎಲ್ ನಲ್ಲಿ ಆಡಲು ಸಾಧ್ಯವಿಲ್ಲ ಎಂದಿದ್ದಾರೆ.

ಕೇದಾರ್ ಅವರ ಬದಲಿಗೆ ಮತ್ತೊಬ್ಬ ಆಟಗಾರರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆ ನಡೆದಿದೆ ಎಂದು ಕೋಚ್ ಹಸ್ಸಿ ಹೇಳಿದ್ದಾರೆ.

See also  ಯುವ ಆಟಗಾರರನ್ನು ದ್ರಾವಿಡ್ ಮಾನಸಿಕವಾಗಿ ಬಲಿಷ್ಠವಾಗಿಸಿರುವರು: ಇಂಜಾಮಾಮ್ ಹಕ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

189

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು