News Kannada
Friday, December 02 2022

ಕ್ರೀಡೆ

ಕಾಮನ್ ವೆಲ್ತ್: ಮತ್ತೆ ಮೂರು ಸ್ವರ್ಣ ಪದಕ ಗೆದ್ದ ಭಾರತ

Photo Credit :

ಕಾಮನ್ ವೆಲ್ತ್: ಮತ್ತೆ ಮೂರು ಸ್ವರ್ಣ ಪದಕ ಗೆದ್ದ ಭಾರತ

ಗೋಲ್ಡ್ ಕೋಸ್ಟ್: ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದ್ದು, ಮತ್ತೆ ಚಿನ್ನದ ಪದಕ ಲಭಿಸಿದೆ. ಭಾರತದ ಭರವಸೆಯ ಬಾಕ್ಸರ್ ಮೇರಿ ಕೋಮ್ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಮಹಿಳೆಯರ ವಿಭಾಗದ 45-48 ಕೆ.ಜಿ. ಬಾಕ್ಸಿಂಗ್ ವಿಭಾಗದಲ್ಲಿ 35 ವರ್ಷದ ಕ್ರೀಡಾ ತಾರೆ ಮೇರಿ ಕೋಮ್ ಫೈನಲ್ ನಲ್ಲಿ ಉತ್ತರ ಐರ್ಲೆಂಡ್ ನ ಕ್ರಿಸ್ಟಿನಾ ಒಹಾರಾ ಅವರನ್ನು ಸೋಲಿಸಿದರು. ಆರಂಭದಿಂದಲೇ ಮೆಲುಗೈ ಸಾಧಿಸಿದ್ದ ಮೇರಿ ಕೋಮ್ ಅವರು ಎದುರಾಳಿಯ ಮೇಲೆ ಸವಾರಿ ನಡೆಸಿ 5-0 ಯಿಂದ ನೇರವಾಗಿ ಗೆಲುವು ಕಂಡರು.

ಅಲ್ಲದೇ ಕಾಮನ್ ವೆಲ್ತ್ ಶೂಟಿಂಗ್ ಸ್ಪರ್ಧೆಯ 50 ಮೀ.ರೈಫಲ್ 3 ಪೊಸಿಶನ್ ನಲ್ಲಿ ಭಾರತದ ಸಂಜೀವ್ ರಾಜ್ ಪೂತ್ ಅವರು ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಶನಿವಾರ ನಡೆದ ಫೈನಲ್ ಸುತ್ತಿನಲ್ಲಿ ಸಂಜೀವ್ ಅವರು 454.5 ಅಂಕ ಗಳಿಸಿ ಮೊದಲ ಸ್ಥಾನ ಪಡೆಯುವ ಮೂಲಕ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ದಾಖಲೆ ನಿರ್ಮಿಸಿದ್ದಾರೆ.

ಪುರುಷರ 52 ಕೆ.ಜಿ ವಿಭಾಗದ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಗೌರವ್ ಸೋಲಂಕಿ ಅವರು ಕೂಡ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದ್ದಾರೆ. ಪುರುಷರ 40 ಕೆ.ಜಿ ವಿಭಾಗದಲ್ಲಿ ಅಮಿತ್ ಫಂಗಲ್ ಇಂಗ್ಲೆಂಡಿನ ಗಲಾಲ್ ಯಫಾಯ್ ಅವರೆದುರು ಸೋತು ಬೆಳ್ಳಿ ಪದಕಕ್ಕೆ ತೃಪ್ತಿ ಪಟ್ಟರು.

ಇಲ್ಲಿಗೆ 20 ಚಿನ್ನ, 13 ಬೆಳ್ಳಿ ಮತ್ತು 14 ಕಂಚಿನ ಪದಕಗಳನ್ನು ಗಳಿಸಿರುವ ಭಾರತ ಬರೋಬ್ಬರಿ 47 ಪದಕಗಳೊಂದಿಗೆ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

See also  ಏಶ್ಯನ್ ಗೇಮ್ಸ್: ಕುಸ್ತಿಯಲ್ಲಿ ವಿನೇಶ್ ಪೋಗಟ್ ಗೆ ಸ್ವರ್ಣ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

189

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು