News Kannada
Friday, December 02 2022

ಕ್ರೀಡೆ

ಕೆಪಿಎಲ್ ಸೀಸನ್ 7: ಮೈಸೂರು ವಾರಿಯರ್ಸ್ ತಂಡಕ್ಕೆ ಜೆ.ಸುಜೀತ್ ನಾಯಕ

Photo Credit :

ಕೆಪಿಎಲ್ ಸೀಸನ್ 7: ಮೈಸೂರು ವಾರಿಯರ್ಸ್ ತಂಡಕ್ಕೆ ಜೆ.ಸುಜೀತ್ ನಾಯಕ

ಮೈಸೂರು: ಕಾರ್ಬನ್ ಕೆಪಿಎಲ್ 7ನೇ ಆವೃತ್ತಿಯ ಮೈಸೂರು ವಾರಿಯರ್ಸ್ ತಂಡದ ನಾಯಕರಾಗಿ ಜೆ.ಸುಜೀತ್ ಆಯ್ಕಯಾಗಿದ್ದು, ತಂಡದ 18 ಆಟಗಾರರ ಪಟ್ಟಿಯನ್ನ ಇಂದು ಅಧಿಕೃತವಾಗಿ ಪ್ರಕಟಿಸಲಾಯಿತು.

ಇಂದು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರು ವಾರಿಯರ್ಸ್ ತಂಡದ ಮಾಲೀಕರಾದ ಅರ್ಜುನ್ ರಂಗ ತಂಡದ 18 ಆಟಗಾರರ ಪಟ್ಟಿಯನ್ನು ಪ್ರಕಟಿಸಿದರು. ಇದೇ ತಿಂಗಳ 15 ರಿಂದ ಆರಂಭಗೊಳ್ಳಲಿರುವ ಕಾರ್ಬನ್ ಕೆಪಿಎಲ್ 7ನೇ ಆವೃತ್ತಿಯ ಪಂದ್ಯಗಳು ಬೆಂಗಳೂರಿನಲ್ಲಿ ಆರಂಭಗೊಂಡು ಹುಬ್ಬಳ್ಳಿ ಮತ್ತು ಮೈಸೂರಿನಲ್ಲಿ ಅಂತ್ಯಗೊಳ್ಲಲಿದೆ. ಮೈಸೂರಿನಲ್ಲಿ ಈ ಬಾರಿ ಕೆಲವು ಲೀಗ್ ಪಂದ್ಯಗಳು ಸೇರಿದಂತೆ ಕೆಪಿಎಲ್ 7ನೇ ಆವೃತ್ತಿಯ ಫೈನಲ್ ಪಂದ್ಯ ನಗರದ ಎಸ್ ಡಿಎನ್ ಆರ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇದಕ್ಕಾಗಿ ಮೈಸೂರು ವಾರಿಯರ್ಸ್ ತಂಡ ಸರ್ವ ರೀತಿಯಲ್ಲೂ ಸಿದ್ದಗೊಂಡಿದ್ದು, ಇದೇ ಮೊದಲ ಬಾರಿಗೆ ಮೈಸೂರು ವಾರಿಯರ್ಸ್ ತಂಡವನ್ನು ಐಪಿಎಲ್ ಮತ್ತು ದೇಸಿ ಕ್ರಿಕೆಟ್ ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಮೈಸೂರಿನ ಜೆ.ಸುಜೀತ್ ತಂಡದ ನಾಯಕರಾಗಿ ಆಯ್ಕೆಯಾಗಿದ್ದಾರೆ. ಅಲ್ಲದೆ ಪ್ರತಿಭಾನ್ವೇಷಣೆಯ ಮೂಲಕ ಮೈಸೂರಿನ ಇಬ್ಬರು ಆಲ್ ರೌಂಡರ್ ಆಟಗಾರರಾದ ಕಿಶನ್ ಬೆಡಾರೆ ಮತ್ತು ಗೌತಮ್ ಸಾಗರ್ ಅವರನ್ನು ತಂಡಕ್ಕೆ ಇದೇ ಮೊದಲ ಬಾರಿಗೆ ಆಯ್ಕೆ ಮಾಡಲಾಗಿದೆ.

ಮೈಸೂರು ವಾರಿಯರ್ಸ್ ತಂಡದ ಮೆಂಟರ್ ಆಗಿ ನೇಮಕಗೊಂಡಿರುವ ಭಾರತ ತಂಡದ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ತಂಡವನ್ನು ಉತ್ತಮ ರೀತಿಯಲ್ಲಿ ಸಜ್ಜುಗೊಳಿಸಿದ್ದು, ಈ ಬಾರಿ ಮೈಸೂರು ವಾರಿಯರ್ಸ್ ಕಪ್ ಗೆಲ್ಲುವ ವಿಶ್ವಾಸದಲ್ಲಿದೆ.

ಇದೇ ಸಂಧರ್ಭದಲ್ಲಿ ಮಾತನಾಡಿದ ಮೈಸೂರು ವಾರಿಯರ್ಸ್ ತಂಡದ ಮೆಂಟರ್ ವೆಂಕಟೇಶ್ ಪ್ರಸಾದ್, ಈ ತಂಡದಲ್ಲಿ ಎಲ್ಲಾ ಆಟಗಾರರು ತುಂಬಾ ಪ್ರತಿಭವಂತರಿದ್ದಾರೆ. ಈ ಬಾರಿ ಎಲ್ಲಾ ಪಂದ್ಯಾಗಳಲ್ಲೂ ಉತ್ತಮ ಪ್ರದರ್ಶನ ನೀಡುವ ಭರವಸೆ ಇದೆ. ಕೆಪಿಎಲ್ ಟೂರ್ನಿಗೆ ಸಿದ್ದತೆಗಳು ತುಂಬಾ ಚೆನ್ನಾಗಿ ನಡೆಯುತ್ತಿದೆ. ನಮ್ಮ ತಂಡದ ಆಟಗಾರರು ಉತ್ತಮ ಆಟವಾಡುವ ನೀರಿಕ್ಷೆ ಇದೆ. ಮೈಸೂರಿನ ವಾರಿಯರ್ಸ್ ತಂಡದಲ್ಲಿ ಐಪಿಎಲ್ ಮತ್ತು ಕೆಪಿಎಲ್ ಪಂದ್ಯದಲ್ಲಿ ಆಡಿದ ಅನುಭವವಿರುವ ಆಟಗಾರರಿದ್ದಾರೆ. ನಾನು ಅನೇಕ ಐಪಿಎಲ್ ತಂಡಗಳಿಗೆ ತರಬೇತುದಾರನಾಗಿ ಮತ್ತು ಸಲಹೆಗಾರನಾಗಿ ಕೆಲಸ ಮಾಡಿದ್ದೇನೆ. ಈ ಅನುಭವನನ್ನು ಮೈಸೂರು ವಾರಿಯರ್ಸ್ ತಂಡಕ್ಕೆ ಧಾರೆ ಎರೆಯಲು ನನಗೆ ಸಂತೋಷವೆನಿಸುತ್ತದೆ. ಈ ತಂಡದೊಂದಿಗೆ ಕೆಪಿಎಲ್ ಪಂದ್ಯಾವಳಿಯಲ್ಲಿ ಅತ್ಯುತ್ತಮ ಫಲಿತಾಂಶ ಎದುರು ನೋಡಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದರು.

ಮೈಸೂರು ವಾರಿಯರ್ಸ್ ತಂಡದ 18 ಆಟಗಾರರು:
ಜೆ. ಸುಚಿತ್(ನಾಯಕ), ಅಮಿತ್ ವರ್ಮಾ, ಕೆ. ಗೌತಮ್, ರಾಜು ಭಟ್ಕಳ್, ಬಿ.ಎನ್ ಭರತ್, ಎಸ್.ಪಿ ಮಂಜುನಾಥ್, ಶೋಯೆಬ್ ಮ್ಯಾನೇಜರ್, ಅರ್ಜುನ್ ಹೊಯ್ಸಳ, ಕೆ.ವಿ ಸಿದ್ದಾರ್ಥ್, ಪ್ರತಿಕ್ ಜೈನ್, ವೈಶಾಖ್ ವಿಜಯ್ ಕುಮಾರ್, ಶರ್ ಶ್ರೀನಿವಾಸ್, ಮನೋಜ್ ಕೆ.ಎಚ್, ಕುಶಾಲ್ ವಾಧ್ವಾನಿ, ಲವ್ ನಿತ್ ಸಿಸೋಡಿಯಾ, ವಿನಯ್ ಸಾಗರ್, ಕಿಶನ್ ಬೆಡಾರ್, ಗೌತಮ್ ಸಾಗರ್ ತಂಡದಲ್ಲಿದ್ದಾರೆ.

See also  ಭಾರತ ವಿರುದ್ಧ ಮೊದಲ ಸಲ ಟಿ-20 ಸರಣಿ ಗೆದ್ದ ಆಸ್ಟ್ರೇಲಿಯಾ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

181

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು