News Kannada
Sunday, December 04 2022

ಕ್ರೀಡೆ

ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್: ತವರು ನೆಲದಲ್ಲಿ ಜಯ ಗಳಿಸಿದ ಆರ್.ಸಿ.ಬಿ

Photo Credit :

ಡಿವಿಲಿಯರ್ಸ್ ಅಬ್ಬರದ ಬ್ಯಾಟಿಂಗ್: ತವರು ನೆಲದಲ್ಲಿ ಜಯ ಗಳಿಸಿದ ಆರ್.ಸಿ.ಬಿ

ಬೆಂಗಳೂರು: ಸಾಂಸ್ಕೃತಿಕ ನಗರಿ ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳಿಗೆ ಶುಕ್ರವಾರ ಹಬ್ಬದ ವಾತಾವರಣ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ತಂಡವು, ಕಿಂಗ್ಸ್ ‍XI ಪಂಜಾಬ್ ತಂಡದ ವಿರುದ್ಧ 4 ವಿಕೆಟ್ ಗಳ ಜಯ ಗಳಿಸಿದಾಗ ಆರ್.ಸಿ.ಬಿ ಅಭಿಮಾನಿಗಳು ಸಂಭ್ರಮದಿಂದ ಕೇಕೆ ಹಾಕಿದರು.

156 ರನ್ ಗುರಿ ಬೆನ್ನು ಹತ್ತಿದ ಆರ್.ಸಿ.ಬಿ ತಂಡ ಆರಂಭದಲ್ಲಿ ಕಳಪೆ ಪ್ರದರ್ಶನ ನೀಡಲಾರಂಭಿಸಿತು. ಆರಂಭಿಕ ಆಟಗಾರ ಬ್ರೆಂಡನ್ ಮೆಕಲಮ್ ಮೊದಲ ಓವರ್ ನ 2ನೇ ಎಸೆತದಲ್ಲಿ ಔಟಾದರು.

ಇನ್ನೋರ್ವ ಆರಂಭಿಕ ಆಟಗಾರ ಕ್ವಿಂಟನ್ ಡಿಕಾಕ್ 34 ಎಸೆತಗಳಲ್ಲಿ 45 ರನ್ ಗಳಿಸಿದರೆ, ಮನ್ ದೀಪ್ 22 ಹಾಗೂ ತಂಡದ ನಾಯಕ ವಿರಾಟ್ ಕೊಹ್ಲಿ 16 ಎಸೆತಗಳಲ್ಲಿ 21 ರನ್ ಗಳಿಸಿದರು.

ಎಬಿ ಡಿ ವಿಲಿಯರ್ಸ್ 4 ಸಿಕ್ಸರ್, 2 ಬೌಂಡರಿ ಸಿಡಿಸಿ 40 ಎಸೆತಗಳಲ್ಲಿ 57ರನ್ ಗಳಿಸಿ ಟೈ ಬೌಲಿಂಗ್ ನಲ್ಲಿ ಔಟಾದರು. ಆರ್.ಸಿ.ಬಿ ಗೆಲುವಿನಲ್ಲಿ ವೇಗಿ ವಿರಾಟ್ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಮಹತ್ವದ ಪಾತ್ರ ವಹಿಸಿದರು.

ವಾಷಿಂಗ್ಟನ್ ಸುಂದರ್ ಕೊನೆ ಓವರ್ ನಲ್ಲಿ ತಂಡಕ್ಕೆ ಬಂದೊದಗಿದ್ದ ಆತಂಕ ದೂರ ಮಾಡಿ ಗೆಲುವಿನ ರನ್ ಬಾರಿಸಿದರು. ಆರ್ ಅಶ್ವಿನ್ 2, ಮುಜೀಬ್, ಅಕ್ಷರ್, ಟೈ ತಲಾ 1 ವಿಕೆಟ್ ಪಡೆದರು. ಆರ್ ಸಿಬಿ ಪರ 23ಕ್ಕೆ 3 ವಿಕೆಟ್ ಗಳಿಸಿದ ಉಮೇಶ್ ಯಾದವ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

See also  ಹ್ಯಾಟ್ರಿಕ್ ಸರಣಿ ಗೆದ್ದ ಟೀಂ ಇಂಡಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

189

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು