ನಾನ್ಜಿಂಗ್(ಚೀನಾ): ಭಾರತದ ಶಟ್ಲರ್ ಪಿವಿ ಸಿಂಧು ಅವರು ಜಪಾನ್ ನ ನೊಜೊಮಿ ಒಕುಹರಾ ವಿರುದ್ಧ ಗೆಲುವು ದಾಖಲಿಸಿಕೊಂಡು ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ನ ಸೆಮಿಫೈನಲಿಗೇರಿದ್ದಾರೆ.
ಸಿಂಧು 21-17, 21-19ರ ನೇರ ಸೆಟ್ ನಿಂದ ನೊಜೊಮಿ ವಿರುದ್ಧ ಕ್ವಾರ್ಟರ್ ಫೈನಲಿನಲ್ಲಿ ಗೆಲುವು ದಾಖಲಿಸಿಕೊಂಡರು. ಸೆಮಿಫೈನಲಿನಲ್ಲಿ ಸಿಂಧು ಜಪಾನ್ ನ ಮತ್ತೊಬ್ಬಳು ಆಟಗಾರ್ತಿ ಅಕನೆ ಯಮಾಗುಚಿ ವಿರುದ್ಧ ಆಡಲಿದ್ದಾರೆ.
ವಿಶ್ವದ ಮೂರನೇ ಶ್ರೇಯಾಂಕದ ಭಾರತದ ಆಟಗಾರ್ತಿ ಆರಂಭದಿಂದಲೇ ತನ್ನ ಎದುರಾಳಿ ವಿರುದ್ಧ ಹಿಡಿತ ಸಾಧಿಸಿ ಗೆಲುವು ತನ್ನದಾಗಿಸಿಕೊಂಡರು.